ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಐಆರ್ ಸಿಟಿಸಿಯ ಹಿರಿಯ ಅಧಿಕಾರಿಗಳು, ನಿಗಮದ ಈ ನಡೆಯಿಂದ ಆಹಾರದ ಗುಣಮಟ್ಟ ಹೆಚ್ಚಲಿದೆ. ಫೆಬ್ರವರಿ 27ರಂದು ರೈಲ್ವೆ ಇಲಾಖೆ ಹೊರಡಿಸಿರುವ ಯೋಜನೆ ಪ್ರಕಾರ, ರೈಲುಗಳಲ್ಲಿ ನೀಡುವ ಆಹಾರ ತಾಜಾ ಮತ್ತು ಬಿಸಿಯಾಗಿರಬೇಕೆಂದು ನಿಗಮಕ್ಕೆ ರೈಲ್ವೆ ನಿಲ್ದಾಣಗಳಲ್ಲಿ ಅಡಿಗೆ ಮನೆಗಳನ್ನು(ಬೇಸ್ ಕಿಚನ್) ಸ್ಥಾಪಿಸುವಂತೆ ಸೂಚಿಸಲಾಗಿತ್ತು ಎಂದು ಹೇಳಿದ್ದಾರೆ.