ನ.13ರಿಂದ 24ರವರಗೆ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ

ಬೆಳಗಾವಿಯ ಸುವರ್ಣ ಸೌಧದಲ್ಲಿ ನವೆಂಬರ್‌ 13ರಿಂದ 24ರವರಗೆ 10 ದಿನ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದ್ದು, ಅಧಿವೇಶನಕ್ಕೆ.....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ನವೆಂಬರ್‌ 13ರಿಂದ 24ರವರಗೆ 10 ದಿನ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದ್ದು, ಅಧಿವೇಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಶಂಕರಮೂರ್ತಿ ಅವರು, ವರ್ಷದಲ್ಲಿ ಕನಿಷ್ಟ 60 ದಿನ ಅಧಿವೇಶನ ನಡೆಸಬೇಕು ಎಂದು ಬಿಲ್ ಪಾಸಾಗಿದೆ. ಆದರೆ 2017ನೇ ಸಾಲಿನಲ್ಲಿ ಸದನ ನಡೆದಿರುವುದು ಕೇವಲ 40 ದಿನ(ಬೆಳಗಾವಿ ಅಧಿವೇಶನದ ಹತ್ತು ದಿನ ಸೇರಿ) ಮಾತ್ರ. ಸದನದಲ್ಲಿ ಸದಸ್ಯರ ಹಾಜರಾತಿ ಪ್ರಮಾಣ ಶೇ.50 ರಷ್ಟಿದೆ. ಸದನದಲ್ಲಿ ಹಾಜರಾತಿ ಪ್ರಮಾಣ ಹೆಚ್ಚಲು ನನ್ನ ಕೈ ಬಲ ಪಡಿಸಬೇಕು ಸದಸ್ಯರಿಗೆ ಮನವಿ ಮಾಡಿದರು.
ಅಧಿವೇಶನದ ವೇಳೆ ಈ ಬಾರಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರನ್ನು ಕಾರವಾರದ ನೌಕಾನೆಲೆಗೆ ಆಹ್ವಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯಂತೆ ಈ ಆಹ್ವಾನ ನೀಡಲಾಗಿದ್ದು, ನ.18 ರಂದು ಎಲ್ಲಾ ವಿಧಾನ ಪರಿಷತ್ ಸದಸ್ಯರನ್ನು ಕಾರವಾರದ ‘ಸೀ ಬರ್ಡ್’ ನೌಕಾನೆಲೆಗೆ ಕರೆದೊಯ್ಯಲಾಗುತ್ತದೆ ಎಂದು ಸಭಾಪತಿಗಳು ತಿಳಿಸಿದರು.
ಬೆಳಗಾವಿಯಲ್ಲಿ 10 ದಿನ ನಡೆಯುವ ವಿಧಾನ ಮಂಡಳ ಅಧಿವೇಶನಕ್ಕೆ ಸುಮಾರು 25 ಕೋಟಿ ರುಪಾಯಿ ಖರ್ಚಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಸದನ ಮುಗಿದ ಬಳಿಕ ಒಟ್ಟು ವೆಚ್ಚದ ಲೆಕ್ಕ ಕೊಡಲಾಗುತ್ತದೆ ಎಂದರು. ಜತೆಗೆ, ಈ ಬಾರಿ ಅಧಿವೇಶನದ ವೇಳೆಯಲ್ಲಿ ಶಾಸಕರಿಗೆ ವಾಸ್ತವ್ಯ, ಬೆಳಗಿನ ಉಪಹಾರ ಮಧ್ಯಾಹ್ನದ ಭೋಜನ ಮಾತ್ರ ನೀಡಲಾಗುತ್ತದೆ. ರಾತ್ರಿ ಭೋಜನ ವ್ಯವಸ್ಥೆಯನ್ನು ಶಾಸಕರೇ ಮಾಡಿಕೊಳ್ಳಬೇಕು. ರಾತ್ರಿ ಊಟ ಹಾಗೂ ಸಾರಿಗೆಗಾಗಿ ಪ್ರತಿದಿನಕ್ಕೆ 2500 ರುಪಾಯಿ, ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡುವವರಿಗೆ 5000 ರುಪಾಯಿ ಹೆಚ್ಚುವರಿ ಭತ್ಯೆ ನೀಡಲಾಗುತ್ತದೆ ಎಂದರು.
ಭದ್ರತೆಗಾಗಿ ಐದು ಸಾವಿರ ಪೊಲೀಸರನ್ನು ನಿಯೋಜಿಸಲು ಸೂಚಿಸಲಾಗಿದೆ. ನಗರದಲ್ಲಿ ಹೊಟೇಲ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಸಿಬ್ಬಂದಿ ಹಾಗೂ ಪೊಲೀಸರಿಗೆ ಕಲ್ಯಾಣ ಮಂಟಪಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com