ಹುತಾತ್ಮ ಯೋಧರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿರುವ ಮೈಸೂರು ವಿ.ವಿ

ಹುತಾತ್ಮ ಯೋಧರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮೈಸೂರು ವಿಶ್ವವಿದ್ಯಾಲಯ ....
ಮೈಸೂರು ವಿಶ್ವವಿದ್ಯಾಲಯ
ಮೈಸೂರು ವಿಶ್ವವಿದ್ಯಾಲಯ
ಮೈಸೂರು: ಹುತಾತ್ಮ ಯೋಧರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮೈಸೂರು ವಿಶ್ವವಿದ್ಯಾಲಯ ಮುಂದಾಗಿದೆ. ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿದೆ. ಮೈಸೂರು ಭಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ವಿಶ್ವವಿದ್ಯಾಲಯ ಉಚಿತ ಶಿಕ್ಷಣವನ್ನು ಈಗಾಗಲೇ ನೀಡುತ್ತಿದೆ.
ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಯೋಧರ ಗೌರವಾರ್ಥ ವಿಶ್ವವಿದ್ಯಾಲಯ ಅವರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲು ಮುಂದಾಗಿದೆ. ಅಲ್ಲದೆ ವಿಶ್ವವಿದ್ಯಾಲಯಕ್ಕೆ ಸೇರುವ ಹುತಾತ್ಮ ಯೋಧರ ಮಕ್ಕಳಿಗೆ ವಸತಿ ವ್ಯವಸ್ಥೆಯನ್ನು ಕೂಡ ಒದಗಿಸುತ್ತದೆ. 
ಹುತಾತ್ಮ ಯೋಧರ ಮಕ್ಕಳು ಪದವಿ, ಸ್ನಾನಕೋತ್ತರ ಪದವಿ, ಎಂ.ಫಿಲ್ ಮತ್ತು ಇತರ ಡಾಕ್ಟರೇಟ್ ಕೋರ್ಸ್ ಉಚಿತವಾಗಿ ಪಡೆಯಬಹುದು ಎಂದು ವಿಶ್ವವಿದ್ಯಾಲಯದ ಉಪ ಕುಲಪತಿ ದಯಾನಂದ್ ಮಾನೆ ತಿಳಿಸಿದ್ದಾರೆ. ದೇಶಾದ್ಯಂತ ಇರುವ ಹುತಾತ್ಮ ಯೋಧರ ಮಕ್ಕಳು ವಿಶ್ವ ವಿದ್ಯಾಲಯದಿಂದ ಈ ಸೌಲಭ್ಯ ಪಡೆಯಬಹುದು ಎಂದು ಅವರು ತಿಳಿಸಿದರು.
ಈಗಾಗಲೇ ಕರ್ನಾಟಕದ ಕೆಲವು ವಿಶ್ವವಿದ್ಯಾಲಯಗಳು ಕಾಶ್ಮೀರದ ಉರಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ.
ಇದೀಗ ಮೈಸೂರು ವಿಶ್ವವಿದ್ಯಾಲಯಯ ಶೈಕ್ಷಣಿಕ ಮಂಡಳಿ ಈ ಸೌಲಭ್ಯವನ್ನು ಹುತಾತ್ಮ ಯೋಧರ ಎಲ್ಲಾ ಮಕ್ಕಳಿಗೂ ನೀಡಲು ನಿರ್ಧರಿಸಿದ್ದು ಸರ್ಕಾರದ ಒಪ್ಪಿಗೆಗಾಗಿ ಕಳುಹಿಸಿದೆ. ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಶಿಕ್ಷಣ ಮಂಡಳಿ ಪರಿಷ್ಕೃತ ಪಠ್ಯಕ್ಕೆ ಅನುಮೋದನೆ ನೀಡಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ತೆರಿಗೆಯಲ್ಲಿ ಡಿಪ್ಲೊಮಾ ಕೋರ್ಸ್ ನ್ನು ಆರಂಭಿಸುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com