ಮೆಟ್ರೊ ರೈಲು ನಿರ್ವಾಹಕರಿಗೆ ತಲೆನೋವು ತಂದ ವಿಂಗಡಣೆಯ ಶಿಫ್ಟ್ ಕೆಲಸ

ಬೈಯಪ್ಪನಹಳ್ಳಿ ಮೆಟ್ರೋ ಡಿಪೋಗೆ ಸಂಬಂಧಿಸಿದ 100 ರೈಲು ನಿರ್ವಾಹಕರಿಗೆ ಸ್ಪ್ಲಿಟ್ ರೋಸ್ಟರ್...
ವಿಂಗಡಣೆಯ ಶಿಫ್ಟ್ ಕೆಲಸದಿಂದ ಸಾಕಷ್ಟು ವಿಶ್ರಾಂತಿ ಸಿಗದೆ ತೊಂದರೆ ಅನುಭವಿಸುತ್ತಿರುವ ಸಿಬ್ಬಂದಿ
ವಿಂಗಡಣೆಯ ಶಿಫ್ಟ್ ಕೆಲಸದಿಂದ ಸಾಕಷ್ಟು ವಿಶ್ರಾಂತಿ ಸಿಗದೆ ತೊಂದರೆ ಅನುಭವಿಸುತ್ತಿರುವ ಸಿಬ್ಬಂದಿ
ಬೆಂಗಳೂರು: ಬೈಯಪ್ಪನಹಳ್ಳಿ ಮೆಟ್ರೋ ಡಿಪೋಗೆ ಸಂಬಂಧಿಸಿದ 100 ರೈಲು ನಿರ್ವಾಹಕರಿಗೆ ಸ್ಪ್ಲಿಟ್ ರೋಸ್ಟರ್ ಸಿಸ್ಟಮ್ ನ್ನು ಜಾರಿಗೆ ತರಲಾಗಿದ್ದು ಇದು ಸಿಬ್ಬಂದಿಗೆ ಪ್ರಮುಖ ಸಮಸ್ಯೆಗೆ ಕಾರಣವಾಗಿದೆ.
ಬೆಳಗ್ಗೆ ಮತ್ತು ಸಾಯಂಕಾಲ 8 ಗಂಟೆಗಳ ಶಿಫ್ಟ್ ಕೆಲಸದಿಂದಾಗಿ ಸಿಬ್ಬಂದಿಗಳಿಗೆ ವಿಶ್ರಾಂತಿಗಳಿಗೆ ಸಮಯ ಸಾಕಾಗುತ್ತಿಲ್ಲ ಹಾಗೂ ಬೇರೆ ಕೆಲಸಗಳಿಗೆ ಅವರಿಗೆ ದಿನವಿಡೀ ಸಮಯ ಹೊಂದಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಪರ್ಪಲ್ ಲೈನ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕಳೆದ ಫೆಬ್ರವರಿಯಲ್ಲಿ ಸ್ಪ್ಲಿಟ್ ರೋಸ್ಟರ್ ಸಿಸ್ಟಮ್ ನ್ನು ಜಾರಿಗೆ ತರಲಾಯಿತು. ನಿರ್ವಾಹಕರಿಗೆ ವಿವಿಧ ಶಿಫ್ಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಯಿತು. ಅದು ಹೇಗೆಂದರೆ ನಿರ್ವಾಹಕರು ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮತ್ತು ಸಾಯಂಕಾಲ 4 ಗಂಟೆಯಿಂದ 8 ಗಂಟೆಯವರೆಗೆ ಕೆಲಸ ಮಾಡಬೇಕು. ಅಥವಾ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಅಥವಾ ಸಾಯಂಕಾಲ 4 ಗಂಟೆಯಿಂದ 8 ಗಂಟೆಯವರೆಗೆ ಅಥವಾ ಬೆಳಗ್ಗೆ 5 ಗಂಟೆಯಿಂದ 8 ಗಂಟೆಯವರೆಗೆ ಮತ್ತು ಸಾಯಂಕಾಲ 4 ಗಂಟೆಯಿಂದ 9 ಗಂಟೆಯವರೆಗೆ ಇರುತ್ತದೆ. ಈ ಶಿಫ್ಟ್ ಅವಧಿಯನ್ನು ಸಿಬ್ಬಂದಿ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯೊಳಗೆ ಯಾವಾಗ ಬೇಕಾದರೂ ಮಾಡಬಹುದು. 
ಇದರಲ್ಲಿ ರೈಲು ನಿರ್ವಾಹಕರಿಗೆ ಯಾವುದೇ ವಿನಾಯ್ತಿಯಿಲ್ಲ. ಆದರೆ ಇದು ಸಿಬ್ಬಂದಿಗೆ ಅನುಕೂಲವಾಗುತ್ತಿಲ್ಲವಂತೆ. 
ಆರಂಭದ ಹಂತದಲ್ಲಿ ಇದನ್ನು ಪ್ರಾಯೋಗಿಕ ಮಾದರಿಯಲ್ಲಿ ಜಾರಿಗೆ ತಂದು ಸ್ವಲ್ಪ ಸಮಯದವರೆಗೆ ಇರುತ್ತದೆ ಎಂದು ಹೇಳಲಾಗಿತ್ತು. ಆದರೆ ಇದು ಜಾರಿಗೆ ಬಂದು 5 ತಿಂಗಳುಗಳು ಕಳೆದಿವೆ. ಅದನ್ನು ತೆಗೆಯುವ ಬಗ್ಗೆ ಯಾವುದೇ ಸೂಚನೆ ಕಂಡುಬಂದಿಲ್ಲ. ಆರಂಭದಲ್ಲಿ ಈ ಪರ್ಪಲ್ ಲೈನ್ ನ ರೈಲಿಗೆ 19 ಮಂದಿ ನಿರ್ವಾಹಕರಿದ್ದರು. ಅವರ ಸಂಖ್ಯೆಯನ್ನು ಇದೀಗ ಕಡಿಮೆ ಮಾಡಲಾಗಿದೆ.
ವಾರಾಂತ್ಯಗಳಲ್ಲಿ ಪ್ರತಿ ಶಿಫ್ಟ್ ನಲ್ಲಿ 7 ಮಂದಿ ನಿರ್ವಾಹಕರನ್ನು ಮತ್ತು ವಾರಾಗಳಲ್ಲಿ 3 ಮಂದಿಯನ್ನು ನಿಯೋಜಿಸಲಾಗುತ್ತದೆ. ಆದರೆ ಈ ರೋಸ್ಟರ್ ವ್ಯವಸ್ಥೆ ತಮಗೆ ಅನನುಕೂಲವಾಗಿದೆ ಎಂದು ಸಿಬ್ಬಂದಿ ಆರೋಪಿಸುತ್ತಾರೆ. ಈ ಬಗ್ಗೆ ಕಾರ್ಮಿಕ ಆಯುಕ್ತರಿಗೆ ದೂರು ಸಹ ನೀಡಿದ್ದಾರೆ.
ಪೀಣ್ಯ ಡಿಪೊದ ಗ್ರೀನ್ ಲೈನ್ ನ 110 ಸಿಬ್ಬಂದಿಗೆ ಈ ವ್ಯವಸ್ಥೆಯಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com