ಉಡುಪಿಗೆ ರಾಜಸ್ತಾನ ಸಿಎಂ ವಸುಂಧರಾ ಭೇಟಿ: ದೀಪಿಕಾ ಜೀವ ಬೆದರಿಕೆ ಕರೆ ಕುರಿತು ಪ್ರತಿಕ್ರಿಯೆಗೆ ನಿರಾಕರಣೆ

ಉಡುಪಿಗೆ ರಾಜಸ್ತಾನ ರಾಜ್ಯ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಎಧಿಯಾ ಅವರು ಸೋಮವಾರ ಕೊಲ್ಲೂರು ಮುಕಾಂಬಿಕಾ ದೇವಾಲಯ ಮತ್ತು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದುಕೊಂಡರು...
ಉಡುಪಿಗೆ ರಾಜಸ್ತಾನ ಸಿಎಂ ವಸುಂಧರಾ ಭೇಟಿ
ಉಡುಪಿಗೆ ರಾಜಸ್ತಾನ ಸಿಎಂ ವಸುಂಧರಾ ಭೇಟಿ
ಉಡುಪಿ: ಉಡುಪಿಗೆ ರಾಜಸ್ತಾನ ರಾಜ್ಯ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಎಧಿಯಾ ಅವರು ಸೋಮವಾರ ಕೊಲ್ಲೂರು ಮುಕಾಂಬಿಕಾ ದೇವಾಲಯ ಮತ್ತು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದುಕೊಂಡರು. 
ಉಡುಪಿಗೆ ವಸುಂಧರಾ ರಾಜೆಯವರು ಭೇಟಿ ನೀಡಿದ ಹಿನ್ನಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಪದ್ಮಾವತಿ ಚಿತ್ರ ವಿವಾದ ಕುರಿತಂತೆ ನಟಿ ದೀಪಿಕಾ ಪಡುಕೋಣೆಗೆ ಬಂದಿರುವ ಜೀವ ಬೆದರಿಕೆ ಕರೆಗಳ ಕುರಿತಂತೆ ಪ್ರಶ್ನೆ ಕೇಳಿದರು. ಈ ವೇಳೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 
ಬಳಿಕ ಚಿತ್ರ ವಿವಾದ ಕುರಿತಂತೆ ಮಾತನಾಡಿದ ಅವರು, ಚಿತ್ರ ಕುರಿತಂತೆ ಈಗಾಗಲೇ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿಯವರಿಗೆ ಪತ್ರವನ್ನು ಬರೆದಿದ್ದೇನೆ. ಅಗತ್ಯ ಬದಲಾವಣೆಗಳನ್ನು ಮಾಡದೆ ಚಿತ್ರವನ್ನು ಬಿಡುಗಡೆ ಮಾಡದಂತೆ ಮನವಿ ಮಾಡಿಕೊಂಡಿದ್ದೇನೆಂದು ತಿಳಿಸಿದ್ದಾರೆ. 
ಬಳಿಕ ಶ್ರೀಕೃಷ್ಣ ಮಠ ಭೇಟಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಮತ್ತು ನನ್ನ ಕುಟುಂಬ ವರ್ಗದವರು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದೇವೆ. ನಮ್ಮ ಪೂರ್ವಜರ ನಾಲ್ಕು ತಲೆಮಾರುಗಳು ಉಡುಪಿಯ ಶ್ರೀಕೃಷ್ಣ ಮಠದೊಂದಿಗೆ ಸಂಪರ್ಕವನ್ನುಹೊಂದಿದೆ. ದೇಗುಲಕ್ಕೆ ಭೇಟಿ ನೀಡಿರುವುದು ಬಹಳ ಸಂತಸವನ್ನು ತಂದಿದೆ. ದೇಗುಲಕ್ಕೆ ನನ್ನೊಂದಿಗೆ ನನ್ನ ಪುತ್ರ ದುಶ್ಯಂತ್ ಸಿಂಗ್ ಕೂಡ ಬಂದಿದ್ದಾನೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com