ಗರ್ಭಿಣಿಯರಿಗೆ ಅಡುಗೆ ಮಾಡಿ ಬಡಿಸಲು ಅಂಗನವಾಡಿ ಕೇಂದ್ರಗಳು ಸೂಕ್ತವಾಗಿಲ್ಲ: ನೌಕರರು

ರಾಜ್ಯ ಸರ್ಕಾರ ಜಾರಿಗೆ ತಂದ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಮತ್ತು ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಲು  ಅಂಗನವಾಡಿ ಕೇಂದ್ರಗಳು ಸೂಕ್ತವಲ್ಲ ಎಂದು ಅಂಗನವಾಡಿ ನೌಕರರ ಸಂಘದ ಸದಸ್ಯರು ಹೇಳಿದ್ದಾರೆ.
ಕರ್ನಾಟಕದಲ್ಲಿರುವ ಒಟ್ಟು 65,911 ಅಂಗನವಾಡಿ ಕೇಂದ್ರಗಳಲ್ಲಿ ಕೇವಲ 34,000 ಅಂಗನವಾಡಿ ಕೇಂದ್ರಗಳು ಸರ್ಕಾರದ ಸುಪರ್ದಿಯಲ್ಲಿದೆ. ಗರ್ಭಿಣಿಯರು ಊಟ ತಯಾರಿಸುವ ಸೌಲಭ್ಯ, ವಾತಾವರಣ ಇಲ್ಲಿಲ್ಲ. ಈ ಅಂಗನವಾಡಿ ಕೇಂದ್ರಗಳಲ್ಲಿ ಕೆಲವು ಶಿಥಿಲವಾಗಿದ್ದು, ಇನ್ನು ಕೆಲವು ಅಸ್ತವ್ಯಸ್ತಗೊಂಡಿವೆ. ಇಲ್ಲಿ ಕುರ್ಚಿಗಳಿಲ್ಲ, ಮೇಜಿನ ವ್ಯವಸ್ಥೆಯಿಲ್ಲ, ನಾವು ಊಟ ಬಡಿಸುವುದು ಹೇಗೆ? ಅವರನ್ನು ನೆಲದ ಮೇಲೆ ಕುಳಿತು ಊಟ ಮಾಡಿ ಎಂದು ಹೇಳಲು ಆಗುವುದಿಲ್ಲ ಎನ್ನುತ್ತಾರೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಒಕ್ಕೂಟದ ಅಧ್ಯಕ್ಷ ಜಿ.ಆರ್.ಶಿವಶಂಕರ್.
ಈ ಮೊದಲು ರಾಜ್ಯ ಸರ್ಕಾರ ಗರ್ಭಿಣಿಯರಿಗೆ ತಿಂಗಳಿಗೊಮ್ಮೆ ನೀಡುತ್ತಿದ್ದ ಅಕ್ಕಿ, ಗೋಧಿ, ಹಸಿರು ಕಾಳು ಮತ್ತು ಬೆಲ್ಲವೇ ಸೂಕ್ತವಾಗಿದೆ. ಇದೀಗ ಮಾತೃ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಹಾಲು, ಮೊಟ್ಟೆ ಮತ್ತು ಕಡಲೆ ಬೀಜ ನೀಡಬೇಕಾಗುತ್ತದೆ. ಇದನ್ನು ಸಂಗ್ರಹಿಸಲು ಮತ್ತು ಪೂರೈಸಲು ಸೂಕ್ತ ವ್ಯವಸ್ಥೆ ಅಂಗನವಾಡಿಗಳಲ್ಲಿ ಇರುವುದಿಲ್ಲ. ಅದರ ಬದಲಿಗೆ ಗರ್ಭಿಣಿಯರಿಗೆ ಮನೆಗೆ ಕೊಂಡೊಯ್ಯಲು ಹಾಲಿನ ಪುಡಿ, ಕಡಲೆ ಬೀಜ ಮತ್ತು ಮೊಟ್ಟೆ ಖರೀದಿಸಲು ಅವರ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿದರೆ ಒಳ್ಳೆಯದು, ಮಾತೃಪೂರ್ಣ ಯೋಜನೆಯನ್ನು ಹಿಂತೆಗೆದುಕೊಳ್ಳಬೇಕೆಂದು ಅಂಗನವಾಡಿ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ನಾಗರತ್ನಮ್ಮ ಒತ್ತಾಯಿಸಿದ್ದಾರೆ,
ಮಧ್ಯಾಹ್ನದ ಊಟಕ್ಕೆಂದು ಗರ್ಭಿಣಿಯರು ಅಂಗನವಾಡಿಗೆ ಹೋಗಬೇಕಾಗಿರುವುದಲ್ಲದೆ ಅಂಗನವಾಡಿಗಳಲ್ಲಿ ಆಹಾರ ನೀಡಲು ಆರಂಭಿಸಿದರೆ ಅದು ಕ್ಯಾಂಟೀನ್ ಆಗಿ ಪರಿವರ್ತನೆಯಾಗುತ್ತದೆ. ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರಿಗೆ ಇನ್ನಷ್ಟು ಹೊರೆ ಬೀಳುತ್ತದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರು ಮತ್ತು ಸಹಾಯಕಿಯರ ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷ್ಮಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com