ಇಂದಿನಿಂದ ರಾಜ್ಯದಲ್ಲಿ ನಾಲ್ಕು ದಿನಗಳ ಕಾಲ ಆನೆಗಣತಿ

ಇಂದಿನಿಂದ ರಾಜ್ಯಾದ್ಯಾಂತ ಆನೆ ಗಣತಿ ಪ್ರಾರಂಭವಾಗಲಿದ್ದು, ಕರ್ನಾಟಕದ 13 ಅರಣ್ಯ ಪ್ರದೇಶಗಳಲ್ಲಿ ನಾಲ್ಕು ದಿನಗಳ ಕಾಲ ಆನೆ ಗಣತಿ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಇಂದಿನಿಂದ ರಾಜ್ಯಾದ್ಯಾಂತ ಆನೆ ಗಣತಿ ಪ್ರಾರಂಭವಾಗಲಿದ್ದು, ಕರ್ನಾಟಕದ 13 ಅರಣ್ಯ ಪ್ರದೇಶಗಳಲ್ಲಿ ನಾಲ್ಕು ದಿನಗಳ ಕಾಲ ಆನೆ ಗಣತಿ ನಡೆಯಲಿದೆ.
ದೇಶದಲ್ಲೇ ಅತಿ ಹೆಚ್ಚು ಆನೆಗಳನ್ನ ಹೊಂದಿರುವಂತಹ ಬಂಡೀಪುರ-ನಾಗರಹೊಳೆ ಅರಣ್ಯ ಪ್ರದೇಶ ಸೇರಿದಂತೆ ಆನೆಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಆನೆ ಗಣತಿ ನಡೆಯಲಿದೆ. ಈಗಾಗಲೇ ಸ್ವಯಂ ಸೇವಕರು ಬೆಂಗಳೂರಿನ ಅರಣ್ಯ ಭವನದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 
2012 ರಲ್ಲಿ ರಾಜ್ಯದಲ್ಲಿ ನಡೆದಿದ್ದ ಆನೆಗಣತಿಯ ಮಾಹಿತಿ ಪ್ರಕಾರ, 6062 ಆನೆಗಳಿದ್ದವು ಎಂದು ವನ್ಯಜೀವಿ ವಿಭಾಗದ ಹೆಚ್ಚುವರಿ ಪಿಸಿಸಿಎಫ್ ಜಯರಾಮ್ ಹೇಳುತ್ತಾರೆ.
650 ಮಂದಿ ಸ್ವಯಂ ಸೇವಕರು ಹಾಗೂ 98 ಮಂದಿ ಸಂಶೋಧಕರು ಭಾಗವಹಿಸಲಿದ್ದು, ಎಲ್ಲಾ ಸಿದ್ಧತೆಗಳು ನಡೆದಿವೆ. ಪ್ರತಿಯೊಂದು ಅರಣ್ಯವನ್ನು ಸಣ್ಣ ಸಣ್ಣ ಘಟಕಗಳನ್ನಾಗಿ ವಿಭಜಿಸಿಕೊಂಡು ಗಣನತಿ ಮಾಡಲಾಗುತ್ತದೆ. 
ಇಂದಿನಿಂದ 19ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಆನೆ ಗಣತಿ ರಾಜ್ಯದ 13 ಅರಣ್ಯ ಪ್ರದೇಶಗಳಲ್ಲಿ ನಡೆಯಲಿದೆ. ಇನ್ನು ದೇಶದಲ್ಲೇ ಆನೆ ಕಾರಿಡಾರ್ ಎಂದು ಪ್ರಸಿದ್ಧಿಯಾಗಿರುವ ಬಂಡೀಪುರ-ನಾಗರಹೊಳೆ ಪ್ರದೇಶದಲ್ಲಿ 2011, 2013, 2015 ರಲ್ಲಿ ನಡೆದ ಆನೆ ಗಣತಿ ಸಂದರ್ಭದಲ್ಲಿ ಆನೆಗಳ ಸಂತತಿ ಹೆಚ್ಚಾಗುತ್ತಿರುವ ಬಗ್ಗೆ ಅಂಕಿ ಅಂಶಗಳಿಂದ ತಿಳಿದು ಬಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com