ಬೆಂಗಳೂರು ಕೃಷಿ ಮೇಳ: ಮೊದಲ ದಿನವೇ 1.25 ಲಕ್ಷ ಜನ ಭಾಗಿ

ಕರ್ನಾಟಕ ರಾಜ್ಯಪಾಲ ವಜುಭಾಯಿ ರುದಭಾಯಿ ವಾಲ ಅವರು ಬೆಂಗಳುರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಯುಎಎಸ್)ನಲ್ಲಿ ಕೃಷಿ ಮೇಳ.......
ಕೃಷಿ ಮೇಳ 2017
ಕೃಷಿ ಮೇಳ 2017
ಬೆಂಗಳೂರು: ಕರ್ನಾಟಕ ರಾಜ್ಯಪಾಲ ವಜುಭಾಯಿ ರುದಭಾಯಿ ವಾಲ ಅವರು ಬೆಂಗಳುರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಯುಎಎಸ್)ನಲ್ಲಿ ಕೃಷಿ ಮೇಳವನ್ನು ಉದ್ಘಾಟಿಸಿದ್ದು ಮೊದಲ ದಿನದಂತ್ಯಕ್ಕೆ 1.25 ಲಕ್ಷ ಜನ ಭಾಗವಹಿಸಿದ್ದರು.
ಮೇಳದಲ್ಲಿ ಒಟ್ಟು 700 ಮಳಿಗೆಗಳು ಇದ್ದು ವಿವಿಧ ಕೃಷಿ ಪದಾರ್ಥಗಳು, ಕೃಷ ಬಳಕೆಯ ಸಲಕರಣೆಗಳ ವೈವಿದ್ಯಮಯ ಉತ್ಪನ್ನಗಳು ಲಭ್ಯವಿದೆ. ಈ ಮೇಳವು ನ.19ರ ವರೆಗೆ ನಡೆಯಲಿದೆ. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು, ಸ್ವಯಂ ಸೇವಾ ಸಂಘಗಳು, ಕೃಷಿ ಸಲಹೆಗಾರರು, ಕೃಷಿ ಉತ್ಪನ್ನ ಮಾರಾಟಗಾರರು ಮತ್ತು ರೈತರು ಇಲ್ಲಿ ಮಳಿಗೆಗಳನ್ನು ತೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರಿನ ಯುಎಎಸ್ ಉಪಾಧ್ಯಕ್ಷ ಎಚ್. ಶಿವಣ್ಣ ಈ ಮೇಳದಲ್ಲಿ ಸುಮಾರು 12 ಲಕ್ಷ ಮಂದಿ ಭಾಗವಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. "ಈ ವರ್ಷದ ಹವಾಮಾನ ಉತ್ತಮವಾಗಿದೆ  ಮೇಳವು ಕಳೆದ ವರ್ಷ ನಡೆದಿರಲಿಲ್ಲ. ಈ ಬಾರಿ ಮೂರು ದಿನಗಳ ಬದಲಿಗೆ ನಾಲ್ಕು ದಿನಗಳ ಕಾಲ ಮೇಳ ನಡೆಯಲಿದೆ. ಹೀಗಾಗಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನಗಳನ್ನು ನಿರೀಕ್ಷಿಸಲಾಗುತ್ತಿದೆ" 
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕುರು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ರಾಮನಗರಗಳಲ್ಲಿನ ಬಹುತೇಕ ರೈತರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಈ ವರ್ಷ ಎಂಟು ಹೊಸ ಬೆಳೆ ಪ್ರಭೇದಗಳು ಬಿಡುಗಡೆಯಾಗಲಿದ್ದು ಅದನ್ನು ಮೇಳದಲ್ಲಿ ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದು ಶಿವಣ್ಣ ಹೇಳಿದ್ದಾರೆ.
ಈ ಸಮಯದಲ್ಲಿ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ರಾಜ್ಯಪಾಲರು ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ಚಿಕ್ಕಬಳ್ಳಾಪುರದ ಸಿ.ಆರ್.ರಾಧಾಕೃಷ್ಣರಿಗೆ ಸಿ ಭೈರೇಗೌಡ ಅತ್ಯುತ್ತಮ ರೈತ ಪ್ರಶಸ್ತಿ ಗೆ ಪಾತ್ರರಾದರೆ, ಬೆಳಗಾವಿಯ ರಾಜು ಸೆಟ್ಟಪ್ಪ ಬೈರುಗೋಳ ಅವರು ಎಂ.ಕರಿಗೌಡ ಅತ್ಯುತ್ತಮ ತೋಟಗಾರಿಕಾ ಕೃಷಿಕ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದೇ ವೇಳೆ ವ್ಯಾಲಿಡಿಕ್ಟರಿ ಕಾರ್ಯಕ್ಕಾಗಿ ಇನ್ನೂ ಮೂವರಿಗೆ ಪ್ರಶಸ್ತಿ ಪ್ರಧಾನ ನೆರವೇರಿದೆ.
ಬೆಂಗಳೂರಿನಲ್ಲಿ 1965ರಿಂದಲೂ ವಾರ್ಷಿಕವಾಗಿ ಕ್ರೈಸಿ ಮೇಳ ನಡೆಯುತ್ತಿದ್ದು ಇದು ಸಾಕಷ್ಟು ಜನಪ್ರಿಯತೆ ಗಳಿಸಿದೆ. ಮೂರು ವರ್ಷಗಳ ಬರಗಾಲದ ಸನ್ನಿವೇಶಗಳನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲ ವರ್ಷಗಳಲ್ಲಿಯೂ ಮೇಳ ಯಶಸ್ವಿಯಾಗಿದೆ. ಮೇಳವು ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ನಡೆಯಲಿದ್ದು ಮೇಳಕ್ಕೆ ಸಾರ್ವಜನಿಕ ಪ್ರವೇಶ ಮುಕ್ತವಾಗಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com