ಮಾಧ್ಯಮಗಳನ್ನು ನಿಯಂತ್ರಿಸಲು ಹೊರಟಿರುವುದು ಆರೋಗ್ಯಕರ ಬೆಳವಣಿಗೆಯಲ್ಲ: ಸುರೇಶ್ ಕುಮಾರ್

ಮಾಧ್ಯಮಗಳ ನಿಯಂತ್ರಣಕ್ಕೆ ಜಂಟಿ ಸದನ ಸಮಿತಿ ರಚಿಸಲು ಹೊರಟಿರುವ ರಾಜ್ಯ ಸರ್ಕಾರದ...
ಎಸ್. ಸುರೇಶ್ ಕುಮಾರ್
ಎಸ್. ಸುರೇಶ್ ಕುಮಾರ್
Updated on
ಬೆಂಗಳೂರು: ಮಾಧ್ಯಮಗಳ ನಿಯಂತ್ರಣಕ್ಕೆ ಜಂಟಿ ಸದನ  ಸಮಿತಿ ರಚಿಸಲು ಹೊರಟಿರುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಎಸ್. ಸುರೇಶ್ ಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳನ್ನು ನಿಯಂತ್ರಿಸುವುದು  ಒಳ್ಳೆಯ ಬೆಳವಣಿಗೆಯಲ್ಲ. ಈ ತೀರ್ಮಾನದ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವಂತೆ ವಿಧಾನಸಭಾಧ್ಯಕ್ಷರನ್ನು ಅವರು ಮನವಿ ಮಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯಾದ, ಆರೋಗ್ಯಕರ ನಿರ್ಧಾರ ಎಂದು ಭಾವಿಸಬೇಡಿ. ಈ ವಿಷಯದ ಬಗ್ಗೆ ಮತ್ತೊಮ್ಮೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ನಾನು ವಿಧಾನಸಭಾಧ್ಯಕ್ಷರನ್ನು ಮನವಿ ಮಾಡುತ್ತೇನೆ. ಏನಾಗಿದೆ ಮತ್ತು ಮಾಧ್ಯಮಗಳಿಗೆ ಏನು ಅಗತ್ಯ ಎಂಬುದನ್ನು ಮತ್ತೊಮ್ಮೆ ಮೌಲ್ಯಮಾಪನ ಮಾಡುವಂತೆ ಅವರು ಮನವಿ ಮಾಡಿಕೊಂಡರು.
ಸದನಕ್ಕೆ ತನ್ನದೇ ಆದ ಸಂಪ್ರದಾಯವಿರುವುದರಿಂದ ಸಮಿತಿಯನ್ನು ರಚಿಸಲು ಆಗುವುದಿಲ್ಲ. ಈ ಸಮಿತಿಯ ರಚನೆ ಹಿಂದಿರುವ ತಾರ್ಕಿಕತೆಯನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ. ಇಲ್ಲಿ ದೂರು ನೀಡುವವರು ಪ್ರಾಸಿಕ್ಯೂಟರ್ ಆಗುತ್ತಾರೆ. ಶಿಫಾರಸ್ಸಿನ ಆಧಾರದಲ್ಲಿ ಅವರು ತೀರ್ಮಾನವನ್ನುಹೊರಡಿಸುತ್ತಾರೆ ಎಂದು ಹೇಳಿದರು.
ವಿಧಾನಮಂಡಲದ ಉಭಯ ಸದನಗಳ ಸದಸ್ಯರ ಆಗ್ರಹದಂತೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಪ್ರಸಾರ ಗುಣಮಟ್ಟದಿಂದ ಸಾರ್ವಜನಿಕರ ಮೇಲೆ ಆಗುತ್ತಿರುವ ಪರಿಣಾಮ ನಿಯಂತ್ರಣ ಅಧ್ಯಯನಕ್ಕಾಗಿ ಸಚಿವ ಕೆ.ಆರ್.ರಮೇಶ್ ಕುಮಾರ್ ನೇತೃತ್ವದಲ್ಲಿ 12 ಮಂದಿ ಸದಸ್ಯರ ಜಂಟಿ ಸದನ ಸಮಿತಿ ರಚಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com