ಜಿಎಸ್ ಟಿ ಗಾಗಿ 3 ವರ್ಷದಿಂದ ಪ್ರತಿವಾರ ದೆಹಲಿಗೆ ತೆರಳುತ್ತಿದ್ದ ರಾಜ್ಯ ತೆರಿಗೆ ಆಯುಕ್ತ!

ಕರ್ನಾಟಕ ರಾಜ್ಯದ ವಾಣಿಜ್ಯ ತೆರಿಗೆ ಆಯುಕ್ತ ರಿತ್ವಿಕ್ ರಂಜನಮ್ ಪಾಂಡೆ ಜಿಎಸ್ ಟಿ ತಯಾರಿಗಾಗಿ ಕಳೆದ ಮೂರು ವರ್ಷಗಳಿಂದ ದೆಹಲಿಗೆ ಪ್ರತಿ ವಾರ,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಕರ್ನಾಟಕ ರಾಜ್ಯದ ವಾಣಿಜ್ಯ ತೆರಿಗೆ ಆಯುಕ್ತ ರಿತ್ವಿಕ್ ರಂಜನಮ್ ಪಾಂಡೆ ಜಿಎಸ್ ಟಿ ತಯಾರಿಗಾಗಿ ಕಳೆದ ಮೂರು ವರ್ಷಗಳಿಂದ ದೆಹಲಿಗೆ ಪ್ರತಿ ವಾರ ಹೋಗಿ ಬರುತ್ತಿದ್ದರು.
ಕಳೆದ ವಾರ ಜಿಎಸ್ ಟಿ ಜಾರಿಯಾಗಿದೆ, ಹೀಗಿದ್ದರೂ ಪಾಂಡ್ವೆ ಅವರ ದೆಹಲಿ ಪ್ರಯಾಣ ಇನ್ನು ಮುಗಿದಿಲ್ಲ, ಮತ್ತಷ್ಟು ತಿಂಗಳು ದೆಹಲಿಗೆ ಹೋಗಿ ಬರಬೇಕಾದ ಅಗತ್ಯತೆಯಿದೆ. ಇದೊಂದು ದೊಡ್ಡ ಯಶಸ್ಸು ಎಂದು ನಗೆ ಬೀರುವ ಐಎಎಸ್ ಅಧಿಕಾರಿ ಕಳೆದ ಮೂರು ವರ್ಷಗಳಿಂದ ಪ್ರತಿವಾರ ದೆಹಲಿಗೆ ತೆರಳುತ್ತಿದ್ದ ಬಗ್ಗೆ ತಮ್ಮ ಇಬ್ಬರು ಮಕ್ಕಳಿಗೆ ವಿವರಣೆ ನೀಡಿದ್ದಾರೆ.
ಪಾಂಡೆ ಅವರು ಆರಂಭದಲ್ಲಿ ನೋಂದಣಿ ನಿಯಮಗಳ ಸಂಬಂಧ ಕೆಲಸ ಮಾಡಿದರು, ನಂತರ ಸಾರ್ವಜನಿಕ ಸ್ವತ್ತುಗಳ ಮೇಲೆ ನಿಯಮ ಹೇರಿ ಅದರ ಕಾರ್ಯ ನಿರ್ವಹಣೆ ಬಗ್ಗೆ ಫೀಡ್ ಬ್ಯಾಕ್ ಸಂಗ್ರಹ ಕೆಲಸದಲ್ಲಿ ತೊಡಗಿಸಿಕೊಂಡರು. 
ಒಂದು ಹಂತದಲ್ಲಿ ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತಿರಲಿಲ್ಲ,  ನಮಗೆ ಇದ್ದ ಕಡಿಮೆ ಅವಧಿಯಲ್ಲಿ ನಾವು ಸ್ವಲ್ಪವೂ ಸಮಯ ವ್ಯರ್ಥ ಮಾಡದೇ ಕೆಲಸ ಮಾಡಿದ್ದೇವೆ ಎಂದು ಪಾಂಡೆ ವಿವರಿಸಿದ್ದಾರೆ. ಕೆಲವೊಮ್ಮೆ ನಮಗೆ ವ್ಯಾಪಾರ ಮತ್ತು ಕೈಗಾರಿಕಾ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದೇವೇನು ಎಂಬ ಭಾವನೆ ಮೂಡುತ್ತಿತ್ತು. ದರ ನಿಗದಿ ಬಗ್ಗೆ ಗಮನ ಕೇಂದ್ರಿಕರಿಸಿದೆವು. ಪ್ರತಿಯೊಬ್ಬರು ಸಮಸ್ಯೆಗೆ ಪರಿಹಾರದ ಜೊತೆಯಲ್ಲಿಯೇ ಬರುತ್ತಿದ್ದರು. ಇದೊಂದು ಕಠಿಣವಾದ ಅಂಶವಾಗಿತ್ತು ಎಂಬ ವಿಷಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕಿದೆ ಎಂದು ಸ್ಮರಿಸಿದರು.
ಈ ವರ್ಷದ ಮದ್ಯದಲ್ಲಿ  ಶೇ. 95 ರಷ್ಟು ದರ ನಿಗದಿ ಕೆಲಸ ಮಾಡಲಾಗಿತ್ತು. ಕೊನೆಯ ಹಂತದಲ್ಲಿ ಕೆಲವೊಂದು ಬದಲಾವಣೆಗಳಾಗುತ್ತಿದ್ದವು. ಜೂನ್ 30 ರಂದು ಅಂತಿಮ ಬದಲಾವಣೆಯಾಯಿತು. ಕೆಲವೊಂದು ಪದಾರ್ಥಗಳಿಗೆ ಇನ್ನೂ ಬೆಲೆ ನಿಗದಿ ಪಡಿಸಿಲ್ಲ ಎಂದು ವಿವರಿಸಿದ್ದಾರೆ.
ವಿವಿಧ ರೀತಿಯ ಜಿಎಸ್ಟಿ ತೆರಿಗೆಗೆ ಹೊಂದಿಕೊಳ್ಳಲು ಜನರಿಗೆ ಇನ್ನೂ ಸ್ವಲ್ಪ ಸಮಯಾವಕಾಶ ಬೇಕಿದೆ. ಸ್ಟೇಷನರಿ ಸಾಮಾಗ್ರಿಗಳ ಮೇಲೆ ವೈವಿಧ್ಯವಾದ ತೆರಿಗೆ ಹಾಕಲಾಗಿದೆ. ಇರೇಸರ್, ರಬ್ಬರ್ ಗೆ ಪ್ರತ್ಯೇಕ ಪ್ರತ್ಯೆಕ ಬೆಲೆ ನಿಗದಿ ಪಡಿಸಲಾಗಿದೆ. ಜನರಿಗೆ ಜಿಎಸ್ ಟಿ ಸಂಬಂಧ ಮತ್ತಷ್ಟು ಶಿಕ್ಷಣದ ಅವಶ್ಯಕತೆಯಿದೆ, ಹಲವು ವರ್ತಕರಿಗೆ ಎಸ್ ಎಸ್ಎನ್ ಬಗ್ಗೆ ಅರಿವಿಲ್ಲ ಎಂದು ಹೇಳಿರುವ ಅವರು, ಕರ್ನಾಟಕದಲ್ಲಿ ಜಿಎಸ್ಟಿ ಗೆ ಶೇ. 96 ರಷ್ಟು ವರ್ತಕರು ನೋಂದಾಯಿಸಿಕೊಂಡಿದ್ದಾರೆ, ರಾಜ್ಯವೇ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com