ರಾಜ್ಯದಲ್ಲಿ ಡೆಂಗ್ಯೂಗೆ ಮೊದಲ ಬಲಿ: ಬೆಂಗಳೂರಲ್ಲಿ 14 ವರ್ಷದ ಬಾಲಕಿ ಸಾವು

ಮಹಾಮಾರಿ ಡೆಂಗ್ಯೂಗೆ ಬೆಂಗಳೂರಿನಲ್ಲಿ 14 ವರ್ಷದ ಬಾಲಕಿ ಬಲಿಯಾಗಿದ್ದಾಳೆ. ಪದ್ಮ ಎಂಬ ಬಾಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮಹಾಮಾರಿ ಡೆಂಗ್ಯೂಗೆ ಬೆಂಗಳೂರಿನಲ್ಲಿ 14 ವರ್ಷದ ಬಾಲಕಿ ಬಲಿಯಾಗಿದ್ದಾಳೆ. ಪದ್ಮ ಎಂಬ ಬಾಲಕಿ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ಸಾವನ್ನಪ್ಪಿದ್ದಾಳೆ.
ಶನಿವಾರ ಬೆಳಗ್ಗೆ 2 ಗಂಟೆಗೆ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದಳು. ದಾಖಲಾಗುವ ಸಮಯದಲ್ಲಿ ಬಾಲಕಿಯ ರಕ್ತದ ಒತ್ತಡ ಮತ್ತು ಪಲ್ಸ್ ರೇಟ್ ಕಡಿಮೆಯಿತ್ತು. ನಂತರ ಪರಿಕ್ಷಿಸಿದಾಗ ರಕ್ತದಲ್ಲಿ ಡೆಂಗ್ಯೂ ಸಿಂಡ್ರೋಮ್ ಇರುವುದು ಪತ್ತೆಯಾಗಿದೆ, ರಕ್ತದ ಪ್ರಮಾಣವನ್ನು ಸುಧಾರಿಸುವ ಸಲುವಾಗಿ ಆಕೆಗೆ ಬೋಲಸ್ ನೀಡಲಾಯಿತು ಎಂದು ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಸರಳ ಸಭಾಪತಿ ಹೇಳಿದ್ದಾರೆ.
ಅನೇಕ ರೀತಿಯ ಔಷಧಿ ನೀಡಿದರೂ ಆಕೆಯಲ್ಲಿ ರಕ್ತ ಕಣಗಳು ಕಡಿಮೆಯಾಗುತ್ತಿತ್ತು. ಆಕೆಗೆ ಬಿ ಟೈಪ್ ರಕ್ತ ನೀಡಲಾಯಿತು. ಆದರೆ ಶ್ವಾಸಕೋಶದಲ್ಲಿ  ದ್ರವ ಸೋರಿಕೆಯುಂಟಾಗಿ ಉಸಿರಾಟದ ತೊಂದರೆ ಆರಂಭವಾಯಿತು. ನಂತರ ಆಕೆಯನ್ನು ವೆಂಟಿಲೇಟರ್ ನಲ್ಲಿ ಇಡಲಾಯಿತು. ಬುಧವಾರ ರಾತ್ರಿ ಸುಮಾರು. 1.30 ರವೇಳೆಗೆ ಆಕೆ ಸಾವನ್ನಪ್ಪಿದಳು ಎಂದು ವೈದ್ಯರು ಹೇಳಿದ್ದಾರೆ.
ಪರಿಣಿತರ ತಂಡ ಪರಿಕ್ಷೆ ನಡೆಸಿ ವರದಿ ನೀಡಿದ ನಂತರ ಡೆಂಗ್ಯೂ ಹೌದೇ ಅಥವಾ ಅಲ್ಲವೇ ಎಂಬುದು ದೃಢ ಪಡುತ್ತದೆ ಎಂದು ನ್ಯಾಷನಲ್ ವೆಕ್ಟರ್ ಬೊರ್ನ್ ಡಿಸೀಸ್ ಕಂಟ್ರೋಲ್ ಪ್ರೋಗ್ರಾಂ ಉಪ ನಿರ್ದೇಶಕ ಡಾ. ಬಿ.ಜಿ ಪ್ರಕಾಶ್ ಕುಮಾರ್ ಹೇಳಿದ್ದಾರೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಕಳೆದ ವರ್ಷ 8 ಮಂದಿ ಡೆಂಗ್ಯೂಗೆ ಬಲಿಯಾಗಿದ್ದರು. ರಾಜ್ಯದ ಹಲವು ಭಾಗಗಳಲ್ಲಿ ಡೆಂಗ್ಯೂ ಪ್ರಕರಣಗಳ ಬಗ್ಗೆ ವರದಿಯಾಗುತ್ತಿದ್ದು, ಶನಿವಾರ ಮತ್ತು ಭಾನುವಾರಗಳಂದು ಜಿಲ್ಲಾ , ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೆಲಸ ಮಾಡುವಂತೆ ಆರೋಗ್ಯ ಇಲಾಖೆ ನಿರ್ದೇಶಕರು ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com