• Tag results for transfer

'ಈ ರೊಟ್ಟಿನ ನಾಯಿ ಸಹ ತಿನ್ನಲ್ಲ' ಎಂದಿದ್ದ ಪೊಲೀಸ್ ಪೇದೆಯನ್ನು 600 ಕಿಮೀ ದೂರದ ಜಿಲ್ಲೆಗೆ ವರ್ಗಾವಣೆ

ಉತ್ತರ ಪ್ರದೇಶದ ಫಿರೋಜಾಬಾದ್ ಪೊಲೀಸ್ ಲೈನ್‌ನಲ್ಲಿರುವ ಮೆಸ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವಿಡಿಯೋ ಪೋಸ್ಟ್ ಮಾಡಿದ್ದ ಪೊಲೀಸ್ ಪೇದೆಯನ್ನು ಫಿರೋಜಾಬಾದ್‌ನಿಂದ 600 ಕಿಮೀ ದೂರದಲ್ಲಿರುವ ಗಾಜಿಪುರ ಜಿಲ್ಲೆಗೆ ವರ್ಗಾವಣೆ ಮಾಡಿ ಶಿಕ್ಷೆ ನೀಡಲಾಗಿದೆ.

published on : 22nd September 2022

ಜನಪದ ವಿವಿ ಉನ್ನತ ಶಿಕ್ಷಣ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾವಣೆ ಆಗಲಿ: ಗೋವಿಂದ ಕಾರಜೋಳ

ಹಾವೇರಿಯಲ್ಲಿರುವ ಜನಪದ ವಿಶ್ವವಿದ್ಯಾಲಯವನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಬೇಕು. ಆಗ ಮಾತ್ರ ಅಲ್ಲಿ ಚಟುವಟಿಕೆಗಳು ನಡೆಯುತ್ತವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ. 

published on : 19th September 2022

ಸಿಇಒ ಹೆಸರಿನಲ್ಲಿ ಹಣ ವರ್ಗಾವಣೆ; ಸೆರಂ ಇನ್ಸ್ಟಿಟ್ಯೂಟ್ ಗೆ 1 ಕೋಟಿ ರೂ. ವಂಚಿಸಿದ ವಂಚಕರು!

ಕೊರೋನಾ ಲಸಿಕೆ ತಯಾರಿಕಾ ಕಂಪನಿ ಸೆರಂ ಇನ್ಸ್ಟಿಟ್ಯೂಟ್  ಆಫ್ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದರ್ ಪೂನವಾಲ್ಲಾ ಹೆಸರಿನಲ್ಲಿ ಹಣ ವರ್ಗಾವಣೆ ಮಾಡುವ ಸಂದೇಶ ಕಳುಹಿಸುವ ಮೂಲಕ ವಂಚಕರು 1 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಂಚಿಸಿದ್ದಾರೆ ಎಂದು ಪುಣೆ ಪೊಲೀಸರು ಶನಿವಾರ ತಿಳಿಸಿದ್ದಾರೆ.

published on : 10th September 2022

ನವದೆಹಲಿ: ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ ನಂತರ 12 ಐಎಎಸ್ ಅಧಿಕಾರಿಗಳ ಎತ್ತಂಗಡಿ; ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಆದೇಶ

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ ನಡೆದ ಕೆಲ ತಾಸುಗಳಲ್ಲೇ, ರಾಜ್ಯ ರಾಜಧಾನಿ ಆಡಳಿತದಲ್ಲಿ ಮೇಜರ್ ಸರ್ಜರಿ ಮಾಡಲಾಗಿದ್ದು,  ಸುಮಾರು 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. 

published on : 20th August 2022

ನ್ಯಾಯಾಧೀಶರಿಗೆ ವರ್ಗಾವಣೆ ಬೆದರಿಕೆ: ಎಸ್ಐಟಿ ತನಿಖೆಗೆ ಆದೇಶ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ

ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ಹೆಚ್ ಪಿ ಸಂದೇಶ್ ಅವರಿಗೆ ವರ್ಗಾವಣೆ ಬೆದರಿಕೆ ಹಾಕಿದ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ(ಎಸ್ ಐಟಿ) ದಿಂದ ವಿಚಾರಣೆ ನಡೆಸಲು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. 

published on : 16th July 2022

ಬೆಂಗಳೂರು: ಕಾಶಿ ಯಾತ್ರಾರ್ಥಿಗಳಿಗೆ ಸಹಾಯಧನ ವರ್ಗಾವಣೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಸಹಾಯಧನವನ್ನು ಡಿಬಿಟಿ ಮೂಲಕ ಆನ್ ಲೈನ್ ನಲ್ಲಿ ವರ್ಗಾವಣೆ ಮಾಡಿದರು. 

