ಮೈಸೂರು: ಕನ್ನಡ ಸಾಹಿತ್ಯ ಸಮ್ಮೇಳನ ಗೋಷ್ಠಿಯಲ್ಲಿ ಭಗವಾನ್ ವಿರುದ್ಧ ಪ್ರತಿಭಟನೆ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಮ ದೇವರಲ್ಲ, ರಾಮ ಆಳ್ವಿಕೆಯಲ್ಲಿ...
ಕೆ ಎಸ್ ಭಗವಾನ್
ಕೆ ಎಸ್ ಭಗವಾನ್
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಮ ದೇವರಲ್ಲ, ರಾಮ ಆಳ್ವಿಕೆಯಲ್ಲಿ ತಪ್ಪು ಮಾಡಿದ್ದಾನೆ, ಜಾತಿ ವ್ಯವಸ್ಥೆ ಮಾಡುತ್ತಿದ್ದ ಎಂದ ಸಾಹಿತಿ ಪ್ರೊ.ಕೆಎಸ್ ಭಗವಾನ್ ಅವರ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ. 
ಇಂದು ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ನಡೆಯುತ್ತಿರುವ ಎರಡನೆ ದಿನದ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಭಗಾವನ್ ಅವರು ಅಲಕ್ಷಿತ ಸಮುದಾಯಗಳ ಕುರಿತು ಮಾತನಾಡುತ್ತ, ರಾಮನ ವಿರುದ್ಧ ಹೇಳಿಕೆ ನೀಡಿದಾಗ ಸಭಿಕರು ಗದ್ದಲ ಎಬ್ಬಿಸಿದರು.
ಉಡುಪಿಯಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ರಾಮ ಮಂದಿರ ಕಟ್ಟುವ ಚರ್ಚೆ ನಡೆಯುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಸುದ್ದಿಗಳಿಗಿಂತ ಹೆಚ್ಚಾಗಿ ಆ ವಿಚಾರಕ್ಕೆ ಪ್ರಾಧಾನ್ಯ ನೀಡಿವೆ. ಇದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಭಗವಾನ್ ಟೀಕಿಸಿದರು.
ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ರಾಮ ದೇವರಲ್ಲ, ದೇಶದ ಇತಿಹಾಸ ಸುಳ್ಳಿನ ಕಂತೆ. ಇದನ್ನು ಪಠ್ಯದಲ್ಲಿ ಅಳವಡಿಸಲು ಸರ್ಕಾರ ತೊಡಗಿದೆ. ನೀವೆಲ್ಲ ಗುಲಾಮರು ಎಂದು ಕಿಡಿಕಾರಿದರು.  ನಂತರ ಭಗವಾನ್ ಪರ ಮತ್ತು ವಿರೋಧ ಕುರಿತು ಸಭಿಕರು ಗದ್ದಲ ಎಬ್ಬಿಸಿದರು. ಪೊಲೀಸರು ಮಧ್ಯಪ್ರವೇಶ ಮಾಡಿ ಬಿಗಿಭದ್ರತೆಯಲ್ಲಿ ಭಗವಾನ್ ಅವರನ್ನು ಕರೆದುಕೊಂಡು ಹೋದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com