ಮೈಸೂರು: ಮನೆ ಮಹಡಿಯ ಮೇಲೆ ಗಾಂಜಾ ಬೆಳೆಸಿ ಮಾರಾಟ ಮಾಡುತ್ತಿದ್ದ ಸಿಎ ಬಂಧನ

ಮನೆಯ ಮಹಡಿಯ ಮೇಲೆ ಗಾಂಜಾ ಗಿಡ ಬೆಳೆಸಿದ್ದ 62 ವರ್ಷದ ಚಾರ್ಟೆಡ್ ಅಕೌಂಟೆಂಟ್‌ ನ್ನು ಸರಸ್ವತಿಪುರಂ ಪೊಲೀಸರು ...
ಜಗನಾಥನ್ ಬೆಳೆಸಿದ್ದ ಗಾಂಜಾ ಗಿಡಗಳು
ಜಗನಾಥನ್ ಬೆಳೆಸಿದ್ದ ಗಾಂಜಾ ಗಿಡಗಳು
ಮೈಸೂರು: ಮನೆಯ ಮಹಡಿಯ ಮೇಲೆ ಗಾಂಜಾ ಗಿಡ ಬೆಳೆಸಿದ್ದ  62 ವರ್ಷದ ಚಾರ್ಟೆಡ್ ಅಕೌಂಟೆಂಟ್‌ ನ್ನು ಸರಸ್ವತಿಪುರಂ ಪೊಲೀಸರು ಬಂಧಿಸಿದ್ದಾರೆ.
ಕೆ.ಜಗನಾಥನ್ ಬಂಧಿತ ಆರೋಪಿ. ಕೆ.ಜಗನಾಥನ್ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಡ್ ಆಗಿ ಬೋಗಾದಿಯ 2ನೇ ಹಂತದ ಮನೆಯಲ್ಲಿ ಕೆ.ಜೆ ಅಂಡ್ ಅಸೋಸಿಯೆಟ್ಸ್ ಆಫೀಸ್ ತೆರೆದು ಕೆಲಸ ಮಾಡುತ್ತಿದ್ದರು. ಬಂಧಿತ ಆರೋಪಿಯಿಂದ ನಾಲ್ಕೂವರೆ ಕೆಜಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ.
1996ರಲ್ಲಿ ಪತ್ನಿಯಿಂದ ವಿಚ್ಛೇದನ ಪಡೆದಿರುವ ಇವರು ಸ್ವಂತ ಮನೆಯ ಕಾಂಪೌಂಡ್ ಪಕ್ಕ ಹಾಗೂ ಮನೆಯ ಮೇಲೆ ಗಾಂಜಾ ಗಿಡಗಳನ್ನ ಬೆಳೆದಿದ್ದರು. ಈತನಿಗೆ ಮಕ್ಕಳು ಇರಲಿಲ್ಲ, ಮನೆಯಲ್ಲಿ ಒಬ್ಬನೇ ವಾಸಿಸುತ್ತಿದ್ದ, ಅದನ್ನು ಪಕ್ಕದಲ್ಲಿದ್ದ ಖಾಸಗಿ ಕಾಲೇಜಿನ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. 
ಖಚಿತ ಮಾಹಿತಿ ಪಡೆದ ಸರಸ್ವತಿಪುರಂ ಪೊಲೀಸರು ನಿನ್ನೆ ರಾತ್ರಿ ಈ ಮನೆಯ ಮೇಲೆ ದಾಳಿ ಮಾಡಿದಾಗ 18 ಗಾಂಜಾ ಗಿಡಗಳು, ಸೇದುವ ಹುಕ್ಕಾ ಪಾಟ್‌ಗಳು ಹಾಗೂ ಪರವಾನಿಗೆ ಪಡೆಯದ ಒಂದು ಏರ್ ಗನ್ ಅನ್ನು ವಶಪಡಿಸಿಕೊಂಡಿದ್ದಾರೆ. 
ಪೊಲೀಸರ ದಾಳಿ ನಡೆಸಿದ ವೇಳೆ ಮನೆಯಲ್ಲಿ ಯಾವುದೇ ಗಿರಾಕಿಗಳು ಇರಲಿಲ್ಲ. ಆರೋಪಿ ಪೊಲೀಸರು ನಡೆಸಿದ ವಿಚಾರಣೆ ವೇಳೆ ಗಾಂಜಾ ಬೆಳೆದು ಅದನ್ನ ವಿದ್ಯಾರ್ಥಿಗಳಿಗೆ ಹಾಗೂ ಮೈಸೂರಿಗೆ ಬರುವ ವಿದೇಶಿಗರಿಗೆ ಹಾಗೂ ಹೊರ ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯವರ್ತಿಗಳ ಮೂಲಕ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.  ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com