ಮದ್ಯ ಸೇವಿಸಿ ವಾಹನ ಚಾಲನೆ: ಬೆಂಗಳೂರು ನಗರ ಪೊಲೀಸ್ ಆಯುಕ್ತರ ಟ್ವೀಟ್ ಗೆ ಟೀಕೆಯ ಸುರಿಮಳೆ

ವಾಹನ ಚಲಾಯಿಸುವ ಮುನ್ನ ಮದ್ಯಪಾನ ಮಾಡುವ ಬಗ್ಗೆ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್...
ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್
ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್
ಬೆಂಗಳೂರು: ವಾಹನ ಚಲಾಯಿಸುವ ಮುನ್ನ ಮದ್ಯಪಾನ ಮಾಡುವ ಬಗ್ಗೆ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟಿಜನಗಳು ಈ ಬಗ್ಗೆ ಬಿಸಿಬಿಸಿ ಚರ್ಚೆ ಆರಂಭಿಸಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದರ ವಿರುದ್ಧ ಹೋರಾಡುತ್ತಿರುವ ಕಾರ್ಯಕರ್ತರಿಗೆ ಪ್ರವೀಣ್ ಸೂದ್ ಅವರ ಈ ಟ್ವೀಟ್ ಇಷ್ಟವಾಗಿಲ್ಲ.
ವಾಹನ ಚಲಾಯಿಸುವ ಮುನ್ನ ಆಲ್ಕೋಹಾಲ್ ಸೇವಿಸಿದರೆ ನಿಮ್ಮಲ್ಲಿ ಅಪರಾಧಿ ಪ್ರಜ್ಞೆ ಕಾಡಬೇಕಾಗಿಲ್ಲ. 100 ಎಂಎಲ್ ರಕ್ತದಲ್ಲಿ 40 ಎಂಎಲ್ ಒಳಗೆ ಮದ್ಯಪಾನ ಸೇರಿದ್ದರೆ ವಾಹನ ಚಲಾಯಿಸುವುದು ಸುರಕ್ಷಿತ ಮತ್ತು ಕಾನೂನುಬದ್ಧ. ಇದಕ್ಕಾಗಿ ನೀವು ಗಾಬರಿಯಾಗಬೇಡಿ ಎಂದು ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದರು.
ಭಾರತದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ರಕ್ತದಲ್ಲಿ ಸೇರಿರಬಹುದಾದ ಆಲ್ಕೋಹಾಲ್ ಮಿಶ್ರಣದ ಅನುಮತಿ ಪ್ರಮಾಣ ಕಡಿಮೆ. 100 ಎಂಎಲ್ ರಕ್ತದಲ್ಲಿ 30 ಎಂಎಲ್ ಆಲ್ಕೋಹಾಲ್ ಸೇರಿದ್ದರೆ ಕಾನೂನಿನಲ್ಲಿ ಅದಕ್ಕೆ ಅನುಮತಿಯಿದೆ .40 ಮಿಲಿ ಗ್ರಾಂಗಿಂತ ಅಧಿಕ ಆಲ್ಕೋಹಾಲ್ ರಕ್ತದಲ್ಲಿ ಬೆರೆತಿದ್ದರೆ ಅಂತಹ ವಾಹನ ಚಾಲಕರ ವಿರುದ್ಧ ನಾವು ಕೇಸು ದಾಖಲಿಸುತ್ತೇವೆ ಎಂದು ಎಂದು ಬೆಂಗಳೂರು ಸಂಚಾರ ಪೊಲೀಸರು ಹೇಳುತ್ತಾರೆ. 
ಅಮೆರಿಕಾ, ಚೀನಾ, ಕೆನಡಾ, ಮಲೇಷಿಯಾ, ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿ 100 ಎಂಎಲ್ ರಕ್ತದಲ್ಲಿ 80 ಮಿಲಿ ಗ್ರಾಂವರೆಗೆ ಆಲ್ಕೋಹಾಲ್ ಸೇರಿರುವುದಕ್ಕೆ ಅನುಮತಿಯಿದ್ದು, ಅದಕ್ಕಿಂತ ಹೆಚ್ಚು ಸೇರ್ಪಡೆಯಾಗಿದ್ದರೆ ಕಾನೂನು ಪ್ರಕಾರ ಶಿಕ್ಷೆಯಿದೆ. ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರ ಇದನ್ನು ಮತ್ತಷ್ಟು ಕಡಿಮೆ ಅಂದರೆ 30ರಿಂದ 20 ಮಿಲಿ ಗ್ರಾಂಗೆ ತರುವ ಯೋಜನೆಯಲ್ಲಿದೆ.
