social_icon
  • Tag results for contractors

ಬಾಕಿ ಬಿಲ್ ಪಾವತಿ: ಗುತ್ತಿಗೆದಾರರನ್ನು ಆತ್ಮಹತ್ಯೆಗೆ ದೂಡಬೇಡಿ- ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಬಾಕಿ ಬಿಲ್ ಪಾವತಿಯಾಗದಿರುವ ಕುರಿತು ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸರ್ಕಾರದ ಸ್ವಂತ ದಾಖಲೆಗಳ ಪ್ರಕಾರ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

published on : 29th November 2023

ಗುತ್ತಿಗೆದಾರರ ಬಿಲ್ ಇತ್ಯರ್ಥಕ್ಕೆ ಶೇ.8 ರಷ್ಟು ಕಮಿಷನ್: ಯಡಿಯೂರಪ್ಪ ಆರೋಪ

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯ ಸರ್ಕಾರದ ವಿರುದ್ಧ ಬಿಲ್ ಇತ್ಯರ್ಥಕ್ಕೆ ಗುತ್ತಿಗೆದಾರರ ಬಳಿ ಶೇ.8 ರಷ್ಟು ಕಮಿಷನ್ ಕೇಳುತ್ತಿರುವ ಆರೋಪ ಮಾಡಿದ್ದಾರೆ.

published on : 9th November 2023

ಸರ್ಕಾರದ ದೊಡ್ಡ ವ್ಯಕ್ತಿಗಳ ಹೆಸರು ಹೇಳಿಕೊಂಡು ಬಿಬಿಎಂಪಿಯಲ್ಲಿ ಹಣ ವಸೂಲಿ: ಕೆಂಪಣ್ಣ ಆರೋಪ

ಬಿಬಿಎಂಪಿಯ ಮುಖ್ಯ ಇಂಜಿನಿಯರಿಂಗ್ ಛಿಫ್ ಸರ್ಕಾರದ ದೊಡ್ಡ ವ್ಯಕ್ತಿಗಳ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಆರೋಪ ಮಾಡಿದ್ದಾರೆ.

published on : 5th November 2023

ಬಾಕಿ ಬಿಲ್‌ಗಳ ಪಾವತಿಗೆ ಒತ್ತಾಯಿಸಿ ಡಿಕೆ ಶಿವಕುಮಾರ್ ಭೇಟಿ ಮಾಡಿದ ಕೆಂಪಣ್ಣ ನೇತೃತ್ವದ ಗುತ್ತಿಗೆದಾರರ ನಿಯೋಗ

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ (ಕೆಎಸ್‌ಸಿಎ) ಅಧ್ಯಕ್ಷ ಡಿ ಕೆಂಪಣ್ಣ ನೇತೃತ್ವದ ನಿಯೋಗ ಮಂಗಳವಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಬಾಕಿ ಬಿಲ್‌ಗಳನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ. 

published on : 18th October 2023

ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಐಟಿ ದಾಳಿ; 94 ಕೋಟಿ ರೂ. ನಗದು, ಚಿನ್ನಾಭರಣಗಳ ವಶ

ಕರ್ನಾಟಕ ಮತ್ತು ಕೆಲವು ಇತರ ರಾಜ್ಯಗಳಲ್ಲಿ ಸರ್ಕಾರಿ ಗುತ್ತಿಗೆದಾರರು ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯು (ಐಟಿ ಇಲಾಖೆ) 94 ಕೋಟಿ ರೂ. ನಗದು, 8 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳು ಮತ್ತು ವಿದೇಶಿ ನಿರ್ಮಿತ 30 ಐಷಾರಾಮಿ ವಾಚ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಸಿಬಿಡಿಟಿ ಸೋಮವಾರ ತಿಳಿಸಿದೆ.

published on : 16th October 2023

ಬಾಕಿ ಪಾವತಿಗಾಗಿ ಗುತ್ತಿಗೆದಾರರ ಆಗ್ರಹ: ಕೆಂಪಣ್ಣ ಸಿಎಂ ಭೇಟಿ, ಬಿಲ್​ ಬಿಡುಗಡೆ ಕುರಿತು ಸಿದ್ದರಾಮಯ್ಯ ಭರವಸೆ

