ರವಾಂದಾದಲ್ಲಿ ಹಕ್ಕಿ ಪಿಕ್ಕಿ ಜನಾಂಗಕ್ಕೆ ಸೇರಿದ 11 ಜನರ ಬಂಧನ

ಶಿವಮೊಗ್ಗ ತಾಲ್ಲೂಕಿನ ಸದಾಶಿವಪುರ ಗ್ರಾಮ ಹಕ್ಕಿ ಪಿಕ್ಕಿ ಬುಡಕಟ್ಟಿನ ಹನ್ನೊಂದು ಜನರನ್ನು ರವಾಂದಾದಲ್ಲಿ ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ..
ರುವಾಂಡಾದಲ್ಲಿ ಬಂಧಿಸಲ್ಪಟ್ಟ ಬುಡಕಟ್ಟಿನವರ ವಾಟ್ಸ್ ಅಪ್ ಚಿತ್ರ
ರುವಾಂಡಾದಲ್ಲಿ ಬಂಧಿಸಲ್ಪಟ್ಟ ಬುಡಕಟ್ಟಿನವರ ವಾಟ್ಸ್ ಅಪ್ ಚಿತ್ರ
Updated on
ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನ ಸದಾಶಿವಪುರ ಗ್ರಾಮ ಹಕ್ಕಿ ಪಿಕ್ಕಿ ಬುಡಕಟ್ಟಿನ ಹನ್ನೊಂದು ಜನರನ್ನು ರವಾಂದಾದಲ್ಲಿ ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.. 
ಅ.4 ರಂದು ಇವರನ್ನು ಬಂಧಿಸಿದ್ದರೂ ಸಹ ಬಂಧಿತರ ಕುಟುಂಬ ಸದಸ್ಯರು ಸಹಾಯಕ್ಕಾಗಿ ಕೇಂದ್ರ ಸರ್ಕಾರವನ್ನು  ಸಂಪರ್ಕಿಸಿದ ಬಳಿಕ ಘಟನೆ ಕುರಿತ ಮಾಹಿತಿ ಹೊರಬಿದ್ದಿದೆ.
ಕುಟುಂಬ ಸದಸ್ಯರು ಕೇಂದ್ರ ಕಮಿಷನರ್ ಮತ್ತು ಪೋಲಿಸ್ ಮೇಲ್ವಿಚಾರಕರ ಮುಖಾಂತರ ವಿದೇಶಾಂಗ ಸಚಿವಾಲಯಕ್ಕೆ ಮನವಿಯನ್ನು ಸಲ್ಲಿಸಿದರು. 
"ನಾವು ಬಂಧಿತರಾದ ನಮ್ಮವರೊಡನೆ ಸಂಪರ್ಕ ಕಳೆದುಕೊಂಡಿದ್ದೇವೆ. ಪೊಲೀಸರು ಅವರ ಸೆಲ್ ಪೋನ್ ಗಳನ್ನು ವಶಕ್ಕೆ ಪಡೆದಿರಬಹುದು" ಎಂದು ಬಂಧಿತ ರಲ್ಲಿ ಒಬ್ಬರಾದ ರಾಜಾ ಬಾಬು ಅವರ ತಂದೆ ನಾಸಿಕ್ ಬಾಬು ಹೇಳಿದ್ದಾರೆ. ಬಂಧಿತರಾದ ಬುಡಕಟ್ಟು ಜನರ ಪೈಕಿ ಓರ್ವನಾದ ರಂಜ್ಯಾನ್, ತಮ್ಮ ಫೋಟೋವನ್ನು ವಾಟ್ಸ್ ಅಪ್ ನಲ್ಲಿ ನಲ್ಲಿ ಬುಡಕಟ್ಟು ನಾಯಕ ಸಿದ್ದಪ್ಪ ಎನ್ನುವವರಿಗೆ ಕಳಿಸಿದ್ದನು. 
"ನಮ್ಮ ಜನರು 10-15 ವರ್ಷಗಳಿಂದಲೂ ಆಫ್ರಿಕನ್ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ನಾವು ಅನಕ್ಷರಸ್ಥರಾದರೂ, ಅಗತ್ಯ ದಾಖಲೆಗಳನ್ನು ಹೊಂದಿದ್ದೇವೆ. ನಮಗೆ ಇಲ್ಲಿ ಯಾವುದೇ ಉದ್ಯೋಗವಿಲ್ಲದ ಕಾರಣ  ನಮಗೆ ತಿಳಿದ ಕೆಲ ಔಷಧಿಗಳನ್ನು ವಿತರಿಸುವ ಮೂಲಕ ಹಣ ಗಳಿಸಲು ವಿದೇಶಕ್ಕೆ ತೆರಳುತ್ತೇವೆ. ಹೀಗೆ ವಿದೇಶಕ್ಕೆ ತೆರಳುವಾಗಲೂ ಅವರೆಲ್ಲಾ ತಮ್ಮ ಪತ್ನಿಯರೊಡನೆ ತೆರಳುತ್ತಾರೆ" ನಾಸಿಕ್ ಬಾಬು ಹೇಳಿದರು.
ಬಂಧಿತರಾದ ಎಲ್ಲ 11 ಜನರಲ್ಲಿಯೂ ಪಾಸ್ ಪೋರ್ಟ್, ವೀಸಾ ಮತ್ತು ಇತರ ಅಗತ್ಯ ದಾಖಲೆಗಳಿವೆ ಎಂದು ಸಿದ್ದಪ್ಪ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಹಕ್ಕಿ-ಪಿಕ್ಕಿ ಬುಡಕಟ್ಟು ಜನಾಂಗದವರು 'ವಲಸೆ ಜನಾಂಗದವರಾಗಿದ್ದು ' ಅವರು ಸರ್ಡಾಶಿವಪುರ ಹಳ್ಳಿಯಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದಾರೆ. ಸರ್ಕಾರ ಅವರಿಗೆ ಪುನರ್ವಸತಿ ಕಲ್ಪಿಸಿ ಕೊಟ್ಟಿದೆ. ಈಗ ಗ್ರಾಮವು ಕನಿಷ್ಠ 1,500 ಕುಟುಂಬಗಳನ್ನು ಹೊಂದಿದೆ. ಹಕ್ಕಿ ಪಿಕ್ಕಿ ಬುಡಕಟ್ಟು ಜನರು ದಶಕಗಳಿಂದಲೂ ಆಫ್ರಿಕನ್ ದೇಶಗಳಿಗೆ ವ್ಯಾಪಾರಕ್ಕಾಗಿ ಭೇಟಿ ನೀಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com