ಹುಬ್ಬಳ್ಳಿ: ತಾಯಿಯ ಹುಟ್ಟುಹಬ್ಬವನ್ನು ವಿಭಿನ್ನ ಆಚರಿಸಿಕೊಂಡ ಪುತ್ರ!

ಮಕ್ಕಳು ತಮ್ಮ ಹೆತ್ತವರ ಹುಟ್ಟುಹಬ್ಬವನ್ನು ಹಲವು ರೀತಿ ಆಚರಿಸಿ ಸಂತಸ ಪಡಿಸುತ್ತಾರೆ, ಆದರೆ ಧಾರವಾಡದ ಗಾಂಧಿ ನಗರದಲ್ಲಿರುವ ವ್ಯಕ್ತಿಯೊಬ್ಬ...
ನಾಮಫಲಕಕ್ಕೆ ಪೈಂಟ್ ಮಾಡುತ್ತಿರುವ ಶಿವಾಜಿ ಸೂರ್ಯವಂಶಿ
ನಾಮಫಲಕಕ್ಕೆ ಪೈಂಟ್ ಮಾಡುತ್ತಿರುವ ಶಿವಾಜಿ ಸೂರ್ಯವಂಶಿ
Updated on
ಧಾರವಾಡ: ಮಕ್ಕಳು ತಮ್ಮ ಹೆತ್ತವರ ಹುಟ್ಟುಹಬ್ಬವನ್ನು ಹಲವು ರೀತಿ ಆಚರಿಸಿ ಸಂತಸ ಪಡಿಸುತ್ತಾರೆ, ಆದರೆ ಧಾರವಾಡದ ಗಾಂಧಿ ನಗರದಲ್ಲಿರುವ ವ್ಯಕ್ತಿಯೊಬ್ಬ ತನ್ನ ತಾಯಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿ ಮಾದರಿಯಾಗಿದ್ದಾನೆ.
ಧಾರವಾಡದ ಗಾಂಧಿನಗರ ನಿವಾಸಿ ಉದ್ಯಮಿ ಶಿವಾಜಿ ಸೂರ್ಯವಂಶಿ ಎಂಬಾತ, ತನ್ನ ತಾಯಿಯ ಹುಟ್ಟುಹಬಕ್ಕೆ ತಮ್ಮ ಏರಿಯಾದಲ್ಲಿರುವ ಎಲ್ಲಾ ನಾಮಫಲಕಗಳಿಗೆ ಸ್ವತಃ ತಾವೇ ಪೈಂಟಿಂಗ್ ಮಾಡಿದ್ದಾರೆ.
ಶಿಥಿಲಗೊಂಡು, ಏರಿಯಾ ವಿಳಾಸ ಹಾಳಾಗಿರುವ ನಾಮಫಲಕಗಳನ್ನು ರಿಪೇರಿ ಮಾಡಿಸುವಂತೆ ಹಲವು ಬಾರಿ ಹುಬ್ಬಳ್ಳಿ-ಧಾರವಾಡ ಮುನ್ಸಿಪಾಲಿಟಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಪಾಲಿಕೆ ಇದರ ಬಗ್ಗೆ ಗಮನ ತೋರಲಿಲ್ಲ. ಹೀಗಾಗಿ ಶಿವಾಜಿ ತಮ್ಮ ಏರಿಯಾದಲ್ಲಿರುವ ಎಲ್ಲಾ ನಾಮಮಫಲಕಳಿಗೂ ಪೈಂಟ್ ಹಚ್ಚಿ ತಮ್ಮ ತಾಯಿಯ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ.
ನಮ್ಮ ಏರಿಯಾದಲ್ಲಿ ತುಂಬಾ ಜನಸಂಖ್ಯೆಯಿದೆ. ನಾಮಫಲಕಗಳಲ್ಲಿರುವ ಹೆಸರುಗಳು ಸರಿಯಾಗಿ ಕಾಣದಿರುವುದರಿಂದ ಕೊರಿಯರ್ ಏಜೆಂಟ್ ಗಳಿಗೆ ಮನೆ ಹಾಗೂ ಕಚೇರಿಗಳ ವಿಳಾಸ ಪತ್ತೆ ಹಚ್ಚುವುದು ಕಷ್ಟವಾಗುತ್ತಿತ್ತು, ಹೀಗಾಗಿ ಸಮಾಜಕ್ಕೆ ಏನಾದರೂ ಒಂದು ಒಳ್ಳೆಯ ಕೆಲಸ ಮಾಡಬೇಕು ಎಂದು ನಿರ್ಧರಿಸಿ ನನ್ನ ತಾಯಿ ಗಿರಿಜಾ ಅವರ ಹುಟ್ಟು ಹಬ್ಬಕ್ಕಾಗಿ ವಿಭಿನ್ನ ಕೆಲಸ ಮಾಡಿದ್ದಾರೆ.
ನಮ್ಮ ಮನೆಯ ಅಕ್ಕಪಕ್ಕದ ನಿವಾಸಿಗಳು ಕೂಡ ನನಗೆ ಸಹಾಯ ಮಾಡಿ ನಾಮಫಲಕಗಳನ್ನು ಸ್ವಚ್ಛಗೊಳಿಸಿ ಪೈಂಟ್ ಮಾಡಲು ಸಹಾಯ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಗಾಂಧಿನಗರದ 25 ನಾಮಫಲಕಗಳಿಗೆ ಬಣ್ಣ ಹಚ್ಚಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು, ಪ್ರತಿ ವರ್ಷ ನಾಮಫಲಕಗಳ ನಿರ್ವಹಣೆಗೆ ಅನುದಾನ ನೀಡಲಾಗುತ್ತದೆ. ನಾವು ಕೆಲವು ನಾಮ ಪಲಕಗಳನ್ನು ಸ್ವಚ್ಛಗೊಳಿಸಿ ಪೈಂಟ್ ಮಾಡಿದ್ದೇವೆ. ಕೆಲವೊಮ್ಮೆ ಕೆಲವೊಮ್ಮೆ ಫಲಕಗಳು ಕಾಣದಾಗುತ್ತವೆ. ಮತ್ತೆ ಹಲವು ಬಾರಿ ನಾಮಫಲಕ ಅಳವಡಿಸಿದ ಕೆಲವೇ ದಿನಗಳಲ್ಲಿ ಹಾಳಾಗುತ್ತವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com