ಕೋಲಾರ ಆಸ್ಪತ್ರೆ ಮೇಲ್ಛಾವಣಿಯಿಂದ ಕಿತ್ತುಬಿದ್ದ ಸಿಮೆಂಟ್ : ನವಜಾತ ಶಿಶು- ಬಾಣಂತಿಗೆ ಗಾಯ

ಸತತ ಮಳೆಯಿಂದ ಶ್ರೀ ನರಸಿಂಹರಾಜು ಆಸ್ಪತ್ರೆಯ ಮೇಲ್ಚಾವಣಿಯ ಸಿಮೆಂಟ್ ಗಾರೆ ಕಿತ್ತು ಬಿದ್ದ ಪರಿಣಾಮ ಮೂರು ದಿನ ಗಂಡು ಮಗು ಹಾಗೂ ಬಾಣಂತಿ ...
ಉದುರಿಬಿದ್ದ ಮೇಲ್ಟಾವಣಿ
ಉದುರಿಬಿದ್ದ ಮೇಲ್ಟಾವಣಿ
ಕೋಲಾರ:12:52:28 PM ಗಾಯಗೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ
ಸಿಮೆಂಟ್ ಗಾರೆ ಉದುರಿಬಿದ್ದ ಪರಿಣಾಮ ನೇತ್ರಾ ಎಂಬುವರ ಮೂರು ದಿನದ ಗಂಡು ಮಗುವಿನ ತಲೆಗೆ ಗಾಯವಾಗಿದೆ, ಈ ಹಿನ್ನೆಲೆಯಲ್ಲಿ ಮಗುವನ್ನು ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. 
ಆಸ್ಪತ್ರೆ ಕಟ್ಟಡದ ಮೇಲ್ವಾವಣಿ ಕಿತ್ತು ಪೋಸ್ಟ್ ನಟಾಲ್ ವಾರ್ಡ್ ನ ವಾಶ್ ಬೇಸಿನ್ ಮೇಲೆ ಬಿದ್ದಿದೆ. ಈ ವಾರ್ಡ್ ನಲ್ಲಿ ಸುಮಾರು 30 ಮಹಿಳೆಯರನ್ನು ದಾಖಲಿಸಲಾಗಿತ್ತು. ಕೂಡಲೇ ಮಹಿಳೆ ಮತ್ತು ಮಕ್ಕಳನ್ನು ಪಕ್ಕದ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.
ಕಟ್ಟಡ 30 ವರ್ಷ ಹಳೇಯದಾಗಿದ್ದು, ಭಾರೀ ಮಳೆಯಿಂದಾಗಿ ಟೆರೇಸ್ ಮೇಲಿನ ನೀರು ಹರಿದು ಹೋಗದೇ ಬ್ಲಾಕ್ ಆಗಿದ್ದರಿಂದ ಶಿಥಿಲಗೊಂಡು ಸಿಮೆಂಟ್ ಪ್ಲಾಸ್ಟರ್ ಉದುರಿ ಬಿದ್ದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಜಯ್ ಕುಮಾರ್ ಹೇಳಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಲೋಕೋಪಯೋಗಿ  ಇಲಾಖೆ  ಆಸ್ಪತ್ರೆ ಮೇಲ್ಚಾವಣಿಯನ್ನು ರಿಪೇರಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com