ಅಪರಿಚಿತರು ತಮ್ಮ ಪತಿಯ ಇ-ಫೈಲಿಂಗ್ ಖಾತೆಯನ್ನು ಹ್ಯಾಕ್ ಮಾಡಿ ತಮ್ಮ, ತಮ್ಮ ಪತಿಯ ಹಾಗೂ ಮಗಳ ಪಾಸ್ ವರ್ಡ್ ಗಳನ್ನು ಬದಲಾಯಿಸಿದ್ದಾರೆ. ಆರೋಪಿಗಳು ತಮ್ಮ ಖಾಸಗಿ ಮತ್ತು ಹಣಕಾಸಿನ ದಾಖಲೆಗಳನ್ನು ಕೂಡ ಕದ್ದಿದ್ದು ಆದಾಯ ತೆರಿಗೆ ಐಡಿ, ಮೊಬೈಲ್ ಸಂಖ್ಯೆ ಮತ್ತು ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ನಲ್ಲಿದ್ದ ಪ್ಯಾನ್ ಸಂಖ್ಯೆಯನ್ನು ಕೂಡ ಬದಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.