• Tag results for martyr

ಉಗ್ರರ ಹುಟ್ಟಡಗಿಸುತ್ತಿದ್ದ ಹುತಾತ್ಮ ಸೇನಾಧಿಕಾರಿ ಆಶುತೋಷ್ ಶರ್ಮಾ 2 ಬಾರಿ ಶೌರ್ಯ ಪ್ರಶಸ್ತಿ ಪಡೆದಿದ್ದರು!

ಉಗ್ರರ ಹುಟ್ಟಡಗಿಸುವ ಕಾರ್ಯಾಚರಣೆ ವೇಳೆ ಸದಾಕಾಲ ಮುಂದಾಳತ್ವ ವಹಿಸುತ್ತಿದ್ದ ಹುತಾತ್ಮ ಸೇನಾಧಿಕಾರಿ ಆಶುತೋಷ್ ಶರ್ಮಾ ಅವರು 2 ಬಾರಿ ಶೌರ್ಯ ಪ್ರಶಸ್ತಿ ಪಡೆದಿದ್ದರು. 

published on : 3rd May 2020

ಹಂದ್ವಾರದಲ್ಲಿ ಉಗ್ರರ ಅಟ್ಟಹಾಸ: 2 ಸೇನಾಧಿಕಾರಿಗಳು ಸೇರಿ 5 ಯೋಧರು ಹುತಾತ್ಮ, 2 ಉಗ್ರರು ಹತ

ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ದಾಳಿಯಲ್ಲಿ ಇಬ್ಬರು ಸೇನಾಧಿಕಾರಿಗಳು ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದಾರೆ. ಉಗ್ರರ ವಿರುದ್ಧ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ ಎಂದು ಭಾನುವಾರ ತಿಳಿದುಬಂದಿದೆ. 

published on : 3rd May 2020

ಲಾಕ್ ಡೌನ್ ನಡುವೆಯೂ 24 ವರ್ಷಗಳ ನಂತರ ಹುತಾತ್ಮ ಯೋಧನ ಕುಟುಂಬಕ್ಕೆ ನಿವೇಶನ ಹಂಚಿಕೆ

ನಾಗಲ್ಯಾಂಡ್‌ನಲ್ಲಿ 24 ವರ್ಷಗಳ ಹಿಂದೆ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ರಾಜ್ಯದ ಸೈನಿಕ ಎ.ಮುನಿಯಪ್ಪನ್ ಅವರ ಕುಟುಂಬಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಉಚಿತವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ.

published on : 9th April 2020

ಮದ್ದೂರಿನಲ್ಲಿ ಪುಲ್ವಾಮಾ ಹುತಾತ್ಮ ಗುರು ಸ್ಮಾರಕ 

ಕಳೆದ ವರ್ಷ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದ ಯೋಧ ಎಚ್. ಗುರುವಿಗೆ ಮಂಡ್ಯದ ಮದ್ದೂರಿನಲ್ಲಿ ಸ್ಮಾರಕವನ್ನು ನಿರ್ಮಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ 25 ಲಕ್ಷ ರೂ.ಬಿಡುಗಡೆ ಮಾಡಿದ್ದಾರೆ.

published on : 1st March 2020

ಯೋಧ ಗುರು ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್; 25 ಲಕ್ಷ ಹಣ ಬಿಡುಗಡೆ ಮಾಡಿದ ಸಿಎಂ ಬಿಎಸ್ ವೈ

ಪುಲ್ವಾಮಾ ದಾಳಿಯಲ್ಲಿ ವೀರಮರಣವನ್ನಪ್ಪಿದ ಮದ್ದೂರು ತಾಲ್ಲೂಕಿನ ಗುಡಿಗೆರೆಯ ಯೋಧ ಹೆಚ್.ಗುರು ಅವರ ಸ್ಮಾರಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು 25 ಲಕ್ಷ ಹಣವನ್ನು ಬಿಡುಗಡೆ ಮಾಡಿದೆ.

