12 ಗಂಟೆಗಳಲ್ಲಿ 6 ಲಕ್ಷ ರೂ ವಂಚನೆ: ಎಟಿಎಂ ಹಣ ಕಳೆದುಕೊಂಡವರಿಂದ ದೂರು

ಬೇರೆ ಬೇರೆ ಪ್ರಕರಣಗಳಲ್ಲಿ ಕೇಲವ 12 ಗಂಟೆಗಳಲ್ಲಿ 6 ಲಕ್ಷ ರೂಪಾಯಿ ವಂಚನೆ ನಡೆದಿರುವ ಘಟನೆ ಜು.2 ರಂದು ಸಂಜೆ ನಡೆದಿದೆ.
ಎಟಿಎಂ ಸ್ಕಿಮ್ಮಿಂಗ್
ಎಟಿಎಂ ಸ್ಕಿಮ್ಮಿಂಗ್
ಬೆಂಗಳೂರು: ಬೇರೆ ಬೇರೆ ಪ್ರಕರಣಗಳಲ್ಲಿ ಕೇಲವ 12 ಗಂಟೆಗಳಲ್ಲಿ 6 ಲಕ್ಷ ರೂಪಾಯಿ ವಂಚನೆ ನಡೆದಿರುವ ಘಟನೆ ಜು.2 ರಂದು ಸಂಜೆ ನಡೆದಿದೆ. 
ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ ಕ್ಲೋನಿಂಗ್ ನಿಂದ ಹಣವನ್ನು ತೆಗೆಯಲಾಗಿದ್ದು, ಸೈಬರ್ ಪೊಲೀಸರಿಗೆ ಇಂತಹ 8 ದೂರು ಬಂದಿವೆ. ತಮಗೆ ಅರಿವಿಲ್ಲದೆಯೇ ಹಣಕಳೆದುಕೊಂಡವರ ಪೈಕಿ ಹೆಚ್ಚಿನವರು ಆರ್ ಟಿ ನಗರ, ಹುಳಿಮಾವು, ಕೊತ್ನೂರು, ಬನ್ನೇರುಘಟ್ಟದವರಾಗಿದ್ದು, ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. 
ಆರ್ ಟಿ ನಗರದ ಎಟಿಎಂ ನಲ್ಲಿ 40,000 ರೂಪಾಯಿಗಳನ್ನು ಡ್ರಾ ಮಾಡಿ ನನಗೆ ವಂಚಿಸಲಾಗಿದೆ. ಈ ಬಗ್ಗೆ ಸಂಜೆ 7 ಕ್ಕೆ ಮೆಸೇಜ್ ಬಂದಿದ್ದು, ನಿಮ್ಮ ಖಾತೆಯಿಂದ 40,000 ರೂಪಾಯಿ ತೆಗೆಯಲಾಗಿದೆ ಎಂಬ ಸಂದೇಶ ಬಂದಿತ್ತು. ತಕ್ಷಣವೇ ಎಟಿಎಂ ನ್ನು ಸ್ಥಗಿತಗೊಳಿಸುವಂತೆ (ಬ್ಲಾಕ್ ಮಾಡುವಂತೆ) ಬ್ಯಾಂಕ್ ಗೆ ಕರೆ ಮಾಡಿ ಹೇಳಿದೆ ಎಂದಿದ್ದಾರೆ ಹಣ ಕಳೆದುಕೊಂಡ ಜೇಮ್ಸ್ ಸುಂದರಂ 
ಇದೇ ರೀತಿಯಲ್ಲಿ ಪುಷ್ಪಾರಾಣಿಗೂ ವಂಚನೆ ನಡೆದಿದ್ದು, 30,000 ರೂಪಾಯಿ ಕಳೆದುಕೊಂಡಿದ್ದಾರೆ. ಮಧ್ಯರಾತ್ರಿ 12:47 ರ ವೇಳೆಗೆ 30,000 ರೂಪಾಯಿ ಹಣ ಡ್ರಾ ಮಾಡಲಾಗಿದೆ ಎಂದು ಮೊಬೈಲ್ ಗೆ ಮೆಸೇಜ್ ಬಂತು ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ದಾಖಲಿಸಿದ್ದೇನೆ ಎಂದು ಪುಷ್ಪಾರಾಣಿ ಹೇಳಿದ್ದಾರೆ. 
ಇದು ಒಳಗಿನವರದ್ದೇ ಕೈವಾಡವಾಗಿದ್ದು, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಕ್ಲೋನಿಂಗ್ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಎಲ್ಲಾ ಪ್ರಕರಣಗಳಲ್ಲಿಯೂ ಹಣ ದೋಚಿರುವ ವ್ಯಕ್ತಿ ನೇರವಾಗಿ ಎಟಿಎಂ ನಿಂದ ಹಣ ತೆಗೆದಿದ್ದಾನೆಯೇ ಹೊರತು ಅದನ್ನು ಶಾಪಿಂಗ್ ಅಥವಾ ಇನ್ನಾವುದೇ ರೀತಿಯ ಪೇಮೆಂಟ್ ಗಳಿಗೆ ಬಳಕೆ ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 
ಕಾರ್ಡ್ ಎಂಟ್ರಿ ಸ್ಲಾಟ್ ನಲ್ಲಿ ಸ್ಕಿಮ್ಮಿಂಗ್ ಡಿವೈಸ್ ಅಳವಡಿಸಿ, ಗ್ರಾಹಕರಿಗೆ ಅರಿವೇ ಇಲ್ಲದಂತೆ ಕಾರ್ಡ್ ನ ಪಿನ್ ನಂಬರ್ ಸೇರಿದಂತೆ ಎಲ್ಲಾ ಡಾಟಾ ಕದಿಯಬಹುದಾಗಿದೆ. ಈ ಮಾದರಿಯಲ್ಲಿ 6 ಲಕ್ಷ ವಂಚನೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com