ಬೆಂಗಳೂರು: ಒಂದೇ ವೇದಿಕೆಯಲ್ಲಿ ವಿಶ್ವದ ಹಿರಿಯ ಯೋಗ ಶಿಕ್ಷಕಿ ಮತ್ತು ಭಾರತದ ಅತಿ ಹಿರಿಯ ಯೋಗ ಗುರು!

ಭಾರತ ಸೇರಿದಂದೆ ವಿಶ್ವದೆಲ್ಲಡೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ನಗರದಲ್ಲಿಂದು ನಡೆದ ಯೋಗ ದಿನ ಅತ್ಯಂತ ವಿಶೇಷವಾಗಿತ್ತು...
ಬೆಂಗಳೂರು: ಒಂದೇ ವೇದಿಕೆಯಲ್ಲಿ ವಿಶ್ವ, ಭಾರತದ ಅತಿ ಹಿರಿಯ ಯೋಗ ಗುರುಗಳು!
ಬೆಂಗಳೂರು: ಒಂದೇ ವೇದಿಕೆಯಲ್ಲಿ ವಿಶ್ವ, ಭಾರತದ ಅತಿ ಹಿರಿಯ ಯೋಗ ಗುರುಗಳು!
ಬೆಂಗಳೂರು: ಭಾರತ ಸೇರಿದಂದೆ ವಿಶ್ವದೆಲ್ಲಡೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ನಗರದಲ್ಲಿಂದು ನಡೆದ ಯೋಗ ದಿನ ಅತ್ಯಂತ ವಿಶೇಷವಾಗಿತ್ತು. 
ನಗರದ ಕಂಠೀರವ ಸ್ಟೇಡಿಯಂನಲ್ಲಿ ಶ್ವಾಸಗುರು ವಚನಾನಂದ ಶ್ರೀಗಳ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ವಿಶ್ವ ಯೋಗ ಗುರು ಹಾಗೂ ಭಾರತದ ಅತಿ ಹಿರಿಯ ಯೋಗ ಗುರುಗಳು ಯೋಗ ಪ್ರದರ್ಶನ ಮಾಡಿದರು. 
98 ವರ್ಷದ ವಿಶ್ವ ಹಿರಿಯ ಯೋಗ ಮಾತೆಯೆಂದೇ ಖ್ಯಾತಿ ಗಳಿಸಿರುವ ನ್ಯೂಯಾರ್ಕ್ ನ ತಾವೋ ಪೋರ್ಚಾನ್ ಲಿಂಚ್ ಮತ್ತು ಭಾರತದ ಹಿರಿಯ ಯೋಗ ಗುರು ಅಮ್ಮಾ ನಾನಂಮ್ಮಾಳ್ ಅವರಿಂದ ಯೋಗಭ್ಯಾಸ ನಡೆಯಿತು. 
ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಸಿಬ್ಬಂದಿಗಳೂ ಕೂಡ ಯೋಗಾಭ್ಯಾಸದಲ್ಲಿ ಭಾಗಿಯಾಗಿ ಯೋಗ ಪ್ರದರ್ಶನದ ಮೆರುಗು ಮತ್ತಷ್ಟು ಹೆಚ್ಚಾಗುವಂತೆ ಮಾಡಿದರು. ಯೋಗ ದಿನಾಚರಣೆ ಹಿನ್ನಲೆಯಲ್ಲಿ ಕಂಠೀರವ ಸ್ಟೇಡಿಯಂನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. 
ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ, ಕೇಂದ್ರ ಸಚಿವ ಅನಂತ್ ಕುಮಾರ್ ಅವರೂ ಕೂಡ ಭಾಗಿಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com