ಬಸ್ ಚಾಲನೆ ವೇಳೆ ಹೃದಯ ಸ್ತಂಭನ: ಸಾವಿನಂಚಿನಲ್ಲೂ 35 ಜನರ ಪ್ರಾಣ ಉಳಿಸಿದ ಚಾಲಕ

ಬಸ್ ಚಾಲನೆ ಮಾಡುತ್ತಿರುವಾಗಲೇ ಹೃದಯ ಸ್ತಂಭನಕ್ಕೊಳಗಾಗಿದ್ದರೂ 35 ಜನರ ಪ್ರಾಣ ಉಳಿಸಿ ಚಾಲಕನೊಬ್ಬ ಮೃತಪಟ್ಟಿಸುವ ಘಟನೆ ತುಮಕೂರು ಜಿಲ್ಲೆಯ ಶಿರಾ ಸಮೀಪದ ಲಕ್ಕನಹಳ್ಳಿಯಲ್ಲಿ...
ಹಳ್ಳಕ್ಕೆ ಉರುಳುತ್ತಿರುವ ಬಸ್
ಹಳ್ಳಕ್ಕೆ ಉರುಳುತ್ತಿರುವ ಬಸ್
ತುಮಕೂರು: ಬಸ್ ಚಾಲನೆ ಮಾಡುತ್ತಿರುವಾಗಲೇ ಹೃದಯ ಸ್ತಂಭನಕ್ಕೊಳಗಾಗಿದ್ದರೂ 35 ಜನರ ಪ್ರಾಣ ಉಳಿಸಿ ಚಾಲಕನೊಬ್ಬ ಮೃತಪಟ್ಟಿಸುವ ಘಟನೆ ತುಮಕೂರು ಜಿಲ್ಲೆಯ ಶಿರಾ ಸಮೀಪದ ಲಕ್ಕನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ನಾಗರಾಜು (45) ಮೃತಪಟ್ಟ ಚಾಲಕನಾಗಿದ್ದು, ಮಧುಗಿರಿಯ ನಿವಾಸಿಯಾಗಿದ್ದಾರೆ. ಅಮರಾಪುರದಿಂದ ಶಿರಾ ಕಡೆಗೆ ನಾಗರಾಜು ಖಾಸಗಿ ಬಸ್'ನ್ನು ಚಲಾಯಿಸಿಕೊಂಡು ಬರುತ್ತಿದ್ದರು. ಬೆಳಿಗ್ಗೆ 7.30ರ ಸುಮಾರಿಗೆ ಲಕ್ಕನಹಳ್ಳಿ ಬಸ್ ನಿಲ್ದಾಣಕ್ಕೆ ಬಸ್ ಬಂದಿದೆ. 
ಬಸ್ಸಿನಲ್ಲಿ 35 ಪ್ರಯಾಣಿಕರು ಇದ್ದರು, ಲಕ್ಕನಹಳ್ಳಿ ಬಿಟ್ಟ ಸ್ವಲ್ಪ ಸಮಯದಲ್ಲಿಯೇ ನಾಗರಾಜು ಎದೆ ಮೇಲೆ ಕೈ ಇಟ್ಟುಕೊಂಡು ನೋವಿನಿಂದ ಬಳಲುತ್ತಲೇ ತಕ್ಷಣ ಬಸ್ ನ ಬ್ರೇಕ್ ಒತ್ತಿದ್ದಾರೆ. ಈ ವೇಳೆ ಒಂದು ಹಂತದಲ್ಲಿ ಬಸ್ ರಸ್ತೆ ಬದಿಗೆ ಹೋಗಿದೆ. ಅಷ್ಟರಲ್ಲಾಗಲೇ ನಾಗರಾಜು ಮೃತಪಟ್ಟಿದ್ದಾರೆ. ಆಗ ಪಕ್ಕದಲ್ಲೇ ಕುಳಿತಿದ್ದ ಬಸ್ ಏಜೆಂಟ್ ಮಾರುತಿ ಎಂಬುವವರು ಬಸ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. 
ಇದರಿಂದಾಗಿ ಬಸ್ ಹಳ್ಳಕ್ಕೆ ಉರುಳುವುದು ತಪ್ಪಿದೆ. ಘಟನೆ ವೇಳೆ ಬಸ್ ನ ಮುಂಭಾಗದ ಚಕ್ರಗಳು ರಸ್ತೆ ಬಿಟ್ಟು ಹಳ್ಳಕ್ಕೆ ಇಳಿದಿತ್ತು. ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು ಚಾಲಕನಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಈ ಸಂಬಂಧ ಪಟ್ಟನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com