ಭಾರತೀಯ ಯೋಧರ ನೂತನ ವಿಶ್ವ ದಾಖಲೆ, ಒಂದೇ ಬೈಕ್ ನಲ್ಲಿ 58 ಜನ ಪ್ರಯಾಣ
ಭಾರತೀಯ ಯೋಧರ ನೂತನ ವಿಶ್ವ ದಾಖಲೆ, ಒಂದೇ ಬೈಕ್ ನಲ್ಲಿ 58 ಜನ ಪ್ರಯಾಣ

ಭಾರತೀಯ ಯೋಧರ ನೂತನ ವಿಶ್ವ ದಾಖಲೆ, ಒಂದೇ ಬೈಕ್ ನಲ್ಲಿ 58 ಜನ ಪ್ರಯಾಣ

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಭಾರತೀಯ ಯೋಧರು ಹೊಸ ವಿಶ್ವದಾಖಲೆ ಒಂದನ್ನು ನಿರ್ಮಾಣ ಮಾಡಿದ್ದಾರೆ.
ಬೆಂಗಳೂರು: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಭಾರತೀಯ ಯೋಧರು ಹೊಸ ವಿಶ್ವದಾಖಲೆ ಒಂದನ್ನು ನಿರ್ಮಾಣ ಮಾಡಿದ್ದಾರೆ. 58 ಯೋಧರು ಒಂದೇ ಬೈಕ್ ನಲ್ಲಿ ಪ್ರಯಾಣಿಸುವ ಮೂಲಕ ಸಾಹಸ ಮೆರೆದಿದ್ದಾರೆ. ಆರ್ಮಿ ಸರ್ವೀಸ್‌ ಕೋರ್‌ ಟಾರ್ನಡೋಸ್‌  ತಂಡವು ಈ ದಾಖಲೆ ಮಾಡಿದೆ.
ಕ್ಯಾಪ್ಟನ್‌ ಬಿನ್ನಿ ಶರ್ಮಾ ನೇತೃತ್ವದ ತಂದವು ಸುಬೇದಾರ್‌ ರಾಮ್‌ಪಾಲ್‌ ತಯಾರಿಸಿದ್ದ ಬೈಕಿನಲ್ಲಿ ಪ್ರಯಾಣ ಮಾಡಿದ್ದರು. ಈ ಹಿಂದೆ ಒಂದೇ ಬೈಕ್ ನಲ್ಲಿ 54 ಮಂದಿ ಪ್ರಯಾಣಿಸಿರುವುದು ವಿಶ್ವ ದಾಖಲೆ ಎನಿಸಿತ್ತು. ಇದೀಗ ಭಾರತೀಯ ಯೋಧರು 58 ಮಂದಿ ಪ್ರಯಾಣಿಸುವ ಮೂಲಕ ಹಳೆ ದಾಖಲೆಯನ್ನು ಮುರಿದು ನೂತನ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com