ಬಾಕಿಯಿರುವ ಬಿಲ್ ಗಳನ್ನು ಒಂದು ತಿಂಗಳೊಳಗಾಗಿ ಕ್ಲೀಯರ್ ಮಡುವಂತೆ ಸರ್ಕಾರಕ್ಕೆ ಗಡುವು ನೀಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಇಂದು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದರು.

published on : 15th October 2023

ಬಾಕಿ ಬಿಲ್‌ಗಳ ಬಿಡುಗಡೆಗೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಗುತ್ತಿಗೆದಾರರ ಸಂಘ

ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಶನಿವಾರ ಭೇಟಿ ಮಾಡಿದರು.  ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು 30 ದಿನಗಳಲ್ಲಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಗುತ್ತಿಗೆದಾರರು ಮುಷ್ಕರ ನಡೆಸಲಿದ್ದಾರೆ ಎಂದು ಒತ್ತಾಯಿಸಿದರು.

published on : 14th October 2023

ಗುತ್ತಿಗೆದಾರರ ಶೇಕಡಾ 60 ರಿಂದ 70ರಷ್ಟು ಬಿಲ್ ಗಳ ಪಾವತಿಗೆ ಆದೇಶ ಮಾಡಿದ್ದೇವೆ: ಡಿಕೆ ಶಿವಕುಮಾರ್

ಗುತ್ತಿಗೆದಾರರ ಶೇಕಡಾ 60 ರಿಂದ 70ರಷ್ಟು ಬಿಲ್ ಬಿಡುಗಡೆಗೆ ಆದೇಶ ಮಾಡಿದ್ದೇವೆ. ತನಿಖೆ ಪೆಂಡಿಂಗ್ ಇದ್ದರೂ ಬಿಲ್​ ಬಿಡುಗಡೆಗೆ ಆದೇಶ ಮಾಡಿದ್ದೇವೆ. ಗುತ್ತಿಗೆದಾರರಿಗೆ ಸಹಾಯ ಆಗಬೇಕು ಎಂದು ಆದೇಶ ನೀಡಿದ್ದೇವೆ. ಹಿರಿತನ ಆಧಾರದ ಮೇಲೆ ಬಿಲ್ ಬಿಡುಗಡೆ ಮಾಡಿದ್ದೇವೆ.

published on : 13th October 2023

ಸರ್ಕಾರದ ಹೊಸ ನಿಯಮ: ಗುತ್ತಿಗೆದಾರರಿಂದಲೇ 5 ವರ್ಷ ರಸ್ತೆ ನಿರ್ವಹಣೆ; ಸತೀಶ್‌ ಜಾರಕಿಹೊಳಿ ಘೋಷಣೆ

ಇನ್ನು ಮುಂದೆ ನಮ್ಮ ರಾಜ್ಯದ ರಸ್ತೆಗಳನ್ನು ನಿರ್ಮಾಣ ಮಾಡಿದ ಗುತ್ತಿಗೆದಾರರೇ  ಐದು ವರ್ಷದವರೆಗೆ ನಿರ್ವಹಣೆ ಮಾಡಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತರುತ್ತಿದ್ದೇವೆ. ಇಲ್ಲಿಯವರೆಗೆ ಈ ರೂಲ್ಸ್ ಇರಲಿಲ್ಲ.

published on : 14th September 2023

ಆತ್ಮಹತ್ಯೆ ಬೆದರಿಕೆ ಆರೋಪ: ಬಿಬಿಎಂಪಿ ಗುತ್ತಿಗೆದಾರರ ವಿರುದ್ಧ ಎಫ್​ಐಆರ್ ದಾಖಲು

ಬಿಬಿಎಂಪಿ ಗುತ್ತಿಗೆದಾರರು ಹಾಗೂ ರಾಜ್ಯ ಸರ್ಕಾರದ ನಡುವಿನ ಹಗ್ಗಜಗ್ಗಾಟ ಮತ್ತಷ್ಟು ತಾರಕಕ್ಕೇರಿದೆ. ಬಾಕಿ ಬಿಲ್​ ಬಿಡುಗಡೆ ಮಾಡುವಂತೆ ಆಗ್ರಹಿಸಿ ಆತ್ಮಹತ್ಯೆ ಬೆದರಿಕೆ ಹಾಕಿದ್ದ ಗುತ್ತಿಗೆದಾರರ ವಿರುದ್ಧ ಎಫ್ಐಆರ್ ದಾಖಲಾಗಿದೆ.

published on : 17th August 2023

ಡಿ.ಕೆ.ಶಿವಕುಮಾರ್‌ ನನ್ನ ಬಳಿ ಕಮಿಷನ್‌ ಕೇಳಿಲ್ಲ: ಉಲ್ಟಾ ಹೊಡೆದ ಗುತ್ತಿಗೆದಾರರು; ಬಿಜೆಪಿಯ ಪ್ರತಿಭಟನೆ ಉತ್ಸಾಹಕ್ಕೆ ತಣ್ಣೀರು!

