ಹುಬ್ಬಳ್ಳಿಯಲ್ಲೊಬ್ಬ ಆಧುನಿಕ ಶ್ರವಣಕುಮಾರ: ಆಸ್ಪತ್ರೆಗೆ ತಾಯಿಯನ್ನು ತಳ್ಳುಗಾಡಿಯಲ್ಲಿ ಕರೆತರುವ ಮಗ

ಮಂಡಿನೋವಿನಿಂದ ಬಳಲುತ್ತಿರುವ ತನ್ನ 78 ವರ್ಷದ ತಾಯಿಯನ್ನು ಪ್ರತಿವಾರ ಆಸ್ಪತ್ರೆಗೆ ತಳ್ಳುಗಾಡಿಯಲ್ಲಿ ಕೂರಿಸಿಕೊಂಡು ಹನುಮಪ್ಪ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಮಂಡಿನೋವಿನಿಂದ ಬಳಲುತ್ತಿರುವ ತನ್ನ 78 ವರ್ಷದ ತಾಯಿಯನ್ನು ಪ್ರತಿವಾರ ಆಸ್ಪತ್ರೆಗೆ ತಳ್ಳುಗಾಡಿಯಲ್ಲಿ ಕೂರಿಸಿಕೊಂಡು ಹನುಮಪ್ಪ ಕರೆ ತರುತ್ತಾರೆ.
ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕಿನ ಜುಂಜಲಕೊಪ್ಪ ಗ್ರಾಮದ 38 ವರ್ಷದ ಹನುಮಪ್ಪ ಕಲ್ಲಪ್ಪ ದಾಸರ್ ತನ್ನ 78 ವರ್ಷದ ತಾಯಿ ಹನುಮವ್ವ ಅವರನ್ನು ಕಳೆದ 2 ವರ್ಷಗಳಿಂದ ಪ್ರತಿವಾರ 2 ಕಿಮೀ ತಳ್ಳುಗಾಡಿಯಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆತರುತ್ತಾರೆ.
ಜುಂಜಲಕೊಪ್ಪ ಗ್ರಾಮದಿಂದ ಆಸ್ಪತ್ರೆಯಿರುವ ಛಲಗೇರಿ ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲದ ಕಾರಣ ವಾರದಲ್ಲಿ ಒಂದು ಬಾರಿ ಆಸ್ಪತ್ರೆಗೆ ಕರೆ ತರುತ್ತಾರೆ. ಯಾವುದೇ ಖಾಸಗಿ ವಾಹನ ಅತವಾ ಆ್ಯಂಬುಲೆನ್ಸ್ ಗೆ ದುಡ್ಡು ನೀಡಿ ಅದರಲ್ಲಿ ಪ್ರಯಾಣಿಸುವ ಶಕ್ತಿ ನಮಗಿಲ್ಲ, ತಳ್ಳುಗಾಡಿಗೆ ಯಾವ ಇಂಧನವೂ ಬೇಕಿಲ್ಲ, ಅದಕ್ಕೆ ನನ್ನ ಶಕ್ತಿ ಮಾತ್ರ ಸಾಕುಎಂದು ಹೇಳುತ್ತಾರೆ.
ತನ್ನ ಹೆಗಲ ಮೇಲೆ ಕೂರುವಂತೆ ಹನುಮಪ್ಪ ನನಗೆ ಹೇಳಿದ ಆದರೇ  ಅದು ನನಗೆ ಸರಿ ಬರುವುದಿಲ್ಲ, ಹೀಗಾಗಿ ನನ್ನ ಮಗ ತಳ್ಳು ಗಾಡಿಯಲ್ಲಿ ಕರೆದುಕೊಂಡು ಹೋಗುವ ಯೋಜನೆ ಮಾಡಿದ.ಅದು ನನಗೆ ಸರಿ ಎನಿಸಿತು. ನನ್ನ ಕಾಲು ಮಡಚಿ ಗಾಡಿಯಲ್ಲಿ ಕುಳಿಕುಕೊಳ್ಳುತ್ತೇನೆ, ತಲೆಗೆ ನನ್ನ ಸೀರೆಯ ಸೆರಗು ಸುತ್ತಿಕೊಳ್ಳುತ್ತೇನೆ  ಎಂದು ಹನುಮಕ್ಕ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com