ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಎಸ್.ಪ್ರಕಾಶ್ ಅವರು, ಪ್ರಕಾಶ್ ರಾಜ್ ಅವರು ಹುಸಿ-ಉದಾರವಾದಿ ವ್ಯಕ್ತಿಯಂತೆ ವರ್ತಿಸುತ್ತಿದ್ದಾರೆ. ಗೌರಿ ಲಂಕೇಶ್ ಅವರ ಹತ್ಯೆಯಾಗಿ 1 ತಿಂಗಳು ಕಳೆಯುತ್ತಿದೆ. ಆದರೂ, ಹತ್ಯೆ ಕುರಿತಂತೆ ಸಣ್ಣ ಸುಳಿವು ಕೂಡ ದೊರಕಿಲ್ಲ. ಕಲಬುರ್ಗಿಯವರ ಹತ್ಯೆಯಾಗಿ 2 ವರ್ಷ ಕಳೆದಿದೆ. ಈಗಲು ಹಂತಕರು ಯಾರೆಂಬುದು ತಿಳಿದಿಲ್ಲ. ಪರಿಸ್ಥಿತಿ ಹೀಗಿರುವಾಗ ಕರ್ನಾಟಕ ಸರ್ಕಾರದ ವಿರುದ್ಧ ಒಂದು ಮಾತನ್ನೂ ಆಡದ ಪ್ರಕಾಶ್ ರಾಜ್ ಅವರು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.