ಬೆಂಗಳೂರು: ಕೆಲಸದಿಂದ ವಜಾಗೊಳಿಸುವ ಐಟಿ ಕಂಪೆನಿಗಳ ವಿರುದ್ಧ ಪ್ರತಿಭಟನೆ

ಐಟಿ ವಲಯದಲ್ಲಿ ಇತ್ತೀಚೆಗೆ ಉದ್ಯೋಗಿಗಳನ್ನು ಸೇವೆಯಿಂದ ವಜಾ ಮಾಡುವುದನ್ನು ವಿರೋಧಿಸಿ ನಾಳೆ ಮಾಹಿತಿ ತಂತ್ರಜ್ಞಾನ ನೌಕರರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಐಟಿ ವಲಯದಲ್ಲಿ ಇತ್ತೀಚೆಗೆ ಉದ್ಯೋಗಿಗಳನ್ನು ಸೇವೆಯಿಂದ ವಜಾ ಮಾಡುವುದನ್ನು ವಿರೋಧಿಸಿ ನಾಳೆ ಮಾಹಿತಿ ತಂತ್ರಜ್ಞಾನ ನೌಕರರ ಒಕ್ಕೂಟದ ಸುಮಾರು 3,000 ಸದಸ್ಯರು ಪ್ರತಿಭಟನೆ ನಡೆಸಲಿದ್ದಾರೆ.
ಈ ಕುರಿತು ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ್ದ ಒಕ್ಕೂಟದ ಅಧ್ಯಕ್ಷ ಎ.ಸಿ.ಕುಮಾರಸ್ವಾಮಿ, ನಾಳೆ ಬೆಳಗ್ಗೆ 10 ಗಂಟೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿದ್ದು, ಐಟಿ ಕಂಪೆನಿಗಳು ನೌಕರರನ್ನು ವಜಾಗೊಳಿಸುವುದನ್ನು ವಿರೋಧಿಸಿ ಮತ್ತು ಉದ್ಯೋಗ ಭದ್ರತೆಯಲ್ಲಿ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಲಿದ್ದೇವೆ ಎಂದು ಹೇಳಿದರು.
 ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಸುಮಾರು 56,000 ನೌಕರರನ್ನು ಮೊದಲೇ ನೊಟೀಸ್ ನೀಡದೆ ಏಕಾಏಕಿ ಕೆಲಸದಿಂದ ವಜಾಗೊಳಿಸಲಾಗಿದೆ. ಅಂತವರಿಗೆ ಜೀವನ ನಡೆಸಲು ಕಷ್ಟವಾಗಿದೆ. ಹೀಗೆ ಕೆಲಸದಿಂದ ವಜಾಗೊಳಿಸಿದ ನೌಕರರಿಗೆ ರಾಜ್ಯ ಸರ್ಕಾರ 6 ತಿಂಗಳ ವೇತನ ನೀಡಬೇಕೆಂದು ಒಕ್ಕೂಟದ ಸದಸ್ಯರು ಒತ್ತಾಯಿಸಿದ್ದಾರೆ. 
ಪ್ರತಿಭಟನೆಯಲ್ಲಿ ಭಾಗಿಯಾದವರನ್ನು ನಾಸ್ಕಾಂ ಕಪ್ಪು ಪಟ್ಟಿಯಲ್ಲಿರಿಸಿರುವುದರಿಂದ ಬೇರೆ ಕಡೆ ಅವರಿಗೆ ಉದ್ಯೋಗ ಸಿಗಲು ಕಷ್ಟವಾಗುತ್ತಿದೆ. ಸೇವಾ ಒಪ್ಪಂದವನ್ನು ಕಂಪೆನಿಗಳು ಉಲ್ಲಂಘಿಸುತ್ತವೆ. ನಿಗಧಿತ ಅವಧಿಗೆ ನೌಕರರನ್ನು ಕೆಲಸಕ್ಕೆ ನೇಮಿಸಿಕೊಂಡರೆ ಕಾರ್ಮಿಕ ಸಚಿವಾಲಯದಿಂದ ಕಡ್ಡಾಯವಾಗಿ ಅನುಮತಿ ತೆಗೆದುಕೊಳ್ಳಬೇಕು. ಅದನ್ನು ಕೂಡ ಕಂಪೆನಿಗಳು ಮಾಡಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com