ಮ್ಯಾನ್ ಹೊಲ್ ಸ್ವಚ್ಚಗೊಳಿಸುವ ವೇಳೆ ಅವರ ಜೊತೆ ನಾವು ನಿಲ್ಲಲಾಗದು: ತುಷಾರ್ ಗಿರಿನಾಥ್

ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ತೆರಳಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿ ಮೂರು ದಿನಗಳು ಕಳೆದಿವೆ. ಬೆಂಗಳೂರು ನಗರ ನೀರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ತೆರಳಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿ ಮೂರು ದಿನಗಳು ಕಳೆದಿವೆ. ಬೆಂಗಳೂರು ನಗರ ನೀರು ಸರಬರಾಜು ಮಂಡಳಿ ಇದುವರೆಗೂ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಬಿಡಬ್ಲ್ಯೂ ಎಸ್ ಎಸ್ ಬಿ ಗುತ್ತಿಗೆ ಕಂಪನಿಗೆ ನೊಟೀಸ್ ನೀಡಿದೆ. ಆಂತರಿಕ ತನಿಖೆಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಹೇಳಿದ್ದಾರೆ. ಈ ಸಂಬಂಧ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಅವರು ಕಾಮಗಾರಿ ಸರಿಯಾಗಿ ಮಾಡದಿದ್ದ ಪಕ್ಷದಲ್ಲಿ ಅವರಿಗೆ ಬಿಲ್ ಕ್ಲಿಯರ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಏಕೆ ಮಧ್ಯರಾತ್ರಿಯಲ್ಲಿ ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಅವರು ಹೋಗಿದ್ದರು?

ಮಧ್ಯರಾತ್ರಿಯಲ್ಲಿ ಏಕೆ ಅವರು ಸ್ವಚ್ಛಗೊಳಿಸಲು ಹೋಗಿದ್ದರು ಎಂಬುದರ ಬಗ್ಗೆ ನಮಗೆ ತಿಳಿದಿಲ್ಲ, ಈ ಸಂಬಂಧ ಆಂತರಿಕ ತನಿಖೆ ನಡೆಯುತ್ತಿದ್ದು ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ವರದಿ ಸಲ್ಲಿಕೆಯಾಗಲಿದೆ. ನಮ್ಮ ಕಡೆಯಿಂದ ಏನಾದರೂ ತಪ್ಪಿದ್ದರೇ ಅಂಥಹ ಅಧಿಕಾರಿಗಳ ವಿರುದ್ಧ ಶಿಸ್ತಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಗುತ್ತಿಗೆದಾರರು ಸುರಕ್ಷತಾ ಕ್ರಮಗಳನ್ನು ನೀಡದೇ ಹೋಗಿದರುವುದು ನಿಮ್ಮ ಜವಾಬ್ದಾರಿಯಲ್ಲವೇ?

ಪ್ರಾಜೆಕ್ಟ್ ನ ಪ್ರಧಾನ ಉದ್ಯೋಗಿಯಾಗಿ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಬಹುದು. ಆದರೆ ಹಣದಿಂದ ನಾವು ಸತ್ತಿರುವ ಮನುಷ್ಯನನ್ನು ವಾಪಸ್ ಕರೆ ತರಲು ಸಾಧ್ಯವಿಲ್ಲ, ಈ ಪ್ರಕರಣದಲ್ಲಿ ನಾವು ನಮ್ಮ ಅನುದಾನದ ಹಣದಿಂದ ಪರಿಹಾರ ನೀಡುತ್ತೇವೆ, ನಂತರ ಕಂಪನಿಯಿಂದ ವಾಪಸ್ ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ರಾಮ್ಕಿ ಕಂಪನಿ ಪಡೆದುಕೊಂಡಿರುವ ಬೇರೆ ಯೋಜನೆಗಳ ಬಗ್ಗೆ ಬಿಡಬ್ಲ್ಯೂ ಎಸ್ ಎಸ್ ಬಿ ಪರಿಶೀಲನೆ ನಡೆಸಲಿದೆಯೇ?

ಯಾವ್ಯಾವ ಕಂಪನಿಗಳು ಗುತ್ತಿಗೆ ಪಡೆದು ಯೋಜನೆ ಕಾಮಗಾರಿ ಮಾಡುತ್ತವೇ ಅಂತಹುಗಳ ಬಗ್ಗೆ ನಾವು ಸದಾ ನಿಗಾ ಇಡಲು ಸಾಧ್ಯವಿಲ್ಲ, ಪ್ರತಿಯೊಂದು ಏಜೆನ್ಸಿ ಕಾಮಗಾರಿ  ನಡೆಸುವಾಗ ನಾವು ಅವರೊಂದಿಗೆ ನಿಂತಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಗುತ್ತಿಗೆದಾರರಿಗೆ ಯಾವಾಗ ಕೆಲಸ ವಹಿಸಲಾಯಿತು?

ಕೆ.ಆರ್ ಪುರಂ ನಿಂದ ಕಾಡು ಬೀಸನಹಳ್ಳಿ ವರೆಗೂ ಒಳಚರಂಡಿ ಪೈಪ್ ಲೈನ್ ಕಾಮಗಾರಿಯನ್ನು ಕಳೆದ ಮೂರು ವರ್ಷಗಳ ಹಿಂದೆಯೇ ನೀಡಲಾಗಿತ್ತು.ಅವರು ಕಾಮಗಾರಿ ಪೂರ್ಣಗೊಂಡಿತು ಎಂದು ಹೇಳಿದ್ದರು. ಆದರೆ ಕಾಮಗಾರಿಯಲ್ಲಿ ಕೆಲ ಲೋಪದೋಷಗಳು ಕಂಡು ಬಂದಿದ್ದವು. ಸಮಸ್ಯೆಗಳನ್ನು ಕಂಡು ಹಿಡಿದು ಪರಿಹರಿಸುವುಂತೆ ನಾವು ಗುತ್ತಿಗೆದಾರರಿಗೆ ಸೂಚಿಸಿದ್ದೆವು, ಕಳೆದ ವಾರವೇ ಅವರಿಗೆ ನೊಟೀಸ್ ನೀಡಿದ್ದೆವು. ಕೆಲಸ ಸರಿಯಾಗಿಲ್ಲದಿದ್ದರೇ ನಾವು ಬಿಲ್ ಕ್ಲಿಯರ್ ಮಾಡುವುದಿಲ್ಲ ಎಂದು ಮೊದಲೇ ಹೇಳಿದ್ದಾಗಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com