published on : 14th July 2022

'ಎಸಿಬಿ' ಕಲೆಕ್ಷನ್ ಸೆಂಟರ್: ಬೆಕ್ಕಿಗೆ ಗಂಟೆ ಕಟ್ಟಲು ನಾನು ಸಿದ್ಧ, ಯಾವುದಕ್ಕೂ ಜಗ್ಗಲ್ಲ; ವರ್ಗಾವಣೆ ಬೆದರಿಕೆ ವಿರುದ್ಧ ಹೈಕೋರ್ಟ್ ಜಡ್ಜ್  ಆಕ್ರೋಶ!

ಭ್ರಷ್ಟಾಚಾರ ನಿಗ್ರಹ ದಳ ಎಸಿಬಿಯು 'ಕಲೆಕ್ಷನ್ ಸೆಂಟರ್' ಆಗಿದೆ, ಎಸಿಬಿ ಭ್ರಷ್ಟಾಚಾರದ ಕೂಪವಾಗಿದೆ, ಅದರ ಮುಖ್ಯಸ್ಥರೇ ಕಳಂಕಿತ ವ್ಯಕ್ತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಈಗ ವರ್ಗಾವಣೆ ಬೆದರಿಕೆಗೆ ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

published on : 5th July 2022

16 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಸಂಜೀವ್ ಪಾಟೀಲ್ ಬೆಳಗಾವಿಗೆ ಎತ್ತಂಗಡಿ; ಬೆಂಗಳೂರಿನ 5 ವಿಭಾಗಕ್ಕೆ ಹೊಸ ಡಿಸಿಪಿಗಳ ನೇಮಕ!

 ರಾಜ್ಯ ಸರ್ಕಾರ 16 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ. ಬೆಂಗಳೂರಿನ ಐದು ವಿಭಾಗಗಳಿಗೆ ಹೊಸ ಡಿಸಿಪಿಗಳನ್ನು ನೇಮಕ ಮಾಡಲಾಗಿದೆ.

published on : 28th June 2022

ಬೆಂಗಳೂರು: ಅಕ್ರಮ ಎಸಗಿದ 7 ಜೈಲು ಅಧಿಕಾರಿಗಳ ವರ್ಗಾವಣೆ

ಅಕ್ರಮ ಎಸಗಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ 7 ಕಾರಾಗೃಹದ ಅಧಿಕಾರಿಗಳನ್ನು ರಾಜ್ಯ ಇತರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡಲಾಗಿದೆ.

published on : 22nd June 2022

ಮಂಡ್ಯ ರೈಲು ನಿಲ್ದಾಣದಲ್ಲಿ ಪಾನಮತ್ತನಾಗಿ ವೃದ್ಧ ವ್ಯಾಪಾರಿಗೆ ಥಳಿಸಿದ್ದ ಆರ್ ಪಿಎಫ್ ಇನ್ಸ್ ಪೆಕ್ಟರ್ ಈಶಾನ್ಯ ವಲಯಕ್ಕೆ ವರ್ಗ

ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಠಾಣೆಯೊಳಗೆ ಹಿರಿಯ ವ್ಯಾಪಾರಿ ನಿಂಗಣ್ಣ ಎಂಬ ವ್ಯಕ್ತಿಗೆ ಪಾನಮತ್ತ ರೈಲ್ವೆ ಭದ್ರತಾ ಪಡೆ(ಆರ್ ಪಿಎಫ್) ಇನ್ಸ್ ಪೆಕ್ಟರ್ ಅಬೂ ರಾಮಚಂದ್ರನ್ ಥಳಿಸಿದ ಘಟನೆಗೆ ಸಂಬಂಧಿಸಿದಂತೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ನಂತರ ರೈಲ್ವೆ ಮಂಡಳಿ ಇತ್ತೀಚೆಗೆ ಅವರನ್ನು ರೈಲ್ವೆಯ ಈಶಾನ್ಯ ಗಡಿ ರೈಲ್ವೆ ವಲಯಕ್ಕೆ ವರ್

published on : 4th June 2022

'ನಮ್ಮ ಜಿಲ್ಲೆಯೊಳಗೇ ನಮಗೆ ವರ್ಗಾವಣೆ ಕೊಡಿ': ಶಾಲಾ ಶಿಕ್ಷಕರಿಂದ ಸರ್ಕಾರಕ್ಕೆ ಬೇಡಿಕೆ, ಪ್ರತಿಭಟನೆ

