ಮೈಸೂರು: ಗಂಡು ಮಕ್ಕಳಾಗಿಲ್ಲವೆಂಬ ಕಾರಣಕ್ಕೆ ಮಹಿಳೆ ಮತ್ತು ಇಬ್ಬರು ಹೆಣ್ಣು ಮಕ್ಕಳ ದಹನ

30 ವರ್ಷದ ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣು ಮಕ್ಕಳನ್ನು ತಂಬಾಕು ಕಣಜದಲ್ಲಿ ಹಾಕಿ ಸುಟ್ಟಿರುವ ಘಟನೆ ಮೈಸೂರಿನ ರಾಜನ ಬೆಳಗುಲಿಯಲ್ಲಿ ...
ಮೃತ ಮಹಿಳೆ ಕುಸುಮಾ ಮತ್ತು ಆಕೆಯ ಮಕ್ಕಳು
ಮೃತ ಮಹಿಳೆ ಕುಸುಮಾ ಮತ್ತು ಆಕೆಯ ಮಕ್ಕಳು

ಮೈಸೂರು: 30 ವರ್ಷದ ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣು ಮಕ್ಕಳನ್ನು ತಂಬಾಕು ಕಣಜದಲ್ಲಿ ಹಾಕಿ ಸುಟ್ಟಿರುವ ಘಟನೆ ಮೈಸೂರಿನ ರಾಜನ ಬೆಳಗುಲಿಯಲ್ಲಿ ನಡೆದಿದೆ,

ಜನವರಿ 28 ರಂದು ಘಟನೆ ನಡೆದಿತ್ತು, ಆದರೆ ಕಳೆದ ಶನಿವಾರವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಿಳೆ ಸಹೋದರ ಬಿ.ಕೆ ಯುವರಾಜ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫೆಬ್ರವರಿ 17 ರಂದು ಈ ಸಂಬಂಧ  ದೂರು ದಾಖಲಾಗಿದೆ. ಮೈಸೂರು ಎಸ್ ಪಿ ರವಿ ಡಿ. ಚನ್ನಣ್ಣನವರ್ ಪ್ರಕರಣ ಸಂಬಂಧ ಮಧ್ಯ ಪ್ರವೇಶಿಸಿದ್ದಾರೆ.

ಜನವರಿ 28 ರಂದು ಕುಸುಮಾ, ಮಕ್ಕಳಾದ ಕಾವ್ಯಾ, ಮತ್ತು ಪ್ರಣೀತಾ ರಾಜನಬೆಳಗುಲಿಯಲ್ಲಿರುವ ತಮ್ಮ ಮನೆಯಲ್ಲಿ ಬೆಂಕಿಗೆ ಬಲಿಯಾಗಿದ್ದರು. ಕುಸುಮಾ ಪತಿ ದೇವರಾಜು ಮತ್ತು ಆತನ ಆರು ಮಂದಿ ಸಂಬಂಧಿಕರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ನಂಬಿಸಿ, ಗ್ರಾಮದ ಹೊರವಲಯದಲ್ಲಿ ಮೂವರ ದೇಹಗಳನ್ನು ಸುಟ್ಟು ಹಾಕಿದ್ದರು.ಜೊತೆಗೆ ಎಲ್ಲಾ ಸಾಕ್ಷಿಗಳನ್ನು ನಾಶ ಪಡಿಸಿದ್ದರು.

ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಸುಮಾ ಪತಿ ಆರೋಪಿಸಿದ್ದ, ಕುಸುಮಾ ಸಹೋದರ, ಯುವರಾಜ ಇದೇ ವೇಳೆ ಗ್ರಾಮಕ್ಕೆ ಆಗಮಿಸಿದ್ದರು.ಅಲ್ಲಿ ತಮ್ಮ ಸಹೋದರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದನ್ನು ಸಾಬೀತು ಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿರಲಿಲ್ಲ,  ತನ್ನ ಸಹೋದರಿ ಹಾಗೂ ಮಕ್ಕಳನ್ನು ತಂಬಾಕು ಕ್ಯೂರಿಂಗ್ ಮಾಡುವ ಕಣಜದೊಳಗೆ ಹಾಕಿ ಸುಡಲಾಗಿದೆ ಎಂದು ಯುವರಾಜ ಆರೋಪಿಸಿದ್ದಾರೆ.

ಜಿಲ್ಲಾ ಎಸ್ ಪಿ ಅವರನ್ನು ಭೇಟಿ ಮಾಡಿ, ತನ್ನ ಅಕ್ಕನಿಗೆ ಗಂಡು ಮಗು ಆಗಲಿಲ್ಲ ಎಂಬ ಕಾರಣಕ್ಕೆ ಕುಸುಮಾ ಪತಿ ದೇವರಾಜ್ ಕಿರುಕುಳ ನೀಡುತ್ತಿದ್ದ. ದಂಪತಿಗೆ ಈ ಮೊದಲು ಹುಟ್ಟಿದ ಎರಡು ಮಕ್ಕಳು ಸ್ವಲ್ಪ ದಿನಗಳಲ್ಲೇ ನಿಗೂಡವಾಗಿ ಸಾವನ್ನಪ್ಪಿದ್ದವು, ಸಾಯುವ ಕೆಲ ದಿನಗಳ ಮುನ್ನ ಕುಸುಮಾ ತನ್ನ ಗಂಡನಿಂದ ಕಿರುಕುಳ ತಡೆಯಾಲಗುತ್ತಿಲ್ಲ ಎಂದು ಹೇಳಿಕೊಂಡಿದ್ದಾಗಿ ಯುವರಾಜ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸುವುದಾಗಿ ಎಸ್ ಪಿ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com