ಶ್ರೀರಾಮಲು ಬೆನ್ನಿಗೆ ನಿಂತ ಸೋಮಶೇಖರ ರೆಡ್ಡಿ: ಕೇಸು ವಾಪಸ್ ಪಡೆಯಲು ಕರುಣಾಕರ ರೆಡ್ಡಿಗೆ ಆಗ್ರಹ

ಸಂಸದ ಶ್ರೀರಾಮುಲು ವಿರುದ್ಧ ತನ್ನ ಸಹೋದರ ಕರುಣಾಕರ ರೆಡ್ಡಿ ಹೂಡಿರುವ 10 ಸಿವಿಲ್ ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಸೋಮಶೇಖರ್ ರೆಡ್ಡಿ ...
ಸೋಮಶೇಖರ ರೆಡ್ಡಿ
ಸೋಮಶೇಖರ ರೆಡ್ಡಿ

ಬಳ್ಳಾರಿ: ಸಂಸದ ಶ್ರೀರಾಮುಲು ವಿರುದ್ಧ ತನ್ನ ಸಹೋದರ ಕರುಣಾಕರ ರೆಡ್ಡಿ ಹೂಡಿರುವ 10 ಸಿವಿಲ್ ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಸೋಮಶೇಖರ್ ರೆಡ್ಡಿ ಆಗ್ರಹಿಸಿದ್ದಾರೆ.

ಬಳ್ಳಾರಿಯ ಸುಷ್ಮಾ ಸ್ವರಾಜ್ ಕಾಲೋನಿ ನಿವೇಶನ ಹಂಚಿಕೆ ಕುರಿತಂತೆ ಉಲ್ಬಣವಾಗಿರುವ ಸಮಸ್ಯೆಯನ್ನು ನಮ್ಮ ನಮ್ಮಲ್ಲೆ ಬಗೆ ಹರಿಸಿಕೊಳ್ಳಬಹುದಿತ್ತು ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಎಲ್ಲ ಸೋದರರ ರಾಜಕೀಯ ಬೆಳವಣಿಗೆಗೆ ಬಿ.ಶ್ರೀರಾಮುಲು ಅವರೇ ಕಾರಣೀಭೂತರು. ನಮಗೆ ಅವರೇ ಆಧಾರಸ್ತಂಭ,  ಅಂತಹ ವ್ಯಕ್ತಿಯ ವಿರುದ್ಧ ಕೋರ್ಟಿನಲ್ಲಿ ದಾವೆ ಹೂಡುವ ಮಟ್ಟಕ್ಕೆ ಹೋಗಬಾರದಿತ್ತು ಎನ್ನುವ ಮೂಲಕ ಹಿರಿಯ ಸೋದರನ ನಡೆಯನ್ನು ಖಂಡಿಸಿದರು.

ನ್ಯಾಯಾಲಯದಲ್ಲಿ ದಾವೆ ಹೂಡದಂತೆ ಕರುಣಾಕರರೆಡ್ಡಿ ಅವರಿಗೆ ಮನವಿ ಮಾಡಿದ್ದೆ. ದಾವೆ ಹೂಡಿದ ನಂತರವೂ ಹಿಂಪಡೆಯುವಂತೆ ಕೋರಿದ್ದೆ. ನಾವು ನಾಲ್ವರು ಒಂದೇ ಕುಟುಂಬದಂತೆ ಇದ್ದೆವು. ಇದನ್ನು ಕರುಣಾಕರ ರೆಡ್ಡಿ ಅವರು ಬ್ರೇಕ್‌ಮಾಡಿದರು.

ಕರುಣಾಕರರೆಡ್ಡಿ ಅವರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸುವಲ್ಲಿ ಶ್ರೀರಾಮುಲು ಅವರ ಪಾತ್ರವಿಲ್ಲ. ಅವರ ಅಭಿಮಾನಿಗಳು ದಾವೆ ಹೂಡಿದ್ದಾರೆ. ಶ್ರೀರಾಮುಲು ಅಂತಹ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಅವರು ರಾಜ್ಯ ಮಟ್ಟದಲ್ಲಿ ಬೆಳೆದಿದ್ದಾರೆ. ನಾವೆಲ್ಲರೂ ಅವರ ಹಿಂಬಾಲಕರಾಗಿ ಅವರು ಹೇಳಿದಂತೆ ರಾಜಕೀಯ ಮಾಡುತ್ತಿದ್ದೇವೆ.

ಕರುಣಾಕರ ರೆಡ್ಡಿ ದೂರು ವಾಪಸ್ ಪಡೆದರೆ, ಅವರ ವಿರುದ್ಧ ಹೂಡಿರುವ ಜಾತಿ ನಿಂದನೆ ಪ್ರಕರಣ ಹಿಂದಕ್ಕೆ ಪಡೆಯುವಂತೆ ಶ್ರೀರಾಮುಲು ಅವರ ಅಭಿಮಾನಿಗಳಿಗೆ ಮನವಿ ಮಾಡುವೆ ಎಂದು ಸೋಮಶೇಖರ ರೆಡ್ಡಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com