ಚಾಮರಾಜನಗರ: ಭೀಕರ ಬರಕ್ಕೆ ತುತ್ತಾಗಿ ಸ್ಮಶಾನವಾಗುತ್ತಿದೆ ಕೃಷಿ ಭೂಮಿ

ಸಿಲಿಕಾನ್ ಸಿಟಿ ಬೆಂಗಳೂರಿನಿಂದ 170 ಕಿಮೀ ದೂರದಲ್ಲಿರುವ ಚಾಮರಾಜನಗರ ಸತತ ಎರಡನೇ ವರ್ಷವೂ ಭೀಕರ ಬರಗಾಲಕ್ಕೆ...
ಸತ್ತ ಜಾನುವಾರುಗಳ ಜೊತೆ ಬಾಲಕ
ಸತ್ತ ಜಾನುವಾರುಗಳ ಜೊತೆ ಬಾಲಕ
ಚಾಮರಾಜನಗರ: ಸಿಲಿಕಾನ್ ಸಿಟಿ ಬೆಂಗಳೂರಿನಿಂದ 170 ಕಿಮೀ ದೂರದಲ್ಲಿರುವ ಚಾಮರಾಜನಗರ ಸತತ ಎರಡನೇ ವರ್ಷವೂ ಭೀಕರ ಬರಗಾಲಕ್ಕೆ ತುತ್ತಾಗಿದೆ.
ದಂತಹಳ್ಳಿ ಗ್ರಾಮದಿಂದ 4 ಕಿಮೀ ದೂರದಲ್ಲಿ ಕಾವೇರಿ ಹರಿಯುತ್ತದೆ. ಬೆಳೆದ ಬೆಳೆಗಳು ಈ ಹಿಂದೆಯೇ ನಾಶವಾಗಿವೆ. ಪ್ರತಿದಿನ ಈ ಗ್ರಾಮದಲ್ಲಿ ಕನಿಷ್ಠ ಒಂದಾದರೂ ಜಾನುವಾರು ಸಾಯುತ್ತಿದೆ. ಊರಿನ ಮೈದಾನ ಈಗ ಸಮಾಧಿ ಸ್ಥಳವಾಗಿ ಮಾರ್ಪಟ್ಟಿದೆ. ಬರಕ್ಕೆ ತುತ್ತಾಗಿ ಸಾಯುತ್ತಿರುವ ಜಾನುವಾರುಗಳ ಅಂತ್ಯ ಸಂಸ್ಕಾರ ಯಾರು ಮಾಡುತ್ತಾರೆ, ಹೀಗಾಗಿ ಗ್ರಾಮದ ಹೊರವಲಯದ ಮೈದಾನದಲ್ಲಿ ಉಪಯೋಗಿಸದ ಬಾವಿಗಳಲ್ಲಿ ಜಾನುವಾರುಗಳ ಮೃತ ದೇಹ ಬಿಸಾಡಲಾಗುತ್ತಿದೆ. 
ಕೊಳ್ಳೆಗಾಲ ತಾಲೂಕು ಕೌಡಹಳ್ಳಿ ಹೋಬಳಿ ಹನೂರು ಗ್ರಾಮದಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಊರಿನ ಮೈದಾನ ಪ್ರದೇಷ ಜಾನುವಾರುಗಳ ಸಂಸ್ಕಾರ ಭೂಮಿಯಾಗಿದೆ, ಬಾಲಕನೊಬ್ಬ ಸತ್ತ ಹಸುವಿನ ಕೊಂಬು ಹಿಡಿದು ಆಟವಾಡುತ್ತಿರುವುದನ್ನು ನೀವು ಚಿತ್ರದಲ್ಲಿ ಗಮನಿಸಬಹುದು.ಇದು ನನ್ನ ನೆಚ್ಚಿನ ಹಸು, ಒಂದು ವಾರದ ಹಿಂದೆ ಸತ್ತು ಹೋಯಿತು ಎಂದು ಬಾಲಕ ಮಹೇಶ್ ಕಣ್ಣಿರಿಡುತ್ತಾನೆ.
ಕೆ. ಶೆಟ್ಟಹಳ್ಳಿ ಗ್ರಾಮದ  ರಸ್ತೆಯಲ್ಲಿ  ಜಾನುವಾರುಗಳ ಮೇವು ತುಂಬಿಕೊಂಡು ಬರುವ ಟ್ರಕ್ ಅನ್ನು ಸರ್ಕಾರಿ ವಾಹನ ಎಂದು ತಿಳಿದು ತಡೆದ ಗ್ರಾಮಸ್ಥರು ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಹಸುಗಳ ಸತ್ತ ಚಿತ್ರವನ್ನು ತೆಗೆದುಕೊಳ್ಳಲು ಬರುತ್ತಾರೆ, ತೆಗೆದುಕೊಂಡು ಹೋಗುತ್ತಾರೆ, ಆದರೆ ಯಾರೋಬ್ಬರು ನಮಗೆ ಪರಿಹಾರ ಹಣ ನೀಡುತ್ತಿಲ್ಲ ಎಂದು ವೆಂಕಟೇಶ್ ಶೆಟ್ಟಿ ಆಗ್ರಹಿಸಿದ್ದಾರೆ.
