ಸುಪ್ರೀಂ ಕೋರ್ಟ್ ಆದೇಶದ ಎಫೆಕ್ಟ್: ಮಧ್ಯ ಸಿಗದೇ ಪರದಾಟ, ಸಿಕ್ಕ ಅಂಗಡಿ ಮುಂದೆ ಭಾರಿ "ಜನಸ್ತೋಮ"

ಹೆದ್ದಾರಿಯ 500 ಮಿಟರ್​ ವ್ಯಾಪ್ತಿಯಲ್ಲಿ ಯಾವುದೇ ಬಾರ್​ ಇರಬಾರದೆಂಬ ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಮಧ್ಯ ಪ್ರಿಯರು ಪರದಾಡುತ್ತಿದ್ದು, ಸಿಕ್ಕ ಏಕೈಕ ಮಧ್ಯದಂಗಡಿ ಮುಂದೆ ಸಾಲುಗಟ್ಟಿ ಗಂಟೆಗಟ್ಟಲೆ ಕಾದು ಮಧ್ಯ ಖರೀದಿಸುತ್ತಿರುವ ಘಟನೆ ಪುತ್ತೂರಿನಲ್ಲಿ ವರದಿಯಾಗಿದೆ.
ಮಧ್ಯದಂಗಡಿ ಮುಂದೆ ಮಧ್ಯ ಪ್ರಿಯರ ಸಾಗರ
ಮಧ್ಯದಂಗಡಿ ಮುಂದೆ ಮಧ್ಯ ಪ್ರಿಯರ ಸಾಗರ

ದಕ್ಷಿಣ ಕನ್ನಡ: ಹೆದ್ದಾರಿಯ 500 ಮಿಟರ್​ ವ್ಯಾಪ್ತಿಯಲ್ಲಿ ಯಾವುದೇ ಬಾರ್​ ಇರಬಾರದೆಂಬ ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಮಧ್ಯ ಪ್ರಿಯರು ಪರದಾಡುತ್ತಿದ್ದು, ಸಿಕ್ಕ ಏಕೈಕ ಮಧ್ಯದಂಗಡಿ ಮುಂದೆ ಸಾಲುಗಟ್ಟಿ ಗಂಟೆಗಟ್ಟಲೆ  ಕಾದು ಮಧ್ಯ ಖರೀದಿಸುತ್ತಿರುವ ಘಟನೆ ಪುತ್ತೂರಿನಲ್ಲಿ ವರದಿಯಾಗಿದೆ.

ವಾಹಿನಿಯೊಂದು ವರದಿ ಮಾಡಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪುಟ್ಟ ವೈನ್ ಶಾಪ್ ಎದುರು ಈ ದೃಶ್ಯ ಕಂಡುಬಂದಿದ್ದು, ಸರತಿ ಸಾಲಲ್ಲಿ ನಿಂತು ಮಧ್ಯ ಪ್ರಿಯರು ಮಧ್ಯ ಖರೀದಿ ಮಾಡುತ್ತಿದ್ದಾರೆ. ಕೆಲವರಂತು  ಮುಂಜಾನೆಯಿಂದಲೇ ಅಂಗಡಿ ಎದುರು ಕಾದಿದ್ದು, ಮಧ್ಯ ಖರೀದಿ ಮಾಡಿದರೆ, ಇನ್ನೂ ಕೆಲವರು ಕೆಲಸ ಕಾರ್ಯ ಬಿಟ್ಟು ಅಂಗಡಿ ಮುಂದೆ ಗಂಟೆಗಟ್ಟಲೆ ಮಧ್ಯ ಖರೀದಿಗೆ ಕಾಯುತ್ತಿದ್ದಾರೆ.

ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಹೆದ್ದಾರಿಗಳಲ್ಲಿನ ಮಧ್ಯದಂಗಡಿಗಳು ಸ್ಥಗಿತವಾಗಿದ್ದು, ಪುತ್ತೂರಿನಲ್ಲಿರುವ ಏಕೈಕ ಮಧ್ಯದಂಗಡಿ ಇದು ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಇಲ್ಲಿ ನಿತ್ಯ ನೂರಾರು ಮಂದಿ  ಆಗಮಿಸಿ ಸರತಿ ಸಾಲಲ್ಲಿ ನಿಂತು ಮಧ್ಯ ಖರೀದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com