ಶಿಕ್ಷಕರ ವರ್ಗಾವಣೆ ಕಾಯ್ದೆಗೆ ಇತ್ತೀಚೆಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ತಮ್ಮ ತವರು ಜಿಲ್ಲೆಗಳಿಗೆ ವರ್ಗಾವಣೆ ಮಾಡಲು ನಿರಾಕರಿಸಿರುವ ಸರ್ಕಾರದ ವಿರುದ್ಧ ನೂರಾರು ಸರ್ಕಾರಿ ಶಾಲಾ ಶಿಕ್ಷಕರು  ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. 

published on : 3rd June 2022

ಆಸ್ತಿ ಖರೀದಿದಾರರಿಗೆ ದುಬಾರಿಯಾಗಲಿದೆ ರಾಷ್ಟ್ರ ರಾಜಧಾನಿ!; ಮುದ್ರಾಂಕ ಶುಲ್ಕ ಶೇ.1ರಷ್ಟು ಏರಿಕೆ!

ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಧಾನಿ ಆಸ್ತಿ ಖರೀದಿದಾರರಿಗೆ ದುಬಾರಿಯಾಗಲಿದ್ದು, ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಎಸ್ ಡಿ) ಆಸ್ತಿಗಳ ಮೇಲಿನ ವರ್ಗಾವಣೆ ಸುಂಕವನ್ನು ಶೇಕಡಾ 1 ರಷ್ಟು ಹೆಚ್ಚಿಸುವ ಪ್ರಸ್ತಾಪವನ್ನು ಅನುಮೋದಿಸಿದೆ.

published on : 2nd June 2022

6 ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಕೊಲಿಜಿಯಂ ದೇಶದ ವಿವಿಧ ಹೈಕೋರ್ಟ್‌ಗಳ  ಆರು ನ್ಯಾಯಾಧೀಶರನ್ನು ವರ್ಗಾವಣೆ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದೆ.

published on : 27th May 2022

ಕೊಡಗು: ಹಲವು ಅನುಮಾನ ಹುಟ್ಟಿಸಿದ ಗೋಣಿಕೊಪ್ಪಲು ಸರ್ಕಲ್ ಇನ್ಸ್ ಪೆಕ್ಟರ್ ಎತ್ತಂಗಡಿ!

ಗೋಣಿಕೊಪ್ಪಲು ಸರ್ಕಲ್ ಇನ್ಸ್ ಪೆಕ್ಟರ್ ದಿಢೀರ್ ಎತ್ತಗಂಡಿ ಕೊಡಗು ಜಿಲ್ಲೆಯಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊನ್ನಂಪೇಟೆಯ ಶಾಲೆಯಲ್ಲಿ ಬಂದೂಕು ತರಬೇತಿ ನಡೆಸುತ್ತಿದ್ದ ಭಜರಂಗ ದಳ ಕಾರ್ಯಕರ್ತರನ್ನು ಪ್ರಶ್ನಿಸಿದ್ದಕ್ಕೆ ವೃತ್ತ ನಿರೀಕ್ಷಕರನ್ನು ವರ್ಗಾವಣೆ ಮಾಡಲಾಗಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.

published on : 19th May 2022

ಸಹ ಪ್ರಾಧ್ಯಾಪಕರ ಹಠಾತ್ ವರ್ಗಾವಣೆ‌ ಸರಿಯಲ್ಲ: ಮರಿತಿಬ್ಬೇಗೌಡ

ಪದವಿ ತರಗತಿಗಳಲ್ಲಿ ಪರೀಕ್ಷೆ ನಡೆಯುತ್ತಿದೆ, ಮೌಲ್ಯಮಾಪನ ಪ್ರಾರಂಭವಾಗಿದೆ. ಇಂಥ ಸಂದರ್ಭದಲ್ಲಿ ಏಳೆಂಟು ವರ್ಷಗಳಿಂದ ನಿಯೋಜನೆ ಮೇಲೆ ಇದ್ದ 1000 ಹೆಚ್ಚು ಮಂದಿ ಪ್ರಾಧ್ಯಾಪಕರ ನಿಯೋಜನೆ ರದ್ದು ಮಾಡಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ‌ ಹೇಳಿದ್ದಾರೆ.

published on : 10th May 2022
1 2 > 

ರಾಶಿ ಭವಿಷ್ಯ