ವಂಶೋದ್ಧಾರಕನ ಬಯಕೆ: ತುಮಕೂರಿನಲ್ಲಿ 12ನೇ ಬಾರಿಗೆ ಗಂಡುಮಗುವಿಗೆ ಜನ್ಮವಿತ್ತ ಮಹಿಳೆ

ಗಂಡು ಮಗು ಬೇಕೆಂಬ ದಂಪತಿಯ ಬಯಕೆಯಿಂದ ಸತತ 11 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ 12 ನೇ ಬಾರಿಗೆ ಗಂಡು ಮಗುವಿಗೆ ಜನ್ಮ ...
ಭಾಗ್ಯಮ್ಮ
ಭಾಗ್ಯಮ್ಮ

ತುಮಕೂರು: ಗಂಡು ಮಗು ಬೇಕೆಂಬ ದಂಪತಿಯ ಬಯಕೆಯಿಂದ ಸತತ 11 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ 12 ನೇ ಬಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕುರ್ಕೇನಹಳ್ಳಿ ಎಂಬ ಕುಗ್ರಾಮದ ಭಾಗ್ಯಮ್ಮ ಎಂಬ 40 ವರ್ಷದ ಮಹಿಳೆ ಈ ಮೊದಲು 11 ಹೆಣ್ಣ ಮಕ್ಕಳನ್ನು ಹೆತ್ತಿದ್ದರು. 12ನೇ ಬಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಶುಕ್ರವಾರ ಭಾಗ್ಯಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಆರೋಗ್ಯ ತಪಾಸಣೆಗಾಗಿ ಆ್ಯಂಬುಲೆನ್ಸ್ ನಲ್ಲಿ ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ, ಅಲ್ಲಿ ವೈದ್ಯರು ಇಲ್ಲದಿದ್ದ ಕಾರಣ ನರ್ಸ್ ಮಗುವಿನ ಆರೋಗ್ಯ ತಪಾಸಣೆ ನಡೆಸಿದ್ದಾರೆ, ಮಗು ಆರೋಗ್ಯದಿಂದ ಇರುವುದಾಗಿ ಹೇಳಿ ಕಳುಹಿಸಿದ್ದಾರೆ.

ನಂತರ ದಂಪತಿ ಅಲ್ಲಿಂದ 22 ಕಿಮೀ ದೂರವಿರುವ ಹಿಂದೂಪುರದ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ತಾಯಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ನಂತರ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಕರೆ ತಂದಿದ್ದಾಗಿ ಭಾಗ್ಯಮ್ಮ ಪತಿ ರಾಮಕೃಷ್ಣಪ್ಪ ಹೇಳಿದ್ದಾರೆ.

16 ವರ್ಷದ ಹಿಂದೆ ಭಾಗ್ಯಮ್ಮ ಮತ್ತು ರಾಮಕೃಷ್ಣಪ್ಪ ವಿವಾಹವಾಗಿದ್ದರು. ಸಮಾಜದಲ್ಲಿ, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಪುತ್ರ ಸಂತಾನ ಇಲ್ಲದವರನ್ನು ಕೀಳಾಗಿ ಕಾಣಲಾಗುತ್ತದೆ. ಹಾಗಾಗಿ ನಾವು ಗಂಡು ಮಗುವಿಗಾಗಿ ಇಷ್ಟು ಪಾಡು ಪಡೆಬೇಕಾಯಿತು ಎಂದು ಹೇಳಿದ್ದಾರೆ.

ನಮ್ಮ ಉಳಿದ ಮಕ್ಕಳಿಗೆ ಊಟ, ಬಟ್ಟೆ, ಹಾಗೂ ವಿದ್ಯಾಭ್ಯಾಸಕ್ಕೆ ಕೊರತೆ ಮಾಡಿಲ್ಲ, ಈ ದಂಪತಿಯ 5 ಮತ್ತು8ನೇ ಹೆಣ್ಣು ಮಕ್ಕಳು ಹುಟ್ಟಿದ ಕೂಡಲೇ ಸಾವನ್ನಪ್ಪಿದ್ದವು.

ರಾಮಕೃಷ್ಣಪ್ಪಗೆ 1.30 ಎಕರೆ ಜಮೀನು ಇದ್ದು, 20 ಕುರಿಗಳನ್ನು ಸಾಕಿದ್ದಾರೆ. ಈ ದಂಪತಿಯ ಇಬ್ಬರು ಮಕ್ಕಳಾದ ಶ್ವೇತಾ(20), ಉಮಾದೇವ್(17) ಎಸ್ ಎಸ್ ಎಲ್ ಸಿ ಮುಗಿಸಿ, ಹಿಂದೂಪುರದ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ತಿಂಗಳಿಗೆ 7 ಸಾವಿರ ರು ಸಂಪಾದಿಸಿ,  ಆರ್ಥಿಕ ಹೊರೆ ಕಡಿಮೆ ಮಾಡಿದ್ದಾರೆ.

ಮೂರನೇ ಮಗಳು ಚಂದ್ರಕಲಾ 10ನೇ ತರಗತಿ  ಪರೀಕ್ಷೆ ಬರೆದು ವಿದ್ಯಾಭ್ಯಾಸ ನಿಲ್ಲಿಸಿದ್ದಾಳೆ. ಮತ್ತೊಬ್ಬಳು ಸೌಜನ್ಯ 8ನೇ ತರಗತಿಯಲ್ಲಾ ವ್ಯಾಸಂಗ ಮಾಡುತ್ತಿದ್ದಾಳೆ. ಉಳಿದ ಮಕ್ಕಳಾದ ಪವಿತ್ರ, ಸಿರಿಶಾ, ಮೇಘನಾ 5,4 ಮತ್ತು 1ನೇ ತರಗತಿಯಲ್ಲಿ ಓದುತ್ತಿದ್ದಾರೆ. ಚಿಕ್ಕ ಮಕ್ಕಳಾದ ಅಖಿಲಾ ಮತ್ತು ಸೌಮ್ಯ ಅಂಗನವಾಡಿಗೆ ತೆರಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com