ಆ ಬಳಿಕ ಇಬ್ಬರೂ ತಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡಿದ್ದರಲ್ಲದೆ ಮೊಬೈಲ್ ನಲ್ಲಿ ಸಂಭಾಷಣೆ ನಡೆಸಿದ್ದಾರೆ.ಆ ವೇಳೆ ವಂಚಕಿ ತಾನು ಅಮೆರಿಕದಲ್ಲಿ ನರ್ಸ್ ಆಗಿರುವುದಾಗಿ ಹೇಳಿಕೊಂಡಿದ್ದು "ನಾನು ಬೆಂಗಲೂರಿಗೆ ಬರುತ್ತೇನೆ, ನನಗೆ ಬೆಂಗಳೂರಿನ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ನೋದಬೇಕಿದೆ. ಅದಕ್ಕೆ ನನ್ನೊಂದಿಗೆ ನೀವೂ ಬರಬೇಕು, ನನಗೆ ಉಳಿದುಕೊಳ್ಳಲು ಒಂದು ಕೋಣೆ ಬೇಕು." ಎಂದಿದ್ದಾರೆ. ಅದಕ್ಕೆ ಸಾಕಷ್ಟು ಹಣ ನನ್ನ ಬಳಿಯಲ್ಲಿಲ್ಲ ಎಂದ ರಮೇಶ್ ಗೆ ಆಕೆ "ನಿಮಗೆ ನಾನು ಅಮೆರಿಕನ್ ಡಾಲರ್ ಗಳು ಹಾಗೂ ಚಿನ್ನಾಭರಣಗಳನ್ನು ಕಳಿಸುತ್ತೇನೆ. ಆ ಡಾಲರ್ ಗಳನ್ನು ರೂಪಾಯಿಗೆ ಬದಲಿಸಿಕೊಳ್ಳಿ" ಎಂದಿದ್ದರ್ಳು.ರಮೇಶ್ ಅದಕ್ಕೆ ಒಪ್ಪಿಗೆ ಸೂಚಿಸಿದ್ದರು.