ಜೈಲು ಕರ್ಮಕಾಂಡದ ಬಗ್ಗೆ ರೂಪಾಗೆ ಮಾಹಿತಿ ನೀಡಿದ್ದಕ್ಕೆ ಮಾರಣಾಂತಿಕ ಹಲ್ಲೆ: ಕೈದಿಗಳ ದೂರು

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿದ್ದ ಅವ್ಯವಹಾರದ ಬಗ್ಗೆ ಮಾಹಿತಿ ನೀಡಿದ್ದ ಕೈದಿಗಳ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದೆ...
ರೂಪಾ
ರೂಪಾ
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿದ್ದ ಅವ್ಯವಹಾರದ ಬಗ್ಗೆ ಮಾಹಿತಿ ನೀಡಿದ್ದ ಕೈದಿಗಳ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದೆ. ಬಂಧೀಖಾನೆ ಮಾಜಿ ಡಿಐಜಿ ರೂಪಾ ಅವರಿಗೆ ಅಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ವಿವರ ಬಹಿರಂಗ ಪಡಿಸಿದ್ದಕ್ಕೆ ಕೈದಿಗಳಿಗೆ ಥಳಿಸಲಾಗಿದೆ.
ಶನಿವಾರ ರೂಪಾ ಅವರ ಭೇಟಿಯ ವೇಳೆ ಅಲ್ಲಿ ನಡೆಯುತ್ತಿದ್ದ ಅವ್ಯವಹಾರಗಳ ಬಗ್ಗೆ ದೂರು ನೀಡಲಾಗಿತ್ತು. ಪೆರೋಲ್ ಮೇಲೆ ಬೇಕಾಬಿಟ್ಟಿ ಬಿಡುಗಡೆ, ಕೆಲವೇ ಕೆಲವು ಕೈದಿಗಳಿಗೆ ಫೇವರ್ ಮಾಡುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ರೂಪಾ ಅವರ ಬಳಿ ದೂರು ನೀಡಲಾಗಿತ್ತು. ಈ ವೇಳೆ ಕೆಲವು ಕೈದಿಗಳು ಜೈಲು ಅಧಿಕಾರಿಗಳ ಪರ ಸಮರ್ಥನೆ ಮಾಡಿಕೊಳ್ಳಲು ಪ್ರತಿಭಟನೆಗಿಳಿದರು. 
ರೂಪಾ ಅವರು ಅಲ್ಲಿಂದ ಹೊರಟ ನಂತರ, ಜೈಲು ಅಧಿಕಾರಿಗಳ ಬೆಂಬಲಿದ ಕೈದಿಗಳು ಗಲಾಟೆ ಆರಂಭಿಸಿ ರೂಪಾ ಅವರಿಗೆ ಮಾಹಿತಿ ನೀಡಿದ್ದ ಕೈದಿಗಳ ಮೇಲೆ ಸುಮಾರು 6 ಗಂಟೆ ಮತ್ತು ರಾತ್ರಿ 8 ಗಂಟೆ ವೇಳೆಯಲ್ಲಿ ಹಲ್ಲೆ ನಡೆಸಿದ್ದಾರೆ, ರೂಪಾ ಅವರಿಗೆ ದೂರು ನೀಡಿದ್ದ ಕೈದಿಗಳನ್ನ ಪ್ರತ್ಯೇಕ ಕೋಣೆಯಲ್ಲಿ ಹಾಕಲಾಗಿತ್ತು.  ಬೆಳಗ್ಗೆ 1.30ರ ವೇಳೆಗೆ ಹ್ಯಾಂಡ್ ಕಪ್ ಹಾಕಿ ನಮ್ಮನ್ನು ಹೊರಗಡೆ ಕರೆತರಲಾಯಿತು. ಮಧ್ಯಸೇವಿಸಿದ್ದ ಅಧಿಕಾರಿಗಳು ನಮ್ಮನ್ನು ಮನ ಬಂದಂತೆ ಥಳಿಸಿದರು, ನಮ್ ಗುಪ್ತಾಂಗಕ್ಕೆ ಕಾಲಿನಿಂದ ಒದ್ದು, ಕೆಟ್ಟ ಭಾಷೆಯಲ್ಲಿ ನಿಂದಿಸಿದರು ಎಂದು ಪರಪ್ಪನ ಅಗ್ರಹಾರ ಜೈಲಿನಿಂದ ಸ್ಥಳಾಂತರಗೊಂಡಿರುವ ಅನಾಮಧೇಯ ಕೈದಿಯೊಬ್ಬ 'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ 'ಗೆ  ಮಾಹಿತಿ ನೀಡಿದ್ದಾನೆ.
