ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ 4 ತಿಂಗಳ ಗರ್ಭಿಣಿ? ಮೈಸೂರು ಅರಮನೆಯಲ್ಲಿ ಸಂಭ್ರಮ

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಂದೆಯಾಗುವ ಸಂಭ್ರಮದಲ್ಲಿದ್ದಾರೆ. ರಾಜವಂಶಸ್ಥ ಯದುವೀರ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ..
ತ್ರಿಷಿಕಾ ಕುಮಾರಿ
ತ್ರಿಷಿಕಾ ಕುಮಾರಿ
Updated on
ಮೈಸೂರು: ಮೈಸೂರು ಅರಮನೆಯಿಂದ ಶೀಘ್ರವೇ ಸಿಹಿಸುದ್ದಿ ಹೊರಬೀಳೋ ಸಾಧ್ಯತೆಯಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಂದೆಯಾಗುವ ಸಂಭ್ರಮದಲ್ಲಿದ್ದಾರೆ.
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ 4 ತಿಂಗಳ ಗರ್ಭಿಣಿ ಎಂದು ಮಾಧ್ಯಮ ವರದಿ ಮಾಡಿದೆ.
ಪ್ರಮೋದಾದೇವಿ ಒಡೆಯರ್‌ ಅವರ ದತ್ತುಪುತ್ರನಾಗಿರುವ ಯಧುವೀರ್  ಅವರ ಪತ್ನಿ ತ್ರಿಷಿಕಾ ಗರ್ಭಿಣಿಯಾಗಿರುವುದು  ರಾಜಮನೆತನದ ಸಂಭ್ರಮಕ್ಕೆ ಕಾರಣವಾಗಿದೆ.
ಶ್ರೀರಂಗಪಟ್ಟಣದ ರಾಜ ಶ್ರೀರಂಗರಾಯನ ಪತ್ನಿ ಅಲಮೇಲಮ್ಮನ ಶಾಪದಿಂದಾಗಿ ಒಡೆಯರ್‌ ವಂಶದ ಅರಸರಿಗೆ ಮಕ್ಕಳಾಗುತ್ತಿರಲಿಲ್ಲ ಎಂಬ ಪ್ರತೀತಿಯಿತ್ತು. ಆದರೆ ಈಗ ಒಡೆಯರ್ ಕುಟುಂಬದವರು ಮಕ್ಕಳ ಭಾಗ್ಯ ಕಾಣುವಂತಾಗಿದೆ.
ಮೈಸೂರು ರಾಜಮನೆತನದ ಉತ್ತರಾಧಿಕಾರಿಗೆ ಯಾವುದೇ ಕಾನೂನುಬದ್ಧ ಸ್ಥಾನವಿಲ್ಲ, ಹೀಗಿದ್ದರೂ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಜನತೆ ಒಡೆಯರ್ ಕುಟುಂಬವನ್ನು ಅಪಾರವಾಗಿ ಗೌರವಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com