ಈ ವರ್ಷದ ಬರಗಾಲಕ್ಕೆ ತುತ್ತಾಗಿ ಹೆಚ್ಚಿನ ಹಸುಗಳು ಸಾವನ್ನಪ್ಪಿವೆ. ಕಳೆದ 2 ವಾರಗಳಲ್ಲಿ 20 ಹಸುಗಳು ಸಾವನ್ನಪ್ಪಿವೆ ಎಂದು ಕೌಡಹಳ್ಳಿ ಗ್ರಾಮದ ರಾಮಕ್ಕ ಅಳಲು ತೋಡಿಕೊಂಡಿದ್ದಾರೆ.
ಈ ಊರಿನ ಜನರು ಹಸುವಿನ ಹಾಲಿನಿಂದ ತಿಂಗಳಿಗೆ 2ಸಾವಿರ ರು. ಆದಾಯ ಪಡೆಯುತ್ತಾರೆ. ಆದರೆ 1 ಟ್ರಕ್ ಲೋಡ್ ಹುಲ್ಲಿಗೆ 10 ಸಾವಿರ ರು ನೀಡಿ ಖರೀದಿಸುತ್ತಿದ್ದಾರೆ. ಜಾನುವಾರುಗಳಿಗೆ ಮೇವು ಒದಗಿಸದ ಕಾರಣ ಮೂರು ತಿಂಗಳಿಗೊಮ್ಮೆ ಹಸುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಆದರೆ ಸರ್ಕಾರ ಸತ್ತ ಹಸುಗಳಿಗೆ ಸರಿಯಾದ ರೀತಿಯ ಪರಿಹಾರ ಹಣ ನೀಡುತ್ತಿಲ್ಲ. ಮೇಕೆ, ಕುರಿ ಸತ್ತರೇ 5 ಸಾವಿರ ರು ಪರಿಹಾರ ನೀಡುವ ಸರ್ಕಾರ, ಹಸು ಸತ್ತಕೇ ಒಂದು ಬಿಡಿಗಾಸು ಹಣ ಕೂಡ ನೀಡುತ್ತಿಲ್ಲ ಎಂದು ಉಮೇಶ್ ಎಂಬುವರು ಆರೋಪಿಸಿದ್ದಾರೆ.
ಚಾಮರಾಜನಗರ ಜಿಲ್ಲಾಡಳಿತ ಗೋಶಾಲೆಗಳಲ್ಲಿರುವ ಹಸುಗಳಿಗಾಗಿ 8.500 ಟನ್ ಜೋಳ ಖರೀದಿಸಿದೆ. 2500 ಹಸುಗಳಿಗೆ 20 ಜಾನುವಾರು-ಆಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಗೋಶಾಲೆಗಳಿಗೆ ಸುಮಾರು 70-80 ಟನ್ ಆಹಾರದ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸುಮಾರು 2.84 ಲಕ್ಷ ಜಾನುವಾರುಗಳಿವೆ ಎಂದುಪಶು ಸಂಗೋಪನಾ ಇಲಾಖೆ ಅಂದಾಜಿಸಿದೆ. ಆದರೆ ಇದರಲ್ಲಿ ಕಾಡಿನಲ್ಲಿ ವಾಸಿಸುವ ಪ್ರಾಣಿಗಳನ್ನು ಲೆಕ್ಕ ಹಾಕಿಲ್ಲ, ಇದುವರೆಗೂ ಎಷ್ಟು ಜಾನುವಾರುಗಳು ಸಾವನ್ನಪ್ಪಿವೆ ಎಂಬ ಬಗ್ಗೆ ಸರಿಯಾದ ಅಂಕಿ ಅಂಶಗಳು ದೊರೆತಿಲ್ಲ.
ಹಸುಗಳ ಸಾವಿಗೆ ಪರಿಹಾರ ನೀಡಲು ಸರ್ಕಾರ ಹೇಳಿದೆ, ಆದರೆ ಇದುವರಗೊ ಪರಿಹಾರದ ಹಣ ನಮಗೆ ಸಿಕ್ಕಿಲ್ಲ. ಚಾಮರಾಜನಗರದ ಸುಮಾರು 20 ಸ್ಥಳಗಳಲ್ಲಿ ಜಿಲ್ಲಾಡಳಿತ ಗೋಶಾಲೆ ಆರಂಭಿಸಿದೆ. ಆದರೆ ಹಲವು ರೈತರು ಈ ಉರಿಸಿಬಿಸಿಲಿನಲ್ಲಿ ತಮ್ಮ ಜಾನುವಾರುಗಳನ್ನು ನಡೆಸಿಕೊಂಡು ಗೋಶಾಲೆ ಬಿಡುವ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com