ನಂತರ ಕೈದಿಗಳನ್ನು ವಿಂಗಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿರುವ ಕೇಂದ್ರ ಕಾರಾಗೃಹಗಳಿಗೆ ಶಿಫ್ಟ್ ಮಾಡಲಾಗಿದೆ, ಅಲ್ಲಿನ ಜೈಲಿನಲ್ಲಿ ಭಯದಿಂದ ಬದುಕುತ್ತಿರುವ ಕೈದಿಗಳು ವಾಪಸ್ ಬೆಂಗಳೂರಿಗೆ ಕರೆ ತರುವಂತೆ ಮನವಿ ಮಾಡಿದ್ದಾರೆ, ಇಲ್ಲಿ ನಮೆಗ ಯಾರು ಗೊತ್ತಿಲ್ಲ, ವಿಷಯ ತಿಳಿದಿದ್ದ ಕೆಲವರು ನೋವನಿಂದ ಬಳಲುತ್ತಿರುವ ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಕೈದಿಯೊಬ್ಬ ತಿಳಿಸಿದ್ದಾನೆ.
ನಮ್ಮ ಕುಟುಂಬದ ಸದಸ್ಯರು ನಮ್ಮನ್ನು ಭೇಟಿ ಮಾಡಲು ಅನುಕೂಲವಾಗುತ್ತದೆ. ಹೀಗಾಗಿ ನಮ್ಮನ್ನು ವಾಪಸ್ ಬೆಂಗಳೂರಿಗೆ ಕಳುಹಿಸುವಂತೆ ಕೈದಿಗಳು ಮನವಿ ಮಾಡಿದ್ದಾರೆ. ನನ್ನ ಗಂಡನನ್ನು ನೋಡಲು ಬೆಳಗ್ಗೆ 4 ಗಂಟೆಗೆ ಬಳ್ಳಾರಿ ಜೈಲಿಗೆ ಬಂದಿದ್ದೇನೆ, 16 ವರ್ಷಗಳಿಂದ ನನ್ನ ಪತಿ ಜೈಲಿನಲ್ಲಿದ್ದಾರೆ, ಅವ್ಯವಹಾರ ಪ್ರಶ್ನಿಸಿದ್ದಕ್ಕೆ ನನ್ನ ಪತಿ ಮೇಲೆ ಹಲ್ಲೆ ಮಾಡಲಾಗಿದೆ, ಎಂದು ರಾಮಮೂರ್ತಿ ಎಂಬಾತನ ಪತ್ನಿ ಅನಿತಾ ಹೇಳಿದ್ದಾರೆ.
ಶನಿವಾರ ರಾಮಮೂರ್ತಿಯನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಕೈದಿಗಳು ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದರು ಹೀಗಾಗಿ ಅವರನ್ನ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಕೃಷ್ಣ ಕುಮಾರ್ ಡಿಜಿಪಿ ಅವರಿಗೆ ವರದಿ ನೀಡಿದ್ದಾರೆ, ಹೀಗಾಗಿ ನನಗೆ ಕೃಷ್ಣ ಕುಮಾರ್ ಅವರ ಭಯ ಕಾಡುತ್ತಿದೆ ಎಂದು ಹೇಳಿದ್ದಾನೆ.