ಕಾಮಗಾರಿ ಬಿಲ್‌ ಪಾವತಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕಮಿಷನ್‌ ಕೇಳುತ್ತಿದ್ದಾರೆ ಎಂದು ನೇರ ಆಪಾದನೆ ಮಾಡಿದ್ದ ಬಿಬಿಎಂಪಿ ಗುತ್ತಿಗೆದಾರ ಹೇಮಂತ್‌ ಯೂ ಟರ್ನ್ ಹೊಡೆದಿದ್ದಾರೆ.

published on : 15th August 2023

ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ: ಡಿಕೆ ಶಿವಕುಮಾರ್

ಕರ್ನಾಟಕದಲ್ಲಿ ಗುತ್ತಿಗೆದಾರರು ಮತ್ತು ಕಾಂಗ್ರೆಸ್ ಸರ್ಕಾರದ ನಡುವಿನ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇದು ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ನಡೆಸುತ್ತಿರುವ ಅಪಪ್ರಚಾರ ಎಂದು ಶನಿವಾರ ಹೇಳಿದ್ದಾರೆ.

published on : 12th August 2023

ತನಿಖೆಯಾಗದೆ ಬಾಕಿ ಬಿಲ್ ಪಾವತಿ ಇಲ್ಲ; ಡಿಸೆಂಬರ್-ಜನವರಿಯಲ್ಲಿ 'ಯುವನಿಧಿ' ಜಾರಿ: ಸಿದ್ದರಾಮಯ್ಯ

ಪ್ರಸಕ್ತ ವರ್ಷ ಪದವಿ, ಡಿಪ್ಲೊಮಾ ಮುಗಿಸಿದ ಇನ್ನು ಆರು ತಿಂಗಳೊಳಗೆ ಕೆಲಸ ಸಿಗದಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರದಿಂದ ಸಹಾಯ ಧನ ನೀಡುವ ಯುವನಿಧಿ ಯೋಜನೆಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

published on : 12th August 2023

ಡಿ.ಕೆ.ಶಿವಕುಮಾರ್ ಯಾವುದೇ ಕಮಿಷನ್ ಕೇಳಿಲ್ಲ: ಬಿಬಿಎಂಪಿ ಗುತ್ತಿದಾರರ ಸಂಘ

ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ನಮ್ಮಿಂದ ಯಾವುದೇ ಕಮಿಷನ್ ಕೇಳಿಲ್ಲ ಎಂದು ಬಿಬಿಎಂಪಿ ಗುತ್ತಿಗೆದಾರ ಸಂಘ ಸ್ಪಷ್ಟಪಡಿಸಿದೆ.

published on : 11th August 2023

ಬಾಕಿ ಬಿಲ್ ಪಾವತಿ; ಪ್ರಾಮಾಣಿಕವಾಗಿ ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ನ್ಯಾಯ ಸಿಗಲಿದೆ: ಡಿಕೆ ಶಿವಕುಮಾರ್

ಬಾಕಿ ಉಳಿದಿರುವ ಬಿಲ್ ಕುರಿತು ಬಿಬಿಎಂಪಿ ಗುತ್ತಿಗೆದಾರರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ, ಈ ಸಂಬಂಧ ವಿಚಾರಣೆ ನಡೆಸುತ್ತಿದ್ದು, ಕಾಮಗಾರಿ ಕೈಗೆತ್ತಿಕೊಂಡು ಪ್ರಾಮಾಣಿಕವಾಗಿ ಪೂರ್ಣಗೊಳಿಸಿರುವವರಿಗೆ ನ್ಯಾಯ ಒದಗಿಸಲಾಗುವುದು ಎಂದು ಹೇಳಿದರು.

published on : 10th August 2023
1 2 > 

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9