ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಕನ್ನಡ ನಾಡಭಕ್ತಿಗೀತೆ

ಬೆಂಗಳೂರಿನ ಕೆಲವು ಮೆಟ್ರೋ ಸ್ಟೇಷನ್ ಗಳಲ್ಲಿ ಸಂಗೀತ ಹಾಗೂ ಹಕ್ಕಿಗಳ ಕಲರವವನ್ನು ಪ್ರಸಾರ ಮಾಡುತ್ತಿದ್ದ ನಮ್ಮ ಮೆಟ್ರೋ ಈಗ ಹಸಿರು ಮತ್ತು ನೇರಳೆ ಬಣ್ಣದ ಲೈನ್ ಸ್ಟೇಷನ್ ಗಳಲ್ಲಿ ಕನ್ನಡ
ನಮ್ಮ ಮೆಟ್ರೋ ನಿಲ್ದಾಣ
ನಮ್ಮ ಮೆಟ್ರೋ ನಿಲ್ದಾಣ
ಬೆಂಗಳೂರು: ಬೆಂಗಳೂರಿನ ಕೆಲವು ಮೆಟ್ರೋ ಸ್ಟೇಷನ್ ಗಳಲ್ಲಿ ಸಂಗೀತ ಹಾಗೂ ಹಕ್ಕಿಗಳ ಕಲರವವನ್ನು ಪ್ರಸಾರ ಮಾಡುತ್ತಿದ್ದ ನಮ್ಮ ಮೆಟ್ರೋ ಈಗ ಹಸಿರು ಮತ್ತು ನೇರಳೆ ಬಣ್ಣದ ಲೈನ್ ಸ್ಟೇಷನ್ ಗಳಲ್ಲಿ ಕನ್ನಡ ದೇಶಭಕ್ತಿಗೀತೆಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿದೆ. 
ನಮ್ಮ ಮೆಟ್ರೋದ ಈ ಹೊಸ ಪ್ರಯೋಗಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನಮ್ಮ ಮೆಟ್ರೋ ಸ್ಟೇಷನ್ ನಲ್ಲಿ ಕನ್ನಡ ಹಾಡನ್ನು ಪ್ರಸಾರ ಮಾಡಲಾಗುತ್ತಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಗತಿಸಿದ್ದಾರೆ.  ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಬಿಎಂಆರ್ ಸಿಎಲ್ ನ ಯುಎ ವಸಂತ್ ರಾವ್ ಮಾತನಾಡಿದ್ದು, ಪ್ರಾಯೋಗಿಕವಾಗಿ ವಿವಿಧ ರೀತಿಯ ಸಂಗೀತವನ್ನು ಪ್ರಸಾರ ಮಾಡಲಾಗುತ್ತಿದೆ. ಮೆಟ್ರೋ ಪ್ರಯಾಣಿಕರ ಪ್ರತಿಕ್ರಿಯೆಯನ್ನು ಪಡೆಯಲು ಯತ್ನಿಸಲಾಗುತ್ತಿದೆ. ಸಿನಿಮಾ ಸಂಗೀತದ ಹೊರತಾದ ಸಂಗೀತವನ್ನಷ್ಟೇ ಮೆಟ್ರೋ ನಿಲ್ದಾಣಗಳಲ್ಲಿ ಪ್ರಸಾರ ಮಾಡಲಾಗುವುದು, ನ.1 ರಿಂದ ಪೂರ್ಣ ಪ್ರಮಾಣದಲ್ಲಿ ಈ ರೀತಿಯ ಸಂಗೀತವನ್ನು ಮೆಟ್ರೋ ನಿಲ್ದಾಣದಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com