24 ದಿವಸಗಳಲ್ಲಿ ನಡೆದ ಘಟನಾವಳಿಗಳು
ಜೂನ್ 23 : ಬಂಧೀಖಾನೆ ಡಿಐಜಿಯಾಗಿ ರೂಪಾ ಅಧಿಕಾರ ಸ್ವೀಕಾರ
ಜುಲೈ 10:  ಪರಪ್ಪನ ಅಗ್ರಹಾರ ಜೈಲಿಗೆ ರೂಪಾ ಭೇಟಿ, ಅಲ್ಲಿ ನಡೆಯುತ್ತಿದ್ದ ಅವ್ಯವಹಾರ ಹಾಗೂ ಕೆಲ ಕೈದಿಗಳಿಗೆ ನೀಡುತ್ತಿದ್ದ ವಿಶೇಷ ಸೌಲಭ್ಯದ ಕುರಿತು ಜೈಲಿನ ಡೈರಿಯಲ್ಲಿ ಉಲ್ಲೇಖ
ಜುಲೈ11: ಜೈಲಿಗೆ ಭೇಟಿ ನೀಡಿದ ಸಂಬಂಧ ಡಿಜಿಪಿ ಸತ್ಯನಾರಾಯಣರಾವ್ ರಿಂದ ರೂಪಾ ಗೆ ಸಮನ್ಸ್ ಜಾರಿ
ಜುಲೈ12:  ಡಿಜಿಪಿ ಸತ್ಯನಾರಾಯಣ ರಾವ್ ಸೇರಿದಂತೆ ಜೈಲು ಅಧಿಕಾರಿಗಳ ವಿರುದ್ಧ ಹಲವು ಆರೋಪಗಳುಳ್ಳು ವರದಿ ಸಲ್ಲಿಸಿದ ರೂಪಾ
ಜುಲೈ12: ರೂಪಾ ನೀಡಿದ್ದ ಐದು ಪುಟಗಳ ವರದಿ ಮಾಧ್ಯಮಗಳಿಗೆ ಸೋರಿಕೆ, ರೂಪಾ ಆರೋಪ ನಿರಾಧಾರ ಎಂದು ಸತ್ಯನಾರಾಯಣರಾವ್ ಹೇಳಿಕೆ
ಜುಲೈ13: ವರದಿ ಸಂಬಂಧ ಉನ್ನತ ಮಟ್ಟದ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ, ಶಿಸ್ತು ಉಲ್ಲಂಘಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಕ್ಕೆ ರೂಪಾ ಗೆ ನೊಟೀಸ್
ಜುಲೈ15: ಮತ್ತೆ ಕೇಂದ್ರ ಕಾರಾಗೃಹಕ್ಕೆ ರೂಪಾ ಭೇಟಿ, ಕಿರಿಯ ಅಧಿಕಾರಿಗಳ ಜೊತೆ ಚರ್ಚೆ. ಬ್ಯಾರಕ್ ಮತ್ತು ದಾಖಲೆಗಳ ಪರಿಶೀಲನೆ, ಕೈದಿಗಳಲ್ಲಿ ಎರಡು ಗುಂಪುಗಳಾಗಿ ಜೈಲಿನ ಅವರಣದಲ್ಲೇ ಪ್ರತಿಭಟನೆ.
ಜುಲೈ 16: ಮೊದಲ ವರದಿ ಸಲ್ಲಿಕೆ ಸಂಬಂಧ ಕ್ರಮ ಕೈಗೊಳ್ಳದ ಡಿಜಿಪಿ ವಿರುದ್ಧ ಪ್ರಶ್ನಿಸಿ ರೂಪಾ ಎರಡನೇ ವರದಿ ಸಲ್ಲಿಕೆ
ಜುಲೈ 17: ರೂಪಾ ಮತ್ತು ಸತ್ಯನಾರಾಯಣ ರಾವ್ ಎತ್ತಂಗಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com