published on : 20th February 2020

ಪುಲ್ವಾಮ ದಾಳಿಗೆ ಒಂದು ವರ್ಷ: ಕೆ.ಎಂ.ದೊಡ್ಡಿ ಬಳಿಯ ಗುಡಿಗೆರೆ ಯೋಧ ಎಚ್.ಗುರುಗೆ ಶ್ರದ್ದಾಂಜಲಿ

ಭಾರತೀಯ ಸೇನೆಯ ಮೇಲೆ ಪಾಕ್ ಪ್ರಚೋದಿತ ಉಗ್ರರು ನಡೆಸಿದ ಪುಲ್ವಾಮ ದಾಳಿ ಘಟನೆಯ ಸ್ಮರಣಾರ್ಥ ಉಗ್ರರ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಮದ್ದೂರು ತಾಲ್ಲೂಕಿನ (ಕೆ.ಎಂ.ದೊಡ್ಡಿ) ಗುಡಿಗೆರೆ ಕಾಲೋನಿಯ ಎಚ್.ಗುರು ಕುಟುಂಬ ಇಂದು ಗುರು ಅವರ ಸಮಾಧಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿತು. 

published on : 15th February 2020

ಅಸ್ಸಾಂ: ಮನೆಯ ಹಿತ್ತಲಿನಲ್ಲಿ ಪುಲ್ವಾಮಾ ಹುತಾತ್ಮ ಯೋಧನ ಪ್ರತಿಮೆ ಸ್ಥಾಪಿಸಿದ ಪತ್ನಿ

ಅಸ್ಸಾಂನಲ್ಲಿ ಪುಲ್ವಾಮಾ ಹುತಾತ್ಮ ಯೋಧರೊಬ್ಬರ ಪತ್ನಿ ಯಾರ ಸಹಾಯವಿಲ್ಲದೆ ಸ್ವಂತಃ ಖರ್ಚಿನಲ್ಲೇ ತಮ್ಮ ಮನೆಯ ಹಿತ್ತಲಿನಲ್ಲಿ ಪತಿಯ ಪ್ರತಿಮೆ ನಿರ್ಮಿಸುವ ಮೂಲಕ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.

published on : 14th February 2020

ಪುಲ್ವಾಮಾ ಹುತಾತ್ಮರನ್ನು ದೇಶ ಎಂದಿಗೂ ಮರೆಯುವುದಿಲ್ಲ: ಪ್ರಧಾನಿ ಮೋದಿ

ಪುಲ್ವಾಮಾದಲ್ಲಿ ಒಂದು ವರ್ಷದ ಹಿಂದೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಹುತಾತ್ಮರಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗೌರವ ಸಲ್ಲಿಸಿದರು.  

published on : 14th February 2020

ಜಮ್ಮು-ಕಾಶ್ಮೀರ: ಗಡಿಯಲ್ಲಿ ಪಾಕ್ ಉದ್ಧಟತನ, ಶೆಲ್ ದಾಳಿಗೆ ಓರ್ವ ಯೋಧ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಉದ್ಧಟತನ ಪ್ರದರ್ಶಿಸಿದ್ದು, ಭಾರತೀಯ ಸೇನೆಯನ್ನು ಗುರಿಯಾಗಿರಿಸಿ ಅಪ್ರಚೋದಿತ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದೆ. ಶೆಲ್ ದಾಳಿ ಪರಿಣಾಮ ಓರ್ವ ಯೋಧ ಹುತಾತ್ಮರಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

published on : 9th February 2020

ಹುತಾತ್ಮ ದಿನ; ಮಹಾತ್ಮಾ ಗಾಂಧೀಜಿಯ 72ನೇ ಪುಣ್ಯತಿಥಿ, ಪಿತಾಮಹನನ್ನು ಸ್ಮರಿಸಿದ ದೇಶದ ಗಣ್ಯರು 

ಪ್ರತಿವರ್ಷ ಜನವರಿ 30ನ್ನು ಹುತಾತ್ಮ ದಿನವೆಂದು ಕರೆಯಲಾಗುತ್ತದೆ. ಮಹಾತ್ಮಾ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ದೆಹಲಿಯ ಬಿರ್ಲಾ ಹೌಸ್ ನಲ್ಲಿ ಹತ್ಯೆ ಮಾಡಿದ ದಿನ ಇಂದು. 1948ನೇ ಇಸವಿ ಜನವರಿ 30ರಂದು ಅವರು ಹುತಾತ್ಮರಾಗಿದ್ದರು.ಅವರಿಗೆ ಆಗ 78 ವರ್ಷ ವಯಸ್ಸಾಗಿತ್ತು.

