ಬಿಐಎಎಲ್ ನಿಂದ ಹೊರನಡೆಯಲಿರುವ ಜಿವಿಕೆ: ಶೇ.10 ರಷ್ಟು ಪಾಲು ಮಾರಾಟ

ಹೈದರಾಬಾದ್ ಮೂಲದ ಜಿವಿಕೆ ಪವರ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರನಡೆಯಲಿದ್ದು, ತನ್ನ ಶೇ.10 ರಷ್ಟು ಪಾಲನ್ನು ಮಾರಾಟ ಮಾಡುವುದಾಗಿ ಘೋಷಿಸಿದೆ.
ಬಿಐಎಎಲ್
ಬಿಐಎಎಲ್
ಬೆಂಗಳೂರು: ಹೈದರಾಬಾದ್ ಮೂಲದ ಜಿವಿಕೆ ಪವರ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರನಡೆಯಲಿದ್ದು, ತನ್ನ ಶೇ.10 ರಷ್ಟು ಪಾಲನ್ನು ಮಾರಾಟ ಮಾಡುವುದಾಗಿ ಘೋಷಿಸಿದೆ. 
ಫೇರ್ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಕಾರ್ಪೊರೇಶನ್ ಗೆ ಶೇ.10 ರಷ್ಟು ಪಾಲನ್ನು 1,290 ಕೋಟಿಗಳಿಗೆ ಮಾರಾಟ ಮಾಡುವುದಾಗಿ ಜಿವಿಕೆ ಘೋಷಿಸಿದೆ. ಜುಲೈ ನಲ್ಲಿ ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಬಿಐಎಎಲ್ ನ ಸಹ ಅಧ್ಯಕ್ಷರಾಗಿರುವ ಜಿವಿಕೆ ಗ್ರೂಪ್ ಅಧ್ಯಕ್ಷ ಜಿವಿ ಕೃಷ್ಣ ರೆಡ್ಡಿ ಹಾಗೂ ಬಿಐಎಎಲ್ ನ ಎಂಡಿ ಆಗಿರುವ ಜಿವಿಕೆ ಗ್ರೂಪ್ ನ ಉಪಾಧ್ಯಕ್ಷ ಜಿವಿ ಸಂಜೀವ್ ರೆಡ್ಡಿ ಬಿಐಎಲ್ ಗೆ ಸಂಬಂಧಿಸಿದ ತಮ್ಮ ಸ್ಥಾನಗಳಿಂದ ಕೆಳಗಿಳಿಯಲಿದ್ದಾರೆ. 
ಬಿಐಎಎಲ್ ಪಾಲನ್ನು ಮಾರಾಟ ಮಾಡಿದ ನಂತರ ಜಿವಿಕೆ ಸಂಸ್ಥೆ ತನ್ನ ಮುಂಬೈ ನ ಏರ್ ಪೋರ್ಟ್ ನ ಪಾಲುದಾರಿಕೆ ಮೇಲೆ ಹೆಚ್ಚಿನ ಗಮನ ಹರಿಸಲಿದೆ. 2017  ರಲ್ಲಿ ( 2016 ರ ಮಾರ್ಚ್ ನಲ್ಲಿ ಪ್ರಾರಂಭವಾದ ಡೀಲ್) ಫೇರ್ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಕಾರ್ಪೊರೇಶನ್ ಗೆ ಶೇ.33 ರಷ್ಟು ಪಾಲನ್ನು ಮಾರಾಟ ಮಾಡಿ ಶೇ.10 ರಷ್ಟನ್ನು ಉಳಿಸಿಕೊಂಡಿತ್ತು. ಸಂಸ್ಥೆಗೆ ಉಂಟಾಗುತ್ತಿದ್ದ ರೂ. 2,000 ಕೋಟಿ ರೂ ಮೊತ್ತದ ಹೆಚ್ಚುವರಿ ಹೊರೆಯನ್ನು ತಗ್ಗಿಸಲು ಜಿವಿಕೆ ಸಂಸ್ಥೆ ಈ ಕ್ರಮ ಕೈಗೊಂಡಿತ್ತು. ಈಗ ಶೇ.10 ರಷ್ಟು ಪಾಲುದಾರಿಕೆಯನ್ನು ಜಿವಿಕೆಯಿಂದ ಪಡೆಯಲಿರುವ ಫೇರ್ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಕಾರ್ಪೊರೇಶನ್ ಬಿಐಎಎಲ್ ನಲ್ಲಿ ಅತಿ ಹೆಚ್ಚು ಪಾಲನ್ನು ಹೊಂದಿರಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com