ವಿಧಾನ ಸೌಧ
ವಿಧಾನ ಸೌಧ

ವರ್ಗಾವಣೆಯಿಂದ ಬಚಾವ್ ಆಗಲು ಹೊಸ ಐಡಿಯಾ: ಸರ್ಕಾರಿ ನೌಕರರ ಸಂಘದಲ್ಲಿ ಹುದ್ದೆ !

ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರು ವರ್ಗಾವಣೆಯಿಂದ ಬಚಾವ್ ಆಗಲು ಹೊಸದೊಂದು ಐಡಿಯಾ..
Published on
ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರು ವರ್ಗಾವಣೆಯಿಂದ ಬಚಾವ್ ಆಗಲು ಹೊಸದೊಂದು ಐಡಿಯಾ ಕಂಡುಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಹುದ್ದೆ ಪಡೆದರೇ 10 ವರ್ಷಗಲ ಕಾಲ ಅವರಿಗೆ ಬೇರೆ ಯಾವ ಸ್ಥಳಕ್ಕೂ ವರ್ಗಾವಣೆ ಮಾಡುವಂತಿಲ್ಲ ಎಂಬ ನಿಯಮವಿರುವುದರಿಂದ ಅದರ ಲಾಭವನ್ನು ಪಡೆದುಕೊಳ್ಳಲು ನೌಕರರು ಮುಗಿ ಬೀಳುತ್ತಿದ್ದಾರೆ.
ರಾಜ್ಯ ಸರ್ಕಾರ ನೌಕರರ ಸಂಘದಲ್ಲಿ ಹುದ್ದೆ ಪಡೆಯಲು ದೊಡ್ಡ ಮಟ್ಟದಲ್ಲಿ ಲಾಬಿ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯ ಆರ್. ಶ್ರೀಕಾಂತ್ ಆರೋಪಿಸಿದ್ದಾರೆ,. ಒಮ್ಮೆ ಸರ್ಕಾರಿ ನೌಕರರ ಸಂಘಕ್ಕೆ ಸದಸ್ಯರಾಗಿ ಬಿಟ್ಟರೇ ಅವರಿಗೆ ವರ್ಗಾವಣೆಯ ಚಿಂತೆಯೇ ಇರುವುದಿಲ್ಲ .
ಸಂಘದ ನಿಯಮದ ಪ್ರಕಾರ 9 ಉಪಾಧ್ಯಕ್ಷರು ಇರಬೇಕು, ಆದರೆ ಇಲ್ಲಿ 33 ಮಂದಿ ಇದ್ದಾರೆ. ಜೊತೆಗೆ 4 ಕಾರ್ಯದರ್ಶಿಗಳ ಬದಲಿಗೆ28 ಮಂದಿ ಕಾರ್ಯದರ್ಶಿಗಳ ನೇಮಕವಾಗಿದೆ.
ಸಂಘದ ಅಧ್ಯಕ್ಷರಿಗೆ ಪದಾಧಿಕಾರಿಗಳನ್ನು ನೇಮಕ ಮಾಡುವ ಅಧಿಕಾರವಿರುತ್ತದೆ. ಸದ್ಯ ಇರುವ ಅಧ್ಯಕ್ಷರು ಸುಮಾರು 100 ಮಂದಿಯನ್ನು  ಪದಾಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಪದಾಧಿಕಾರಿಗಳಾಗಿ ಆಗಿ ನೇಮಕವಾಗುವ ಮೊದಲು ಸಂಘದ ಮಂಡಳಿ ಸದಸ್ಯರಾಗಿ ಚುನಾಯಿತರಾಗಬೇಕು. ಆದರೆ ಹಲವು ಕೇಸ್ ಗಳಲ್ಲಿ ಈ ನಿಯಮ ಪರಿಪಾಲನೆಯಾಗಿಲ್ಲ, ಯಾರಿಗೆ ವರ್ಗಾವಣೆ ಬೇಕಿಲ್ಲವೋ ಅಂಥವರು ಕೌನ್ಸಿಲ್ ಸದಸ್ಯರಾಗದೇ ಪದಾಧಿಕಾರಿಗಳಾಗಿ ನೇಮಕಗೊಳ್ಳುತ್ತಾರೆ. ತಮ್ಮ ಪ್ರಮಾಣ ಪತ್ರವನ್ನು ತೋರಿಸಿ ವರ್ಗಾವಣೆ ಆದೇಶವನ್ನು ರದ್ದು ಪಡಿಸಿಕೊಳ್ಳುತ್ತಾರೆ. ಇದರಲ್ಲಿ ಹೆಚ್ಚಿನವರು ಸಾರಿಗೆ, ಅಬಕಾರಿ ಮತ್ತು ತೆರಿಗೆ ಇಲಾಖೆ ನೌಕರರಾಗಿದ್ದಾರೆ.
