ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಅವರು, ಕೆಲವರು ಟಿಪ್ಪು ಸುಲ್ತಾನ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದು, ಇದನ್ನು ಮೊದಲು ನಿಲ್ಲಿಸಬೇಕು. ಟಿಪ್ಪು ಸುಲ್ತಾನ್ ಅವರನ್ನು ಧರ್ಮದ ದೃಷ್ಟಿಯಿಂದ ನೋಡಬಾರದು. ದೇಶಕ್ಕಾಗಿ ಅವರು ನೀಡಿರುವ ಕೊಡುಗೆಯನ್ನು ನೋಡಬೇಕು. ಬ್ರಿಟೀಷರ ವಿರುದ್ಧ ಟಿಪ್ಪು ಸುಲ್ತಾನ್ ಹೋರಾಟ ಮಾಡಿದ್ದರು. 1799ರಲ್ಲಿ ಹೋರಾಟ ಮಾಡುತ್ತಿದ್ದ ವೇಳೆ ಟಿಪ್ಪು ಅವರು ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.
ಟಿಪ್ಪು ಸುಲ್ತಾನ್ ಅವರನ್ನು ಹೊರತುಪರಡಿಸಿ, ಯುದ್ಧ ಸಮಯದಲ್ಲಿ ಮಕ್ಕಳನ್ನು ಒತ್ತೆ ಇಟ್ಟವರು ಇಡೀ ದೇಶದಲ್ಲಿ ಯಾರು ಇಲ್ಲ. ಇಂತಹವರನ್ನು ವಿರೋಧ ಮಾಡುತ್ತೀರಾ? ವಿಜಯನಗರ ಅರಸರೂ ಜಾತ್ಯತೀತವಾಗಿಗಳಾಗಿದ್ದರು. ವಿಜಯನಗರ ರಾಜರ ಸೈನ್ಯದಲ್ಲಿ ಮುಸ್ಲಿಂ ಸೈನಿಕರೇ ಹೆಚ್ಚಿದ್ದರು. ನಾನೂ ಅಹಿಂದ ಪರವಾಗಿದ್ದೇನೆ. ಆದರೆ, ಎಲ್ಲಾ ಬಡವರಿಗೆ ಸೌಲಭ್ಯಗಳು ಸಿಕ್ಕರೆ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ತಿಳಿಸಿದ್ದಾರೆ.
ನಿಜಾಮರು ಮತ್ತು ಮರಾಠರು ಟಿಪ್ಪು ಅವರಿಗೆ ದ್ರೋಹ ಮಾಡಲಿಲ್ಲ. ಕಿತ್ತೂರನ್ನು ರಕ್ಷಣೆ ಮಾಡಲು ರಾಣಿ ಚೆನ್ನಮ್ಮ ಅವರು ಹೋರಾ ಮಾಡಿದಂತೆ ಮೈಸೂರನ್ನು ರಕ್ಷಣೆ ಮಾಡಲು ಟಿಪ್ಪು ಕೂಡ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದರು. ಟಿಪ್ಪು ಹಿಂದುಗಳ ದ್ವೇಷಿಯಾಗಿರಲಿಲ್ಲ. ನಂಜನಗೂಡು ಹಾಗೂ ಶೃಂಗೇರಿ ಮಠಕ್ಕೆ ಅವರು ನೀಡಿದ ಕೊಡುಗೆಯನ್ನು ನೋಡಬೇಕು.
ಟಿಪ್ಪು ಅವರ ದಕ್ಷ ಆಡಳಿತ ವೈಖರಿ, ಸರ್ವಧರ್ಮ ಸಹಿಷ್ಟುಣೆ ಎಲ್ಲಾ ಧರ್ಮಗಳ ಜೊತೆ ಇದ್ದ ಸೌಹಾರ್ದತೆ ನಂಟು ಬಗ್ಗೆ ಹೇಳುವ ಬದಲು, ದೇಶದ್ರೋಹಿ ಎಂಬಂತೆ ಬಂಬಿಸುತ್ತಿದ್ದಾರೆ. ಕನ್ನಡ ನಾಡಿಗೆ ಅನನ್ಯ ಸಂಸ್ಕೃತಿ, ಪರಂಪರೆ ಇದೆ. ವಿಜಯನಗರ ಕಾಲದ ಅರಸು ಜಾತ್ಯತೀತ ಆಧಾರದಲ್ಲಿ ಸಮಾಜ ಕಟ್ಟುವ ಕೆಸಲ ಮಾಡಿದ್ದರು.
ಇತಿಹಾಸ ಗೊತ್ತಿರುವವರು ಮಾತ್ರ ಇತಿಹಾಸವನ್ನು ನಿರ್ಮಿಸುತ್ತಾರೆ. ಧಾರ್ಮಿಕ ಕನ್ನಡಕವನ್ನು ಧರಿಸಿ ಇತಿಹಾಸವನ್ನು ನೋಡಬಾರದು. ಇತಿಹಾಸ ಗೊತ್ತಿಲ್ಲದ ಕೆಲವರು ಟಿಪ್ಪು ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ, ಮತಗಳನ್ನು ಪಡೆಯುವುದಕ್ಕಾಗಿ ಸ್ವಾರ್ಥ ಸಾಧನೆಗಾಗಿ ಇತಿಹಾಸ ತಿರುಚುವ ಕೆಲಸವನ್ನು ಯಾರೂ ಮನಾಡಬಾರದು. ಹಾಗೇನಾದರೂ ಇತಿಹಾಸದ ನೈಜತೆಗೆ ಧಕ್ಕೆ ತಂದನೆ ಅದು ನಮ್ಮ ಪರಂಪರೆಗೆ ಮಾಡುವ ಬಹುದೊಡ್ಡ ದ್ರೋಹವಾಗುತ್ತದೆ ಎಂದಿದ್ದಾರೆ.