ಭಾರತದ ಪರಿಸ್ಥಿತಿಗೆ ಅನುಮತಿಯ ಪ್ರಮಾಣವನ್ನು ಹೆಚ್ಚಿಸುವುದು ಪ್ರಾಯೋಗಿಕವಲ್ಲ. ವಿದೇಶಗಳಲ್ಲಿ ವಾಹನ ಚಾಲಕರು ಸಂಚಾರಿ ನಿಯಮವನ್ನು ಶಿಸ್ತಿನಿಂದ ಪಾಲಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಹಾಗಿಲ್ಲ ಎಂದು ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.
ಕೆಲವು ವಾಹನ ಚಾಲಕರು, ನಮಗೆ ಸಂಚಾರಿ ಪೊಲೀಸರು ಬೇಕೆಂದೇ ಕಿರುಕುಳ ನೀಡುತ್ತಾರೆ. ಕೆಲವು ಪೊಲೀಸರು ನಾವು 40 ಮಿಲಿ ಗ್ರಾಂ ಒಳಗೆ ಆಲ್ಕೋಹಾಲ್ ಸೇವಿಸಿದ್ದೇವೆಯೋ, ಇಲ್ಲವೋ ಎಂದು ಕೂಡ ನೋಡುವುದಿಲ್ಲ ಎಂದು ಜನರ ಆರೋಪವಾಗಿದೆ.
ಪ್ರವೀಣ್ ಸೂದ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ರಸ್ತೆ ಸುರಕ್ಷತಾ ತಜ್ಞ ಮತ್ತು ಎನ್ ಜಿಒದ ಸ್ಥಾಪಕ ಪ್ರಿನ್ಸ್ ಸಿಂಘಲ್, ರಕ್ತದಲ್ಲಿ ಅಲ್ಕೊಹಾಲ್ ಅಂಶವು ವಯಸ್ಸು, ತೂಕ, ಲಿಂಗ, ಮಹಿಳೆಯ ಗರ್ಭಧಾರಣೆ, ಔಷಧಿ, ನೀರಿನ ಮಟ್ಟ ಮತ್ತು ಇತರ ಅಂಶಗಳಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ.30 ಮಿಲಿ ಗ್ರಾಂ ಆಲ್ಕೋಹಾಲ್ ಸೇವಿಸಿ ವಾಹನ ಚಲಾಯಿಸಿದವರನ್ನು ಆಲ್ಕೋಹಾಲ್ ಸೇವಿಸಿಲ್ಲ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಗಂಭೀರ ಚಾಲನೆ ಸುರಕ್ಷಿತ ಮತ್ತು ಬುದ್ಧಿವಂತಿಕೆಯ ಲಕ್ಷಣ ಎನ್ನುತ್ತಾರೆ.
ಬೆಂಗಳೂರು ನಗರದಲ್ಲಿನ ಬಹುತೇಕ ಯುವಕರು ಆರ್ಥಿಕವಾಗಿ ಸ್ವತಂತ್ರವಾಗಿರುತ್ತಾರೆ. ಅಂತವರಲ್ಲಿ ಹೆಚ್ಚಿನವರಿಗೆ ಆಲ್ಕೋಹಾಲ್ ಸೇವನೆ ಅಭ್ಯಾಸವಿರುತ್ತದೆ. ಶೇಕಡಾ 70ರಷ್ಟು ರಸ್ತೆ ಅಪಘಾತ ಮದ್ಯಪಾನ ಸೇವಿಸಿ ವಾಹನ ಚಲಾಯಿಸುವುದರಿಂದ ಆಗುತ್ತದೆ ಎಂದು ಸಿಂಘಲ್ ಹೇಳುತ್ತಾರೆ. 
ಭಾರತೀಯ ದಂಡ ಸಂಹಿತೆಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿ ರಸ್ತೆ ಅಪಘಾತ ಮಾಡಿ ಜನರನ್ನು ಕೊಲ್ಲುವವರಿಗೆ ಪ್ರತ್ಯೇಕ ಸೆಕ್ಷನ್ ಇಲ್ಲ ಎನ್ನುತ್ತಾರೆ ಅವರು.ಪ್ರವೀಣ್ ಸೂದ್ ಅವರು ಮಾಡಿದ್ದ ಟ್ವೀಟ್ ಹೀಗಿದೆ:

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com