ಕೇಂದ್ರದ ಅನುದಾನ ದುರ್ಬಳಕೆ: ಪಾಲಿಕೆಗೆ ಡಿ.ವಿ ಸದಾನಂದಗೌಡ ಎಚ್ಚರಿಕೆ

ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಕಾನೂನು ಕ್ರಮ ...
ಡಿ.ವಿ ಸದಾನಂದಗೌಡ
ಡಿ.ವಿ ಸದಾನಂದಗೌಡ

ಬೆಂಗಳೂರು: ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಎಚ್ಚರಿಕೆ ನೀಡಿದ್ದಾರೆ.

ಕಳೆದ ವರ್ಷ ಕೇಂದ್ರ ಸರ್ಕಾರ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು.  ರಾಜಕಾಲುವೆ ಅಭಿವೃದ್ಧಿ, ಪಾರ್ಕಿಂಗ್ ಸಂಕೀರ್ಣಕ್ಕೆ ತಲಾ 50 ಕೋಟಿ ರೂ. ಹಾಗೂ ರಸ್ತೆ, ಮೇಲ್ಸೇತುವೆ ನಿರ್ಮಾಣಕ್ಕೆ 30 ಕೋಟಿ ರೂ. ಹಣವನ್ನು ಮೀಸಲಿಟ್ಟಿತ್ತು, ಆದರೆ, ಈ ಹಣವನ್ನು ಬಿಬಿಎಂಪಿ ಉದ್ದೇಶಿತ ಕಾಮಗಾರಿಗೆ ಬಳಸಿಲ್ಲ. ಹೀಗೆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸುವುದನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಲಿದೆ ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಬಿಬಿಎಂಪಿಯ ನ್ಯೂನತೆಗಳ ಹೊರತಾಗಿಯೂ 9,241 ಕೋಟಿ ರೂ. ಬಜೆಟ್ ಮಂಡಿಸಲಾಗಿದೆ. ಇದರಲ್ಲಿ ಶೇ. 46 ಹಣವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರದ ಅನುದಾನದಿಂದಲೇ ನಿರೀಕ್ಷಿಸಲಾಗಿದೆ. ತೆರಿಗೆ ಸಂಗ್ರಹದಲ್ಲಿ ಈ ಬಾರಿಯೂ ನಿರೀಕ್ಷಿತ ಗುರಿ ಮುಟ್ಟಲಾಗಿಲ್ಲ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 2,600 ಕೋಟಿ ರೂ. ಗುರಿ ಹೊಂದಿದ್ದರೂ  ಕೇವಲ 1,600 ಕೋಟಿ ರೂ. ಮಾತ್ರ ತೆರಿಗೆ ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.

ಜಾಹೀರಾತು ತೆರಿಗೆಯಲ್ಲಿ ಸಾಕಷ್ಟು ಆದಾಯ ಸಂಗ್ರಹಿಸಬಹುದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 5 ಕಿ.ಮೀ. ವ್ಯಾಪ್ತಿಯಲ್ಲಿಯೇ 200 ಕೋಟಿ ರೂ. ಸಂಗ್ರಹ ಮಾಡುವ ಅವಕಾಶವಿದೆ ಎಂದು ಹೇಳಿದ್ದಾರೆ. ಟ್ರೇಡ್ ಲೈಸೆನ್ಸ್ ವ್ಯಾಪ್ತಿಗೆ 5 ಲಕ್ಷ ವಾಣಿಜ್ಯ ಸಂಸ್ಥೆ ಸೇರಿಸುವ ಅವಕಾಶವಿದ್ದರೂ 60 ಸಾವಿರ ಸಂಸ್ಥೆಗಳನ್ನು ಸೇರಿಸಲಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com