published on : 30th January 2020

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಕುಸಿತ:3 ಯೋಧರು ಹುತಾತ್ಮ, ಓರ್ವ ನಾಪತ್ತೆ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆ ಮಾಚಿಲ್ ಪ್ರದೇಶದಲ್ಲಿ ಸೇನಾ ಠಾಣೆಯ ಮೇಲೆ ಇದ್ದಕ್ಕಿದ್ದಂತೆಯೇ ಭಾರೀ ಹಿಮವೊಂದು ಕುಸಿದು ಬಿದ್ದ ಪರಿಣಾಮ ಮೂವರು ಯೋಧರು ಹುತಾತ್ಮರಾಗಿದ್ದು, ಮತ್ತೋರ್ವ ಯೋಧ ನಾಪತ್ತೆಯಾಗಿದ್ದಾರೆಂದು ವರದಿಗಳು ತಿಳಿಸಿವೆ. 

published on : 14th January 2020

ಹೊಸವರ್ಷದಂದು ಜಮ್ಮುಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: 2 ಯೋಧರು ಹುತಾತ್ಮ, ಮುಂದುವರೆದ ಕಾರ್ಯಾಚರಣೆ

ಹೊಸವರ್ಷದ ದಿನದಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಉಗ್ರರ ದಾಳಿಗೆ ಇಬ್ಬರು ಯೋಧರು ಹುತಾತ್ಮರಾಗಿರುವ ಘಟನೆ ರಜೌರಿ ಜಿಲ್ಲೆಯ ನೌಶೆರಾದಲ್ಲಿ ಬುಧವಾರ  ನಡೆದಿದೆ. 

published on : 1st January 2020

ಕರಮುಡಿಯ ವೀರಯೋಧ  ವೀರೇಶ್​ ಕುರತ್ತಿ  ಪಂಚಭೂತಗಳಲ್ಲಿ ಲೀನ

 ಜಮ್ಮು ಕಾಶ್ಮೀರದಲ್ಲಿ ಉಗ್ರರೊಡನೆ ಹೋರಾಡಿ ಹುತಾತ್ಮನಾದ ಗದಗ ಜಿಲ್ಲೆ ಕರಮುಡಿ ಗ್ರಾಮದವರಾದ ಯೋಧ  ವೀರೇಶ್​ ಕುರತ್ತಿ  ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಓಡನೆ ನೆರವೇರಿದೆ.

published on : 29th December 2019

ಟ್ವಿಟರ್‌ನಲ್ಲಿ ಹುತಾತ್ಮನ ತಾಯಿ ವೈಯುಕ್ತಿಕ ಮಾಹಿತಿ ಬಹಿರಂಗ: ನೆಟ್ಟಿಗರಿಂದ ಬೆಂಗಳೂರು ಪೋಲೀಸರಿಗೆ ಛೀಮಾರಿ

2016 ರ ನವೆಂಬರ್ 29 ರಂದು ನಾಗ್ರೋಟದಲ್ಲಿ ಹುತಾತ್ಮರಾದ ಅಕ್ಷಯ್ ಗಿರೀಶ್ ಅವರ ತಾಯಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಬಹಿರಂಗಪಡಿಸಿದ್ದಕ್ಕಾಗಿ ಬೆಂಗಳೂರು ಟ್ರಾಫಿಕ್ ಪೋಲೀಸರನ್ನು ದೂಷಿಸಿದ್ದಾರೆ.

published on : 13th December 2019

ಬೆಳಗಾವಿ: ಹುತಾತ್ಮ ಯೋಧ ರಾಹುಲ್ ಪಂಚಭೂತಗಳಲ್ಲಿ ಲೀನ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಬಳಿ ಪಾಕಿಸ್ತಾನ ಯೋಧರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ವೀರಮರಣ ಹೊಂದಿದ ವೀರಯೋಧ ರಾಹುಲ್ ಸುಳಗೇಕರ (21) ಅವರ ಅಂತ್ಯಕ್ರಿಯ ಅವರ ಹುಟ್ಟೂರಾದ ಬೆಳಗಾವಿ ತಾಲೂಕಿನ ಉಚಗಾಂವದ ರುದ್ರಭೂಮಿಯಲ್ಲಿ ಶನಿವಾರ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. 

published on : 10th November 2019
1 2 3 4 >