ಸಂಘದಲ್ಲಿ 5 ಲಕ್ಷ ಮಂದಿ ಪ್ರಾಥಮಿಕ ಸದಸ್ಯರಿದ್ದಾರೆ. ಪ್ರತಿಯೊಬ್ಬರಿಂದ 100 ರು. ಸಂಗ್ರಹಿಸಲಾಗುತ್ತದೆ. ವಾರ್ಷಿಕವಾಗಿ 5 ಕೋಟಿ ರು ಹಣ ಸಂಗ್ರಹವಾಗುತ್ತದೆ. ಇದನ್ನು ಹೊರತುಪಡಿಸಿ, ರಾಜ್ಯ ಸರ್ಕಾರ ವಿಶೇಷ ಕಾರ್ಯಕ್ರಮಗಳಿಗಾಗಿ ಅನುದಾನ ನೀಡುತ್ತದೆ. ಆದರೇ ಪದಾಧಿಕಾರಿಗಳು ಈ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹೀಗಾಗಿ ಸಂಘದ ಕಾನೂನಿಗೆ ತಿದ್ದುಪಡಿ ತಂದು ಇಂತಿಷ್ಟೇ ಮಂದಿ ಸದಸ್ಯರಿರಬೇಕು ಎಂಬ ನಿಯಮ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ. 
ಕೇಂದ್ರ ಸರ್ಕಾರಿ ನೌಕರರಂತೆ ರಾಜ್ಯ ಸರ್ಕಾರಿ ನೌಕರರಿಗೂ ವೇತನ ನೀಡಲಿ ಎಂದು ಬೇಡಿಕೆ ಇಟ್ಟಿದ್ದೆ ನನ್ನ ತಪ್ಪಾಯಿತು. ಇದರಿಂದ ನನ್ನನ್ನು ಕಾರ್ಯದರ್ಶಿ ಹುದ್ದೆಯಿಂದ ತೆಗೆದು ಹಾಕಲಾಯಿತು ಎಂದು ಪಿ. ಗುರುಪಾದಸ್ವಾಮಿ ಎಂಬುವರು ಆರೋಪಿಸಿದ್ದಾರೆ.
ಈ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಸಂಘದ ಅಧ್ಯಕ್ಷ ಮಂಜೇಗೌಡ ಸಂಘವನ್ನು ಮತ್ತಷಚು ಬಲ ಪಡಿಸಲು ಪದಾದಿಕಾರಿಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ಯಾರೊಬ್ಬರ ವರ್ಗಾವಣೆ ರದ್ದು ಮಾಡಲು ಪದಾದಿಕಾರಿಗಳನ್ನಾಗಿ ನೇಮಕ ಮಾಡುತ್ತಿಲ್ಲ. ಅದು ಸರ್ಕಾರದ ನಿರ್ಧಾರ ಎಂದು ಸ್ಪಷ್ಟನೆ ನೀಡಿದ್ದಾರೆ.
ನಮಗೆ ಈ ಬಗ್ಗೆ ಮಾಹಿತಿಯಿಲ್ಲ, ಪದಾಧಿಕಾರಿಗಳ ಸಂಖ್ಯೆ ಹೆಚ್ಚಿಸುವುದರಿಂದ, ಅವರನ್ನು ವರ್ಗಾವಣೆ ಮಾಡದೇ ಇರುವುದರಿಂದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಇದರ ಬಗ್ಗೆ ಗಮನ ಹರಿಸುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಯಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com