ಧರ್ಮಸಂಸದ್ ಭಾರತೀಯ ಸಂಸ್ಕೃತಿಯನ್ನು ಮುಂದಕ್ಕೆ ಕೊಂಡೊಯ್ಯಲಿದೆ: ತೊಗಾಡಿಯಾ

ಅಸ್ಪೃಶ್ಯತೆ, ಗೋವುಗಳ ರಕ್ಷಣೆ, ದೇಶದಾದ್ಯಂತ ಗೋಹತ್ಯೆ ನಿಷೇಧ, ಅಯೋಧ್ಯೆಯಲ್ಲಿ ರಾಮ ಮಂದಿನ ನಿರ್ಮಾಣ, ಹಿಂದೂ ದೇಗುಲಗಳ ಸ್ವತಂತ್ರ ಸೇರಿದೆದ ಸಾಕಷ್ಟು ವಿಚಾರಗಳು 12ನೇ ಧರ್ಮ ಸಂಸದ್'ನಲ್ಲಿ ಚರ್ಚೆ ನಡೆಯಲಿದೆ...
ಪ್ರವೀಣ್ ತೊಗಾಡಿಯಾ
ಪ್ರವೀಣ್ ತೊಗಾಡಿಯಾ
ಉಡುಪಿ: ಅಸ್ಪೃಶ್ಯತೆ, ಗೋವುಗಳ ರಕ್ಷಣೆ, ದೇಶದಾದ್ಯಂತ ಗೋಹತ್ಯೆ ನಿಷೇಧ, ಅಯೋಧ್ಯೆಯಲ್ಲಿ ರಾಮ ಮಂದಿನ ನಿರ್ಮಾಣ, ಹಿಂದೂ ದೇಗುಲಗಳ ಸ್ವತಂತ್ರ ಸೇರಿದೆದ ಸಾಕಷ್ಟು ವಿಚಾರಗಳು 12ನೇ ಧರ್ಮ ಸಂಸದ್'ನಲ್ಲಿ ಚರ್ಚೆ ನಡೆಯಲಿದೆ. 
ಮೂರು ದಿನಗಳ ಐತಿಹಾಸಿದ ಧರ್ಮ ಸಂಸದ್ ಇಂದಿನಿಂದ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ಶ್ರೀ ಕೃಷ್ಣನ ನಾಡು ಉಡುಪಿ ನಗರಿ ಕೇಸರಿಮಯಗೊಂಡಿದೆ. 
12ನೇ ಧರ್ಮ ಸಂಸದ್ 3 ದಿನಗಳ ಕಾಲ ನಡೆಯಲಿದ್ದು, ನ.24ರಿಂದ ಉಡುಪಿಯಲ್ಲಿ ಆರಂಭವಾಗಲಿದೆ ಎಂದು  ವಿಶ್ವ ಹಿಂದೂ ಪರಿಷತ್ ಅಂತರಾಷ್ಟ್ರೀಯನ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಹೇಳಿದ್ದಾರೆ. 
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಹಿಂದೂ ಸಮಾಜಕ್ಕೆ ಸಂಬಂಧಿಸಿದ ವಿಚಾರಗಳ ಕುರಿತಂತೆ ವಿಶ್ವ ಹಿಂದೂ ಪರಿಷತ್ ಯಾವ ರೀತಿಯಲ್ಲಿ ನಡೆಯಬೇಕೆಂದು ಎಂಬುದರ ಕುರಿತಂತೆ ಸಾಧು ಸಂತರು ಮಾರ್ಗದರ್ಶನವನ್ನು ನೀಡಲಿದ್ದಾರೆಂದು ತಿಳಿಸಿದ್ದಾರೆ. 
ಇದೇ ವೇಳೆ ಅಯೋಧ್ಯೆ ರಾಮ ಮಂದಿರ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಧರ್ಮ ಸಂಸದ್ ನಲ್ಲಿ ಅಸ್ಪೃಶ್ಯತೆ, ಗೋವುಗಳ ರಕ್ಷಣೆ ಕುರಿತ ಕಾನೂನು ಚರ್ಚೆಯಾಗಲಿದೆ. ಅಯೋಧ್ಯೆಯಲ್ಲಿ ರಾಮ ಮಂದಿನ ನಿರ್ಮಾಣ ಬಗ್ಗೆ ನಡೆಯುವ ಚರ್ಚೆ ಬಳಿಕ ಈ ವಿಚಾರವನ್ನು ತಿಳಿಸಲಾಗುವುದು ಎಂದು ಹೇಳಿದ್ದಾರೆ. 
ವಿವಿಧ ರಾಜ್ಯಗಳಿಂದ ಬರುವ ಸಾಧು-ಸಂತರ ಜೊತೆಗೆ ರಾಮ ಮಂದಿರ ನಿರ್ಮಾಣ ಕುರಿತು ಚರ್ಚೆ ನಡೆಸಿ ಸಂತರು ನೀರುವ ಮಾರ್ಗದರ್ಶನ ಹಾಲೂ ಸಲಹೆಗಳ ಬಳಿಕ ವಿಹೆಚ್'ಪಿ ನಿರ್ಧಾರಗಳನ್ನು ಹಾಗೂ ನಿಲುವುಗಳನ್ನು ಕೈಗೊಳ್ಳಲಿದೆ. ಚರ್ಚೆ ಬಳಿಕವೇ ಸರ್ಕಾರಕ್ಕೆ ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತೇವೆ. ರಾಜಕೀಯ ಅಥವಾ ಪಕ್ಷಗಳಿಗೆ ಮಾರ್ಗದರ್ಶನ ನೀಡುವ ಸಂಸದ್ ಇದಲ್ಲ. ಇದು ಭಾರತೀಯ ಸಂಸ್ಕೃತಿಯನ್ನು ಮುಂದಕ್ಕೆ ಕೊಂಡೊಯ್ಯುವ ಧರ್ಮ ಸಂಸದ್ ಆಗಿದೆ ಎಂದು ತಿಳಿಸಿದ್ದಾರೆ. 
ಪಕ್ಷಗಳ ರಾಜಕೀಯದಲ್ಲಿ ಧರ್ಮದ್ ಸಂಸದ್ ಏನನ್ನೂ ಮಾಡಲೂ ಸಾಧ್ಯವಿಲ್ಲ. ಹಿಂದೂ ಸಮಾಜದ ಬಗ್ಗೆ ನಮ್ಮ ಹಿತಾಸಕ್ತಿ ಎಂದಿದ್ದಾರೆ. 
ಇದೇ ವೇಳೆ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವಕು, ಸಹೋದರರಂತೆ ಜೀವನ ನಡೆಸತ್ತಿರುವವರನ್ನು ಎಂದಿಗೂ ಪ್ರತ್ಯೇಕಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com