ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೆ.ಜಿ. ಗೆ ರು 1.5 ದರದಲ್ಲಿ ಮೇವು: ಸಿದ್ದರಾಮಯ್ಯ

ರಾಜ್ಯದಲ್ಲಿ ಬರ ಪರಿಸ್ಥಿತಿಯಿದ್ದು ಮೇವು ಬ್ಯಾಂಕ್‌ನಲ್ಲಿ ಕೆ.ಜಿಗೆ ರು. 1.5 ದರದಲ್ಲಿ ರೈತರಿಗೆ ಮೇವು ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ...
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ಬರ ಪರಿಸ್ಥಿತಿಯಿದ್ದು  ಮೇವು ಬ್ಯಾಂಕ್‌ನಲ್ಲಿ ಕೆ.ಜಿಗೆ ರು. 1.5 ದರದಲ್ಲಿ ರೈತರಿಗೆ ಮೇವು ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಮೈಸೂರಿನಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಮೇವಿನ ದರ ಇಳಿಕೆ ಬಗ್ಗೆ ಸುತ್ತೋಲೆ ಹೊರಡಿಸಲಾಗುವುದು ಎಂದರು. ಸರ್ಕಾರವು ಕೆ.ಜಿಗೆ  6 ರು. ದರದಲ್ಲಿ ಖರೀದಿಸಿ,  3 ರುಪಾಯಿಯಂತೆ ವಿತರಿಸುತ್ತಿದೆ. ರೈತರ ಹಿತದೃಷ್ಟಿಯಿಂದ ವಿತರಣೆ ದರ ಇಳಿಕೆ ಮಾಡಲಾಗಿದೆ. ಉಚಿತವಾಗಿ ವಿತರಿಸಿದರೆ, ದುರುಪಯೋಗವಾಗುವ ಸಾಧ್ಯತೆ ಇದೆ. ಹೀಗಾಗಿ, ದರ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ), ಗ್ರಾಮ ಲೆಕ್ಕಾಧಿಕಾರಿಯಿಂದ ಪ್ರತಿ ಗ್ರಾಮದಲ್ಲಿರುವ ಜಾನುವಾರುಗಳ ಸಂಖ್ಯೆ, ಅಗತ್ಯ ಮೇವಿನ ಪ್ರಮಾಣದ ಮಾಹಿತಿ ಸಂಗ್ರಹಿಸಿ, ಅದರ ಆಧಾರದಲ್ಲಿ ಅಂದಾಜು ಪಟ್ಟಿ ಸಿದ್ಧಪಡಿಸಬೇಕು. ಹೊರರಾಜ್ಯಗಳಿಗೆ ಮೇವು ಸಾಗಣೆಯಾಗದಂತೆ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಪಂಪ್‌ಸೆಟ್‌ ಇರುವ ರೈತರಿಗೆ ಮೇವುಕಿಟ್‌ ನೀಡಿ ಮೇವು ಬೆಳೆಸಿ, ಅವರಿಂದ ಖರೀದಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com