
ತುಮಕೂರು: ತುಮಕೂರು ವಸತಿ ಶಾಲೆಯಲ್ಲಿ ವಿಷಾಹಾರ ತಿಂದು ಮೂವರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಸತಿ ಶಾಲೆಯ ಮಾಲೀಕ ಹಾಗೂ ಮಾಜಿ ಶಾಸಕ ಕಿರಣ್ ಕುಮಾರ್ ಅವರು, ಪ್ರಕರಣದ ಹಿಂದೆ ಕಾಣದ ಕೈಗಳ ಸಂಚು ಅಡಗಿರಬಹುದು ಎಂದು ಶಂಕಿಸಿದ್ದಾರೆ.
ಘಟನೆ ಬಗ್ಗೆ ಬಿಜೆಪಿ ಮಾಜಿ ಶಾಸಕ ಕಿರಣ್ ಕುಮಾರ್ ಅವರು ಗುರುವಾರ ಹೇಳಿಕೆ ನೀಡಿದ್ದು, "ಮಕ್ಕಳ ತಿನ್ನುವ ಊಟದಲ್ಲಿ ನೀಲಿ ಬಣ್ಣ ಕಾಣಿಸಿಕೊಂಡಿತ್ತು, ಹೀಗಾಗಿ ಊಟದಲ್ಲಿ ಯಾರೋ ಔಷಧ ಬೆರೆಸಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ. "ಪ್ರಕರಣ ಸಂಬಂಧ ಸಿಬ್ಬಂದಿಗಳನ್ನು ವಿಚಾರಿಸಿದಾಗ ಮೂವರು ಮಕ್ಕಳು ಚಪಾತಿ ಪಲ್ಯಾ ಬದಲಿಗೆ ಅನ್ನ ಸಾಂಬರ್ ತಿಂದಿದ್ದಾರೆ. ಆಗ ಸಾಂಬರ್ ನಲ್ಲಿ ವ್ಯತ್ಯಾಸ ಇದ್ದಿದ್ದು ಕಂಡು ಬಂತು. ಕೂಡಲೇ ಅಸ್ವಸ್ಥ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ನಂತರ ಅಲ್ಲಿದ್ದ ಉಳಿದ ಮಕ್ಕಳು ಯಾರು ಊಟ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
"ಹಾಸ್ಟೆಲ್‍ನಲ್ಲಿ 40 ಮಂದಿ ವಿದ್ಯಾರ್ಥಿಗಳಿದ್ದು, 3ನೇ ತರಗತಿಯಿಂದ 10ನೇ ತರಗತಿವರೆಗೆನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶ್ರೇಯಸ್, ಆಕಾಂಕ್ಷ ಪಲ್ಲಕ್ಕಿ ಶಿರಾಂಪುರ ವಿದ್ಯಾರ್ಥಿಗಳಾಗಿದ್ದು, ಶಾಂತಮೂರ್ತಿ ತಿಮ್ಮನಹಳ್ಳಿ ವಿದ್ಯಾರ್ಥಿ. ಹಾಸ್ಟೆಲ್‍ನಲ್ಲಿ ಸಿಸಿ ಕ್ಯಾಮರಾಗಳಿವೆ. ಅದನ್ನು ಪರಿಶೀಲಿಸುತ್ತೇನೆ ಎಂದು ಕಿರಣ್ ಕುಮಾರ್ ಹೇಳಿದ್ದಾರೆ.
Advertisement