ಬಿಇಎಂಎಲ್ ನಿಂದ ನಮ್ಮ ಮೆಟ್ರೋಗೆ 150 ಬೋಗಿ ಪೂರೈಕೆ

ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ ಮತ್ತು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿವೆ.
ಬಿಇಎಂಎಲ್
ಬಿಇಎಂಎಲ್

ಬೆಂಗಳೂರು: ಭಾರತ್ ಅರ್ತ್ ಮೂವರ್ಸ್ ಲಿಮಿಟೆಡ್ ಮತ್ತು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿವೆ.

1,421 ಕೋಟಿ ರು ವೆಚ್ಚದಲ್ಲಿ ನಮ್ಮ ಮೆಚ್ರೋಗೆ 150 ಇಂಟರ್ ಮಿಡಿಯಟ್ ಕೋಚ್ ಗಳ ನಿರ್ಮಾಣಕ್ಕಾಗಿ ಕರಾರು ಮಾಡಿಕೊಳ್ಳಲಾಗಿದೆ. ಮೆಟ್ರೋ ಮ್ಯಾನೇಜಿಂಗ್ ಡೈರೆಕ್ಟರ್ ಪ್ರದೀಪ್ ಸಿಂಗ್ ಖರೋಲಾ ಮತ್ತು ಬಿಇಎಂಲ್ ಅಧ್ಯಕ್ಷ ದೀಪಕ್ ಕುಮಾರ್ ಹೊಟಾ ನಡುವೆ ಸೋಮವಾರ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.

150 ಮಧ್ಯದ ಬೋಗಿಗಳ ವಿನ್ಯಾಸ, ಉತ್ಪಾದನೆ, ಪೂರೈಕೆ ಪರೀಕ್ಷೆ ಮತ್ತು ಅಳವಡಿಕೆಗಾಗಿ ಬಿಎಂ ಆರ್ ಸಿಎಲ್ ಟೆಂಡರ್ ಕರೆದಿತ್ತು. ಈ ಟೆಂಡರ್ ಬಿಇಎಂಎಲ್ ಪಾಲಾಗಿದೆ, ಫ್ರೆಂಚ್ ಡೆವಲಪ್ ಮೆಂಟ್ ಏಜೆನ್ಸಿ ಮೆಟ್ರೋ ಗೆ ಸಾಲ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com