ಗಸ್ತು ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ; ಇನ್ನುಂದೆ ಶೇ.90ರಷ್ಟು ಪೊಲೀಸರು ಬೀಟ್ ತಿರುಗಲೇಬೇಕು!

ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯುವ ಸಲುವಾಗಿ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ ದತ್ತಾ ಅವರು ಹೊರ ಆದೇಶವನ್ನು...
ಪೊಲೀಸ್ ಗಸ್ತು
ಪೊಲೀಸ್ ಗಸ್ತು
ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯುವ ಸಲುವಾಗಿ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ ದತ್ತಾ ಅವರು ಹೊಸ ಆದೇಶವನ್ನು ಹೊರಡಿಸಿದ್ದು ಇದರ ಅನ್ವಯ ಶೇಖಡ 90ರಷ್ಟು ಪೊಲೀಸರು ಗಸ್ತು ತಿರುಗಬೇಕಿದೆ. 
ಹೌದು, ಪೊಲೀಸ್ ಬೀಟ್ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಗಳನ್ನು ಮಾಡಲಾಗಿದ್ದು, ಇನ್ನುಂದೆ ಶೇ. 90ರಷ್ಟು ಪೊಲೀಸರು ಗಸ್ತು ತಿರುಗಬೇಕಿದೆ. ಪ್ರದೇಶಕೊಬ್ಬ ಪೊಲೀಸ್ ತತ್ವದಡಿಯಲ್ಲಿ ಬೀಟ್ ವ್ಯವಸ್ಥೆ ಜಾರಿಗೆ ಬರಲಿದೆ. ಪೇದೆ ಮತ್ತು ಮುಖ್ಯಪೇದೆ ಸಂಖ್ಯೆಗೆ ಅನುಗುಣವಾಗಿ ಗಸ್ತು ತಿರುಗುವ ವ್ಯವಸ್ಥೆಗೆ ರಾಜ್ಯ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. 
ಪೊಲೀಸರು ತಮಗೆ ವಹಿಸಿರುವ ಜವಾಬ್ದಾರಿಯ ಜತೆಗೆ ಗುಸ್ತು ತಿರುಗಬೇಕಿದೆ. ಅಲ್ಲದೆ ರಾತ್ರಿ ವೇಳೆಯೂ ವಿಶೇಷ ಬೀಟ್ ವ್ಯವಸ್ಥೆಗೆ ನಿರ್ಧಾರ ಕೈಗೊಳ್ಳಲಾಗಿದ್ದು. ಪ್ರತಿ ಬೀಟ್ ನಲ್ಲಿಯೂ ನಾಗರಿಕರ ಸದಸ್ಯರೊಬ್ಬರನ್ನು ನೇಮಕ ಮಾಡಲಾಗುತ್ತದೆ. ಬಳಿಕ ತಿಂಗಳಿಗೊಮ್ಮೆ ಬೀಟ್ ಪೊಲೀಸ್ ಮತ್ತು ನಾಗರಿಕ ಸದಸ್ಯರ ಜತೆ ಆಯಾ ಠಾಣಾಧಿಕಾರಿಗಳ ಸಮ್ಮುಖದಲ್ಲೇ ಸಭೆ ನಡೆಯಲಿದೆ ಎಂದು ಆರ್ ಕೆ ದತ್ತಾ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com