ತಾಳ್ಮೆ ಕಳೆದುಕೊಂಡ ಗೌರಿ ಲಂಕೇಶ್ ಕುಟುಂಬ: ಹಂತಕರ ಹಿಡಿಯಲು ಎಸ್ಐಟಿಗೆ ಗಡುವು

ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡುತ್ತಿರುವ ಭರವಸೆ ಹಾಗೂ ಹೇಳಿಕಗಳಿಂದ ಬೇಸತ್ತಿರುವ ಗೌರಿಯವರ ಕುಟುಂಬಸ್ಥರು, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ ಹಂತಕರನ್ನು ಹಿಡಿಯಲು...
ಗೌರಿ ಲಂಕೇಶ್
ಗೌರಿ ಲಂಕೇಶ್
ಬೆಂಗಳೂರು; ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡುತ್ತಿರುವ ಭರವಸೆ ಹಾಗೂ ಹೇಳಿಕಗಳಿಂದ ಬೇಸತ್ತಿರುವ ಗೌರಿಯವರ ಕುಟುಂಬಸ್ಥರು, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ ಹಂತಕರನ್ನು ಹಿಡಿಯಲು ಗಡುವನ್ನು ನೀಡಿದೆ. 
ಡಿಸೆಂಬರ್ 5ರೊಳಗಾಗಿ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಹಂತಕರನ್ನು ಬಂಧನಕ್ಕೊಳಪಡಿಸದಿದ್ದರೆ, ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಕುಟುಂಬ ಗೌರಿಯವರ ಕುಟುಂಬಸ್ಥರು ಹೇಳಿದ್ದಾರೆ. 
ಪ್ರಕರಣದ ತನಿಖೆ ನಡೆಸುತ್ತಿರುವ ಆಯಾಮಗಳಿಂದ ನಮಗೆ ಬೇಸರವಾಗಿಲ್ಲ. ಆದರೆ, ತನಿಖೆಯಿಂದ ಯಾವುದೇ ರೀತಿಯ ಬೆಳವಣಿಗೆಗಳು ಕಂಡು ಬರುತ್ತಿಲ್ಲ ಎಂದು ಗೌರಿಯವರ ಸಹೋದರಿ ಕವಿತಾ ಅವರು ಹೇಳಿದ್ದಾರೆ. 
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಗೌರಿಯವರನ್ನು ಹತ್ಯೆ ಮಾಡಿದ ಹಂತಕರನ್ನು ಹಿಡಿಯಲು ವಿಶೇಷ ತನಿಖಾ ದಳ ಎಲ್ಲಾ ರೀತಿಯ ಶ್ರಮ ಪಡುತ್ತಿದೆ ಎಂಬ ವಿಚಾರ ನಮಗೂ ತಿಳಿದಿದೆ. ಪ್ರಕರಣದ ತನಿಖೆ ಕುರಿತಂತೆ ಅಧಿಕಾರಿಗಳು ನಮ್ಮೊಂದಿಗೆ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಹತ್ಯೆಯಾಗಿ 2 ತಿಂಗಳು ಕಳೆದಿದೆ. ಆದರೂ ಯಾವುದೇ ರೀತಿಯ ಫಲಿತಾಂಶಗಳು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು. ಗೌರಿಯವರ ಹಂತಕರು ಯಾರು ಎಂಬುದು ಈಗಾಗಲೇ ತಿಳಿದಿದೆ. ಇದೀಗ ಹಂತಕರ ವಿರುದ್ಧ ತನಿಖಾ ದಳದ ಅಧಿಕಾರಿಗಳು ಸಾಕ್ಷ್ಯಾಧಾರಗಳನ್ನು ಕಲೆಹಾಕುತ್ತಿದ್ದಾರೆಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com