ಬೆಂಗಳೂರು: ಬೇರೆ ನ್ಯಾಯಾಲಗಳಿಗೆ ಸ್ಫೂರ್ತಿಯಾದ ಸಿಟಿ ಸಿವಿಲ್ ಕೋರ್ಟ್

ತೀರ್ಪಿನ ಪ್ರತಿ ಸಿಗಲು ಇನ್ನು ಮುಂದೆ ಕಕ್ಷಿದಾರರು ಮತ್ತು ವಕೀಲರು ತಿಂಗಳುಗಳ ಕಾಲ ಕಾಯಬೇಕಾಗಿಲ್ಲ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ತೀರ್ಪಿನ ಪ್ರತಿ ಸಿಗಲು ಇನ್ನು ಮುಂದೆ ಕಕ್ಷಿದಾರರು ಮತ್ತು ವಕೀಲರು ತಿಂಗಳುಗಳ ಕಾಲ ಕಾಯಬೇಕಾಗಿಲ್ಲ ಮತ್ತು ಲಂಚ ಕೊಡಬೇಕಾದ ಅವಶ್ಯಕತೆಯಿಲ್ಲ. ಇತರ ನ್ಯಾಯಾಲಯಗಳಿಗೆ ಮಾದರಿಯಾಗುವಂತೆ ನಗರ ಸಿವಿಲ್ ಕೋರ್ಟ್ ತೀರ್ಪಿನ ಪ್ರತಿಯನ್ನು ಆನ್ ಲೈನ್ ನಲ್ಲಿ ಕೇವಲ 10 ನಿಮಿಷಗಳಲ್ಲಿ ನೀಡುತ್ತದೆ. 
ಈ ಕ್ರಮದಿಂದ ಪ್ರಭಾವಿತವಾಗಿರುವ ಬೇರೆ ರಾಜ್ಯಗಳ ಅನೇಕ ತಂಡಗಳು ಈ ಕೋರ್ಟಿಗೆ ಭೇಟಿ ನೀಡಿ ಮಾದರಿಯನ್ನು ಅಳವಡಿಸಿಕೊಳ್ಳಲು ನೋಡುತ್ತಿವೆ.
ಅರ್ಜಿಗಳ ವಿಲೇವಾರಿ, ಸರ್ಟಿಫಿಕೇಟ್ ಪಡೆದ ತೀರ್ಪಿನ ಪ್ರತಿಯನ್ನು ತುಂಬಲು, ದಾಖಲೆಗಳು, ಆದೇಶ ಪ್ರತಿಗಳು, ಸಾಕ್ಷಿಗಳ ಹೇಳಿಕೆ, ಆರೋಪಿಗಳು, ಚಾರ್ಜ್ ಶೀಟ್, ಎಫ್ಐಆರ್ ಇತ್ಯಾದಿಗಳನ್ನು ಆನ್ ಲೈನ್ ನಲ್ಲಿ ಮಾಡಲಾಗುತ್ತದೆ.
ಈ ಕ್ರಮ ಅಳವಡಿಕೆಯಿಂದಾಗಿ ಮಹಾರಾಷ್ಟ್ರ, ತಮಿಳು ನಾಡು ಮತ್ತು ಕೇರಳದಿಂದ ಅನೇಕ ತಂಡಗಳು ಸಿಟಿ ಸಿವಿಲ್ ಕೋರ್ಟ್ ಗೆ ಆಗಮಿಸಿ ಸುಧಾರಣೆಯನ್ನು ಕಂಡು ತಾನೂ ಅಳವಡಿಸಿಕೊಳ್ಳಲು ನೋಡುತ್ತಿದೆ. ಇನ್ನಷ್ಟು ರಾಜ್ಯಗಳು ತಮ್ಮ ಪ್ರತಿನಿಧಿಗಳನ್ನು ಕಳುಹಿಸುವ ನಿರೀಕ್ಷೆಯಿದೆ.
ಮಹಾಜರ್ ಶಾಖೆ, ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಕೆ ಇತ್ಯಾದಿಗಳಿಂದಲೂ ಕೂಡ ಸಿಟಿ ಸಿವಿಲ್ ಕೋರ್ಟ್ ಬೇರೆ ನ್ಯಾಯಾಲಯಗಳಿಗೆ ಮಾದರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com