ರಾಜ್ಯದಲ್ಲಿ ಇಂದಿನಿಂದ ಲಾರಿ ಮಾಲೀಕರ ಮುಷ್ಕರ: ದೈನಂದಿನ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ

: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಲಾರಿ ಮಾಲಿಕರ ಮತ್ತು ಏಜೆಂಟರ ಸಂಘ ಇಂದಿನಿಂದ ರಾಜ್ಯಾದ್ಯಂತ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಲಾರಿ ಮಾಲಿಕರ ಮತ್ತು ಏಜೆಂಟರ ಸಂಘ ಇಂದಿನಿಂದ ರಾಜ್ಯಾದ್ಯಂತ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಿವೆ.

ಮುಷ್ಕರದ ಹಿನ್ನೆಲೆಯಲ್ಲಿ ಇಂದಿನಿಂದ ಯಾವುದೇ ಸರಕು ಸಾಗಣೆ ಲಾರಿಗಳು ರಸ್ತೆಗಿಳಿಯುತ್ತಿಲ್ಲ. ಪ್ರಮುಖವಾಗಿ ವಿಮಾ ಕಂಪೆನಿಗಳು ಥರ್ಡ್​ ಪಾರ್ಟಿ ಪ್ರೀಮಿಯಮ್​ ದರ ಏರಿಸಿರುವುದನ್ನು ಮುಷ್ಕರದ ಮೂಲಕ ಖಂಡಿಸಲಾಗುತ್ತಿದೆ.

ಕರ್ನಾಟಕ, ತಮಿಳಉನಾಡು, ಕೇರಳ, ಆಂಧ್ರಪ್ರದೇಶ, ಪುದುಚೆರಿ ಮತ್ತು ತೆಲಂಗಾಣ  ರಾಜ್ಯಗಳಲ್ಲಿ 22 ಲಕ್ಷ ವಾಣಿಜ್ಯ ಲಾರಿಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ಜಿ.ಆರ್ ಷಣ್ಮುಗಪ್ಪ ಹೇಳಿದ್ದಾರೆ.

ಲಾರಿಗಳ ಮೂಲಕ ಡಿಸೇಲ್, ಪೆಟ್ರೋಲ್ ಗ್ಯಾಸ್ ಮತ್ತು ತರಕಾರಿ ಸಾಗಣೆ ಮಾಡಲಾಗುತ್ತದೆ. ಆದರೆ ವಿಮೆ ಕಂತಿನ ದರವನ್ನು ಏಪ್ರಿಲ್ 1 ರಿಂದ ಕಂಪನಿಗಳು ಏರಿಕೆ ಮಾಡಲು ನಿರ್ಧರಿಸಿವೆ. ಇದು ಜಾರಿಯಾದರೇ ಲಾರಿ ಮಾಲೀಕರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ದೂರಿದರು.

ಮುಷ್ಕರ ನಡೆಸುತ್ತಿರುವ ಲಾರಿ ಮಾಲೀಕರು ಗುರುವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಲಿಖಿತ ಭರವಸೆ ನೀಡಿದ ರಾಮಲಿಂಗಾ ರೆಡ್ಡಿ, 15 ವರ್ಷಗಳ ಹಳೇಯ ವಾಹನಗಳನ್ನು ರದ್ದುಗೊಳಿಸುವ ತೀರ್ಮಾನವನ್ನು ಹಿಂಪಡೆಯುತ್ತೇವೆ, ಜೊತೆಗೆ ಇನ್ನುಳಿದ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com